Rain News: ಮಳೆ.. ಮಳೆ.. ಭಾರಿ ಮಳೆ.. ಭರ್ಜರಿ ಮಳೆ!
ಕನ್ನಡಿಗರ ಮೇಲೆ ಮುನಿಸಿಕೊಂಡಿದ್ದ ವರುಣ ದೇವ ಈಗ ಒಂದಷ್ಟು ಕರುಣೆ ತೋರಿಸಿದ್ದು, ರಾಜ್ಯದಲ್ಲಿ ಬೇಸಿಗೆ ಬಿರು ಬಿಸಿಲಿನ ನಡುವೆ ಭಾರಿ ಮಳೆ ಶುರುವಾಗಿದೆ. ಅದರಲ್ಲೂ ಕನ್ನಡ ನಾಡಿನ ಮಲೆನಾಡು ಭಾಗ, ಕರಾವಳಿ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಇದೀಗ ಬಯಲು ಸೀಮೆ ಪ್ರದೇಶವಾದ ಉತ್ತರ ಕರ್ನಾಟಕದಲ್ಲಿ ಕೂಡ ಅಬ್ಬರಿಸಲು ಶುರು ಮಾಡಿದೆ. ಹಾಗಾದ್ರೆ ಕರ್ನಾಟಕದ ಯಾವ ಯಾವ ಭಾಗದಲ್ಲಿ ಮಳೆ ಬಂದಿದೆ?
4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನ ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ಅದ್ರಲ್ಲೂ ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಮಸ್ಯೆ ಕೊಟ್ಟಿತ್ತು ಆದರೆ ಕಳೆದ ವರ್ಷ ಮಳೆ ನಾಪತ್ತೆ. ಬೇಸಿಗೆ ಸಮಯದಲ್ಲಿ ಬಿದ್ದ ಒಂದೆರಡು ಮಳೆ ಮಾತ್ರ, ಬೆಂಗಳೂರಿಗೆ ತಂಪೆರದಿತ್ತು.

ಅದನ್ನೆಲ್ಲ ಬಿಟ್ಟು ಮುಂಗಾರು ಮಳೆಯ ಸಮಯ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಮಳೆ ಕೊರತೆ ಭಯ ಹುಟ್ಟಿಸಿತ್ತು. ಹೀಗಾಗಿ 2024ರ ಬೇಸಿಗೆ ಆರಂಭಕ್ಕೆ ಮೊದಲೇ ನೀರಿಗೆ ಕೊರತೆ ಉಂಟಾಗಿತ್ತು. ಜನರು ಹನಿ ಹನಿ ನೀರಿಗೂ ನರಳಿದ್ದರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ.
ಮಳೆ.. ಮಳೆ.. ಕರ್ನಾಟಕದಲ್ಲಿ...
ವರುಣ ದೇವ ಹಿಂಗೇ ಮಾಡುತ್ತಾನೆ, ಮಳೆಯ ಅಗತ್ಯತೆ ಇರುವ ಕಡೆ ಮಳೆ ಬೀಳುವುದೇ ಇಲ್ಲ. ಇನ್ನು ಮಳೆ ಬೇಡ ಅನ್ನುವ ಕಡೆ ಭಾರಿ ಮಳೆ ಸುರಿಯುತ್ತದೆ. ಆದ್ರೆ ಈ ಬಾರಿ ಕನ್ನಡ ನಾಡಿನ ಜನತೆಗೆ ಭರ್ಜರಿಯಾಗಿ ಆಶೀರ್ವಾದ ಮಾಡಿದ್ದಾನೆ ಮಳೆರಾಯ.
ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿ ಕಲಬುರಗಿ ಭಾಗದಲ್ಲೂ ಭರ್ಜರಿ ಮಳೆ ಬಿದ್ದಿದೆ. ಇಂದು ಮತ್ತೆ ಕಲಬುರಗಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಈ ಮೂಲಕ ಕನ್ನಡ ನಾಡಿನ ಜನತೆಗೆ ಭರ್ಜರಿ ಸುದ್ದಿ ಸಿಕ್ಕಿದೆ. ಹಾಗೇ ಮಲೆನಾಡು ಭಾಗದಲ್ಲಿ ಕೂಡ ಭಾರಿ ಮಳೆ ಶುರುವಾಗಿದೆ. ಹಾಗಾದ್ರೆ ಬೆಂಗಳೂರಲ್ಲಿ ಯಾವಾಗ ಮಳೆ ಬೀಳುವುದು?
ಬೆಂಗಳೂರಿನಲ್ಲಿ ಮಳೆ ಯಾವಾಗ?
ಈಗಿನ ಸ್ಥಿತಿ ನೋಡಿದರೆ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತಕ್ಷಣವೇ ಭರ್ಜರಿ ಮಳೆ ಬೀಳಬೇಕು. ಇಲ್ಲವಾದರೆ ನೀರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹೀಗಿದ್ದಾಗ ಮಳೆಯ ಬಗ್ಗೆ ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ. ಇಂದು ಬೆಳಗ್ಗೆಯಿಂದಲೇ ಮಳೆ ಬರುವ ಸೂಚನೆ ಸಿಗುತ್ತಿದ್ದು, ಮೋಡಗಳು ಬೆಂಗಳೂರಿನ ಆಕಾಶದಲ್ಲಿ ಆವರಿಸಿವೆ. ಹೀಗಾಗಿ ಏಪ್ರಿಲ್ 13 ಅಥವಾ ಏಪ್ರಿಲ್ 14ಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳುವ ನಿರೀಕ್ಷೆಗಳು ಈಗ ಮೂಡಿವೆ. ಅಕಸ್ಮಾತ್ ಬೆಂಗಳೂರಲ್ಲಿ ಭರ್ಜರಿ ಮಳೆ ಬೀಳದೆ ಇದ್ದರೆ ಸಮಸ್ಯೆಗೆ ಈಗ ಮತ್ತಷ್ಟು ಹೆಚ್ಚಾಗಲಿದೆ.
ಬಿಸಿಲಿನ ಕಾಟಕ್ಕೆ ಮಳೆಯಿಂದ ಬ್ರೇಕ್?
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಬೆಂ. ನಗರ, ಬೆಂ. ಗ್ರಾಮಾಂತರ, ರಾಮನಗರ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಭಾರಿ ಬಿಸಿಲು ಇದೀಗ ಬೀಳುತ್ತಿದೆ. ಹೀಗಿದ್ದಾಗಲೇ ಮೆಲ್ಲಗೆ ಕರ್ನಾಟದಲ್ಲಿ ಕುಡ ಮಳೆಯ ಅಬ್ಬರ ಶುರುವಾಗಿರುವುದು ಒಂದಷ್ಟು ನೆಮ್ಮದಿ ತರುತ್ತಿದೆ.
ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ ಮಳೆ
ಈಗಾಗಲೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆಯ ಅಬ್ಬರ ಶುರುವಾಗಿದ್ದು ಜನರು ಖುಷ್ ಆಗಿದ್ದಾರೆ. ಅದರಲ್ಲೂ ನೀರನ್ನೇ ಕಾಣದೆ ಒಣಗಿ ಹೋಗಿದ್ದ ಪ್ರದೇಶಗಳಲ್ಲಿ, ಭಾರಿ ಮಳೆಯ ಪರಿಣಾಮ ನೆಲವೂ ಕೆಸರಾಗಿದೆ. ಇನ್ನೇನು ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಗೆ ಸಿಲುಕಿ ನರಳಿದ್ದ ಅನ್ನದಾತ ರೈತರು ಮಳೆ ಹಿನ್ನೆಲೆ ಒಂದಷ್ಟು ನಿಟ್ಟುಸಿರನ್ನೂ ಬಿಟ್ಟಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಭಾರಿ ಮಳೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಬರುವ ನಿರೀಕ್ಷೆ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ ಜನ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ಸರಿ ಹೋಗಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.












Click it and Unblock the Notifications