ಮಳೆ.. ಮಳೆ.. ಭಾರಿ ಮಳೆಗೆ ನಿಟ್ಟುಸಿರು ಬಿಟ್ಟ ಕನ್ನಡಿಗರು!

ಮಳೆ ಇಲ್ಲದೆ ಕನ್ನಡಿಗರು ನರಳಾಡಿ ಹೋಗಿದ್ದಾರೆ, ಅದರಲ್ಲೂ ಹಳ್ಳಿಗಳಲ್ಲಿ ಕೆರೆ & ಕುಂಟೆ ಬತ್ತಿ ಹೋಗಿ ಬರಡು ಭೂಮಿಯಾಗಿ ಬದಲಾಗಿವೆ. ಇದರ ಜೊತೆಗೆ ಬಿಸಿಲಿನ ಝಳ ಹೆಚ್ಚಾಗಿ ಏನು ಮಾಡಬೇಕು ಅಂತಾ ಕನ್ನಡಿಗರು ಪರಿತಪಿಸುವ ಸಮಯದಲ್ಲೇ ಭರ್ಜರಿ ಮಳೆ ಬಂದು ಭೂಮಿ ತಂಪಾಗಿದೆ. ಹಾಗಾದರೆ, ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಳೆ ಬಿದ್ದಿದೆ? ಇನ್ನು ಮುಂದಿನ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆ ಬೀಳಬಹುದು? ಬನ್ನಿ ತಿಳಿಯೋಣ.

ಮುಂಗಾರು ಮಳೆ ಕೈಕೊಟ್ಟ ಕಾರಣ 2023ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನರು ಪರದಾಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024ರ ಬೇಸಿಗೆ ಆರಂಭಕ್ಕೆ ಮೊದಲೇ ದೊಡ್ಡ ತಲೆನೋವು ಶುರುವಾಗಿದ್ದು, ಕುಡಿವ ನೀರು ಒದಗಿಸಲು ಸರ್ಕಾರ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಶುರುವಾಗಿದೆ. ಇದೆಲ್ಲವನ್ನೂ ಮಳೆಯ ದೇವರು ಅಂದ್ರೆ ವರುಣ ಕೇಳಿಸಿಕೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಿದೆ.

Heavy Rain This City In Karnataka Has Received Heavy Rain On 24 March 2024

ಕರ್ನಾಟಕದಲ್ಲಿ ಮಳೆ ಆರ್ಭಟ!

ಹೌದು ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ, ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಬಿಸಿಲು ಕಾಡುತ್ತಿದೆ. ಹೀಗಿದ್ದಾಗ ಕರ್ನಾಟಕದ ವಿದ್ಯಾಕಾಶಿ ಧಾರವಾಡ & ಹುಬ್ಬಳ್ಳಿಯಲ್ಲಿ ಭಾರಿ ಮಳೆ ತಂಪೆರದಿದೆ.

ಬಿಸಿಲಿನಿಂದ ಬಳಲಿದ್ದ ಜನರಿಗೆ ಇಂದು ತಂಪೇರಿದ ಮಳೆ, ಹುಬ್ಬಳ್ಳಿ ಜನರನ್ನು ಖುಷಿಪಡಿಸಿದೆ. ಕಳೆದ ಕೇಲ ದಿನಗಳಿಂದ ಭಾರಿ ಬಿಸಿಲಿಗೆ ಹುಬ್ಬಳ್ಳಿಯ ಜನರು ತತ್ತರಿಸಿದ್ದರು. ಇಂದು ಮಳೆಯ ಆಗಮನ ಆಗಿದ್ದು, ಹುಬ್ಬಳ್ಳಿಯ ದೇಶಪಾಂಡೆ ನಗರ ಕೊಪ್ಪೀಕರ, ಜನತಾ ಜಜಾರ್ ಮುಂತಾದ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ಹಾಗೇ ಮುಂದಿನ ಕೆಲವು ಗಂಟೆಗಳ ಕಾಲ, ಮತ್ತಷ್ಟು ಪ್ರದೇಶದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಇನ್ನುಳಿದಂತೆ ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಮಳೆ ಬರಲಿದೆ ಗೊತ್ತೆ? ಮುಂದೆ ಓದಿ.

