ಜುಲೈ 9 ಬುಧವಾರ ಕರ್ನಾಟಕ ಬಂದ್ ಸಾಧ್ಯತೆ, ರಜೆ ಘೋಷಣೆ ಬಗ್ಗೆ... Karnataka Bandh
ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಹೋರಾಟಗಳು & ಪ್ರತಿಭಟನೆ ನಡೆಯುತ್ತಲೇ ಇವೆ. ಅದರಲ್ಲೂ ಕಳೆದ ತಿಂಗಳು ಕನ್ನಡಿಗರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ತಮಿಳು ನಟ ಕಮಲ್ ಹಾಸನ್ ವಿರುದ್ಧವೇ ದೊಡ್ಡ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ತಮಿಳು ನಟ ಕಮಲ್ ಹಾಸನ್ ವಿರುದ್ಧ ಹೋರಾಟ ನಡೆಸಲು ಕರ್ನಾಟಕ ಬಂದ್ & ಬೆಂಗಳೂರು ಬಂದ್ ಮಾಡುವ ಚಿಂತನೆ ನಡೆದಿತ್ತು. ಆದರೆ ಕನ್ನಡಪರ ಸಂಘಟನೆ ಮುಖಂಡರು ಬಂದ್ ಬೇಡ ಎಂದಿದ್ದರು. ಆದರೆ ಈಗ ಸಂಚಲನ ಸೃಷ್ಟಿಸುವ ಸುದ್ದಿಯೊಂದು ಸಿಕ್ಕಿದೆ... ಹೀಗಿದ್ದಾಗಲೇ, ಜುಲೈ 9 ಬುಧವಾರ ಕರ್ನಾಟಕ ಬಂದ್ ಸಾಧ್ಯತೆ, ರಜೆ ಘೋಷಣೆ ಬಗ್ಗೆ...
ಕರ್ನಾಟಕ & ಕನ್ನಡಿಗರ ತಂಟೆಗೆ ಯಾರೇ ಬಂದರೂ ಅವರನ್ನ ಬಿಡುವ ಮಾತೇ ಇಲ್ಲ, ಯಾಕೆ ಅಂದರೆ ಕನ್ನಡಿಗರು, ಅಂತಹ ದುರಹಂಕಾರ ತೋರಿಸುವ ವ್ಯಕ್ತಿಗಳಿಗೆ ಸರಿಯಾಗೇ ಬುದ್ಧಿ ಕಲಿಸುತ್ತಾರೆ. ಈಗಾಗಲೇ ಕನ್ನಡಿಗರ ತಂಟೆಗೆ ಬಂದು & ಕನ್ನಡದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ತಮಿಳು ನಟ ಕಮಲ್ ಹಾಸನ್‌ಗೆ ಸರಿಯಾಗಿ ಪಾಠ ಕಲಿಸಲಾಗಿದೆ. ಹಾಗೇ ಬೇರೆ ಬೇರೆ ನಟರಿಗೂ ಬುದ್ಧಿ ಕಲಿಸಿದ್ದು, ಕಳೆದ ತಿಂಗಳು ಅಂದ್ರೆ 2025 ಜೂನ್ ಮೊದಲ ವಾರದಲ್ಲೇ ಕರ್ನಾಟಕ ಬಂದ್ ಮಾಡಲು ಚಿಂತನೆ ನಡೆದಿತ್ತು. ಆದರೂ ಕೊನೆಗೆ ಬಂದ್ ಘೋಷಣೆ ಆಗಲಿಲ್ಲ... ಆದರೆ ಇದೀಗ 2025 ಜುಲೈ 2ನೇ ವಾರ ಕರ್ನಾಟಕದಲ್ಲಿ ಬಂದ್ ವಾತಾವರಣ ಸೃಷ್ಟಿಯಾಗಿ ರಜೆ ಘೋಷಣೆ ಪರಿಸ್ಥಿತಿ ಉಂಟಾಗಿದೆ!

ಜುಲೈ 9 ಬುಧವಾರ ರಜೆ ಘೋಷಣೆ ಬಗ್ಗೆ...
