Heavy Rain: ಮಳೆ.. ಮಳೆ.. ಭಾರಿ ಮಳೆಗೆ 100 ಜನ ಬಲಿ!

ಮಳೆಯ ಅಬ್ಬರ ಜೋರಾಗಿದ್ದು, ಭಾರಿ ಮಳೆಯ ಪರಿಣಾಮ ಜನ ನಲುಗಿ ಹೋಗಿದ್ದಾರೆ. ಈ ಬಿರು ಬೇಸಿಗೆ ಸಮಯದಲ್ಲೂ ವರುಣದೇವ ಅಬ್ಬರಿಸಿದ ಪರಿಣಾಮ ಹಲವರ ಜೀವವೇ ಹೋಗಿ, ನರಳಾಡುವ ಪರಿಸ್ಥಿತಿ ಎದುರಾಗಿದೆ. ದಿಢೀರ್ ಸುರಿದ ಭಾರಿ ಮಳೆ ಪರಿಣಾಮ, ಜನರಿಗೆ ಏನನ್ನ ಮಾಡಬೇಕು? ಅನ್ನೋದೆ ತಿಳಿಯದಾಗಿದೆ.

ಎಲ್ಲಾ ಕಡೆಯೂ ಒಣ ಭೂಮಿ ಕಾಣುತ್ತಿದೆ ಮಳೆ ಇಲ್ಲದೆ ಭೂಮಿ ಸಂಪೂರ್ಣ ಒಣಗಿ ಹೋಗಿ ಜನರು ಪರದಾಡುತ್ತಿದ್ದಾರೆ. ಇದೆಲ್ಲವೂ ಮನುಷ್ಯ ಮಾಡುತ್ತಿರುವ ಎಡವಟ್ಟು & ಅಹಂಕಾರದ ಫಲಿತಾಂಶ ಎನ್ನಬಹುದು. ಹೀಗಾಗಿಯೆ, ಬೇಸಿಗೆ ಆರಂಭದ ಸಮಯದಲ್ಲೇ ನೀರೇ ಇಲ್ಲದೆ ಜನ ಪರದಾಡಿದರು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟವು ಶುರು ಆಗಿದ್ದು, ಭರ್ಜರಿ ಮಳೆ ಬೀಳುತ್ತಿದೆ. ಅದೇ ರೀತಿ ಇಂದು ಕೂಡ ಭಾರಿ ಮಳೆಯಾಗಿದ್ದು, ಇಲ್ಲೊಂದು ಜಾಗದಲ್ಲಿ ಭಾರಿ ಮಳೆಯ ಹಿನ್ನೆಲೆ 100 ಜನ ಜೀವ ಕಳೆದುಕೊಂಡಿದ್ದಾರೆ.

Heavy Rain Started In These Places On 18th Of April 2024

ಮಳೆಗೆ ಬಲಿಯಾದರು 100 ಜನ

ಅಷ್ಟಕ್ಕೂ ಇದೀಗ ಭಾರಿ ಮಳೆಯ ಪರಿಣಾಮ 100ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಜಾಗ ಪಾಕಿಸ್ತಾನದಲ್ಲಿ ಇದೆ. ಪಾಕಿಸ್ತಾನ ವಾಯವ್ಯ ದಿಕ್ಕಿನಲ್ಲಿ ಇರುವ ಖೈಬರ್‌ ಪಖ್ತೂಂಖ್ವಾ ಭಾಗದಲ್ಲಿ ಇಂತಹ ಭೀಕರ ಘಟನೆ ಸಂಭವಿಸಿದೆ. ದಿಢೀರ್ ಸುರಿದ ಭಾರಿ ಮಳೆಯ ಪರಿಣಾಮ ಈ ರೀತಿಯ ಘಟನೆ ಸಂಭವಿಸಿದ್ದು, ಜೀವ ಉಳಿಸಿಕೊಳ್ಳಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇ ಮುಂದಿನ ಕೆಲವು ಗಂಟೆಗಳ ಕಾಲ ಇದೇ ರೀತಿ ಭರ್ಜರಿ ಮಳೆ ಪಾಕಿಸ್ತಾನದಲ್ಲಿ ಬರುತ್ತದೆ ಎಂಬ ಎಚ್ಚರಿಕೆ ಸಂದೇಶ ನೀಡಲಾಗಿದೆ. ಹಾಗಾದ್ರೆ ಕರ್ನಾಟಕದಲ್ಲಿ ಮಳೆ ಹೇಗಿದೆ? ಯಾವೆಲ್ಲಾ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ? ಮುಂದೆ ಓದಿ.

Heavy Rain Started In These Places On 18th Of April 2024

ಕರ್ನಾಟಕದಲ್ಲಿ ಮಳೆಯ ಅಬ್ಬರ

ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರುವಾಗಿದೆ. ಆದರೆ ಬೆಂಗಳೂರಿನ ನೆಲಕ್ಕೆ ಮಾತ್ರ ಮಳೆರಾಯ ಇನ್ನೂ ಎಂಟ್ರಿಯನ್ನೇ ಕೊಟ್ಟಿಲ್ಲ. ಹೀಗಾಗಿ ಬೆಂಗಳೂರು ನಿವಾಸಿಗಳ ಪರಿಸ್ಥಿತಿ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಇಂದು ಕೂಡ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ, ಭಾರಿ ಮಳೆ ಬಿದ್ದಿದೆ. ಹಾಗೇ ಮುಂದಿನ 24 ಗಂಟೆ ಸಮಯದಲ್ಲಿ ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತದೆ ಎನ್ನಲಾಗಿದೆ. ಆದರೆ ಇನ್ನೂ ಬೆಂಗಳೂರಿನಲ್ಲಿ ಮಳೆಯ ಸುಳಿವು ಸಿಗುತ್ತಿಲ್ಲ. ಇದು ಬೆಂಗಳೂರಿನ ನಿವಾಸಿಗಳನ್ನ ಚಿಂತೆಗೀಡು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+