Heavy Rain This City In Karnataka Has Received Heavy Rain On 24 March 2024

ಕನ್ನಡಿಗರಿಗೆ ತಂಪೆರದ ಮಳೆ

ಕರ್ನಾಟಕದ ಹಾಸನ, ಕೊಡಗು ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆಯು ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆ ಪೆಣಂಬೂರಲ್ಲಿ ಶನಿವಾರ ಮಳೆ ಬಂದಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ಮುಂದುವರಿದಿದೆ. ಆದರೂ, ಮುಂದಿನ ಕೆಲವು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿಯ ಪ್ರದೇಶಗಳು ಸೇರಿ ಈಗ ಉತ್ತರ ಕನ್ನಡ, ದಕ್ಷಿಣ ಕನ್ನಡ & ಉಡುಪಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಹಲವೆಡೆ ಲಘು ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

ಒಟ್ನಲ್ಲಿ ಮಳೆ ಇಲ್ಲದೆ ಪರಿಸ್ಥಿತಿ ಭೀಕರವಾಗಿದೆ, ಜನ ಕೂಡ ಉಸಿರು ಬಿಗಿಹಿಡಿದು ಮಳೆ ಬೀಳಲಿ ಅಂತಾ ಕಾಯುತ್ತಿದ್ದಾರೆ. ಹೀಗಿದ್ದಾಗಲೇ ಸಿಹಿಸುದ್ದಿ ಸಿಗಲಿ ದೇವರೇ ಅಂತಾನೂ ಮಳೆರಾಯನ ಮೊರೆ ಹೋಗಿದ್ದಾರೆ ಕನ್ನಡಿಗರು. ಈ ನಡುವೆ ಜನರ ಪ್ರಾರ್ಥನೆಗೋ ಅಥವಾ ವಾತಾವರಣ ಬದಲಾವಣೆಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗೇ ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದ್ದು, ಬೇಸಿಗೆಯ ಬಿಸಿಲಿನಿಂದ ಮುಕ್ತಿ ಸಿಗಲಿ ದೇವರೆ ಅಂತಾ ಜನರು ಬೇಡಿಕೊಳ್ಳುತ್ತಿದ್ದಾರೆ.

ರೈತರ ಮೊಗದಲ್ಲಿ ಕೊನೆಗೂ ಸಂತಸ?

ಕಳೆದ 4-5 ವರ್ಷದಿಂದ ಬೆಂಗಳೂರು ಮತ್ತು ಕರ್ನಾಟಕದ ಜನ ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ಅದರಲ್ಲೂ ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಮಸ್ಯೆ ಕೊಟ್ಟಿತ್ತು. ಆದರೆ ಕಳೆದ ವರ್ಷ ಮಳೆಯೇ ನಾಪತ್ತೆ. ಬೇಸಿಗೆ ಸಮಯದಲ್ಲಿ ಬಿದ್ದ ಒಂದೆರಡು ಮಳೆ ಮಾತ್ರ ಬೆಂಗಳೂರಿಗೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಮಳೆಯ ಸಮಯ ಜೂನ್ ತಿಂಗಳಲ್ಲೇ ಬೆಂಗಳೂರಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಮುಂದೆ ಅಲ್ಪಸ್ವಲ್ಪ ಮಳೆ ಬಿದ್ದರೂ ಬೇಸಿಗೆಯಲ್ಲಿ ಬಾರಿ ಬರ ಬಂದಿದೆ. ಹೀಗಿದ್ದಾಗಲೇ ಕನ್ನಡಿಗರು ಕರ್ನಾಟಕದಲ್ಲಿ ಮಳೆ ಬೀಳಲಿ ಅಂತಾ ದೇವರಲ್ಲಿ ಬೇಡುವಾಗಲೇ, ಕರ್ನಾಟಕದಲ್ಲಿ ಮಳೆಯ ಆರ್ಭಟ ಮೆಲ್ಲಗೆ ಶುರುವಾಗುತ್ತಿದೆ. ಹೀಗಾಗಿ ನೀರೇ ಇಲ್ಲದೆ ಪರದಾಡಿದ್ದ ರೈತರು ಕೊನೆಗೂ ನಿಟ್ಟುಸಿರು ಬಿಟ್ಟು, ವರುಣ ದೇವನಿಗೆ ಕೈಮುಗಿಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+