ಹೌದು, ಕರ್ನಾಟಕದಲ್ಲಿ ಇದೀಗ ಬಂದ್ ವಾತಾವರಣ ನಿರ್ಮಾಣವಾಗಿದೆ. ನಾಳೆ ಅಂದ್ರೆ ಜುಲೈ 9 ಬುಧವಾರ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ, ಕರ್ನಾಟಕದ ಮೂಲೆ ಮೂಲೆಯಲ್ಲೂ ಬೃಹತ್ ಹೋರಾಟ ನಡೆಸಿ ಪ್ರತಿಭಟನೆ ನಡೆಸಲು ಕಾರ್ಮಿಕ ಸಂಘಟನೆಗಳು ಸಜ್ಜಾಗಿವೆ. ಕಾರ್ಮಿಕರಿಗೆ ಅನ್ಯಾಯ ಆಗುತ್ತಿದೆ, ಈ ಬಗ್ಗೆ ಸರ್ಕಾರ ಮತ್ತು ರಾಜಕಾರಣಿಗಳು ಗಮನ ಹರಿಸುತ್ತಿಲ್ಲ ಅಂತಾ ಕಾರ್ಮಿಕರು ಬೃಹತ್ ಹೋರಾಟಕ್ಕಾಗಿ ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ಜುಲೈ 9 ಬುಧವಾರ ಕರ್ನಾಟಕ ಬಂದ್ ಸಾಧ್ಯತೆ & ರಜೆ ಘೋಷಣೆ ಬಗ್ಗೆ ಚರ್ಚೆ ಕೂಡ ಜೋರಾಗಿದೆ.
ದಿಢೀರ್ ರಜೆ ಘೋಷಣೆ ಆಗುತ್ತಾ?
ದೇಶದಲ್ಲಿ ಕಾರ್ಮಿಕರ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ, ಹಾಗೇ ಕಾರ್ಮಿಕರು ಹೋರಾಟ ಮಾಡುತ್ತಾರೆ ಅಂದರೆ ದೊಡ್ಡ ಪ್ರತಿಭಟನೆ & ಭಾರತ ಬಂದ್ ಆಗುವುದು ಕೂಡ ಗ್ಯಾರಂಟಿ. ಹೀಗಿದ್ದಾಗಲೇ ಇದೀಗ ಮತ್ತೊಮ್ಮೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಲು & ಆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲು ಸಜ್ಜಾಗಿವೆ. ಇದೇ ಕಾರಣಕ್ಕೆ ಜುಲೈ 9 ಬುಧವಾರ ದೇಶದ ಮೂಲೆ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯಲಿವೆ. ಮತ್ತೊಂದು ಕಡೆ ಬಸ್ & ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸೇರಿದಂತೆ, ಫ್ಯಾಕ್ಟರಿಗಳು ಹಾಗೂ ಮೂಲ ಸೌಲಭ್ಯ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಾಸ ಆಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಜುಲೈ 9 ರಜೆ ಘೋಷಣೆ ಸಾಧ್ಯತೆ ಕೂಡ ಇದೀಗ ದಟ್ಟವಾಗಿದೆ. ಆದರೆ ಜುಲೈ 8 ಮಂಗಳವಾರ ಸಂಜೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ...
ರಜೆ ಸಿಗುತ್ತಾ? ರಜೆ ಸಿಗಲ್ವಾ?
ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಈವರೆಗೂ ಯಾವುದೇ ಶಾಲೆಗಳಲ್ಲಿ ಅಧಿಕೃತವಾಗಿ ರಜೆ ಘೋಷಣೆ ಆಗಿಲ್ಲ, ಆದರೆ ಪ್ರತಿಭಟನೆ ಬಿಸಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಮತ್ತೊಂದು ಕಡೆ ಶಾಲಾ ಒಕ್ಕೂಟಗಳು ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿವೆ. ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ, ಆದರೂ ಸರ್ಕಾರಿ & ಖಾಸಗಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತೆ ಅಂತಾ ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ. ಮತ್ತೊಂದು ಕಡೆಯಲ್ಲಿ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆ ಬಂದ್‌ಗೆ ಬೆಂಬಲ ಇಲ್ಲ ಅಂತಾ ತಿಳಿಸಿದ್ದು, ಈ ಬಗ್ಗೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಇನ್ನೊಂದು ಕಡೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಶಿಕ್ಷಣ ಇಲಾಖೆಯಿಂದ ಸಿಕ್ಕಿಲ್ಲ, ಹೀಗಾಗಿ ಪೋಷಕರು & ಮಕ್ಕಳು ಕಾಯುವಂತೆ ಆಗಿದೆ.












Click it and Unblock the Notifications