Heavy Rain: ಮಳೆ.. ಮಳೆ.. ಭರ್ಜರಿ ಮಳೆ: ಅಸಲಿ ಆಟ ಈಗ ಶುರು!

ಮಳೆ ಇಲ್ಲದೆ ರೈತರ ಬದುಕು ದುಸ್ತರ, ರೈತರು ಮಾತ್ರವಲ್ಲ ನಗರದಲ್ಲಿ ವಾಸ ಇರುವವರಿಗೆ ಕೂಡ ಮಳೆಯೇ ಆಧಾರ. ಇಲ್ಲ ಅಂದ್ರೆ ಹನಿ ಹನಿ ನೀರಿಗೂ ಸಮಸ್ಯೆ ಗ್ಯಾರಂಟಿ. ಇಂತಹ ಪರಿಸ್ಥಿತಿಯನ್ನ ಈಗಾಗಲೇ ಕರ್ನಾಟಕದ ಜನ ಅನುಭವಿಸಿದ್ದಾರೆ. ಮತ್ತೊಂದು ಕಡೆ ಮಳೆ, ಮಳೆ ಬಾರಪ್ಪ ಅಂತಾ ಜನ ಬೇಡಿಕೊಂಡಿದ್ದರು. ಕೊನೆಗೂ ಮಳೆ ಬಂದು ಭೂಮಿ ಕೂಡ ತಂಪಾಗಿದೆ. ಇದೇ ಸಮಯದಲ್ಲಿ ಮುಂದಿನ 10 ದಿನ ರಣಭೀಕರ ಮಳೆ ಕರ್ನಾಟಕ ರಾಜ್ಯಕ್ಕೆ ಕಾಡಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಮಳೆ.. ಮಳೆ.. ಹೀಗೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೂ ಭರ್ಜರಿ ಮಳೆ ಸಿಂಚನ ಆಗಿದೆ. ಮಳೆರಾಯ ತನ್ನ ಅಸಲಿ ಮುಖ ತೋರಿಸುತ್ತಿದ್ದು, ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದ್ರಲ್ಲೂ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಭಾರಿ ಮಳೆ ಬೀಳುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮುಂದಿನ 10 ದಿನಗಳ ಕಾಲ ಮತ್ತಷ್ಟು ಭರ್ಜರಿ ಮಳೆ ಬೀಳುವ ವಾರ್ನಿಂಗ್ ಕೊಡಲಾಗಿದೆ. ಹಾಗಾದರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ? ಮುಂದೆ ಓದಿ.

Heavy Rain Is Expected In Karnataka For Next 10 Days From June 4 Of 2024

ಮುಂಗಾರು ಮಳೆಯ ಮೆರವಣಿಗೆ!

ಮುಂಗಾರು ಮಳೆ 2024ರಲ್ಲಿ ಬಹು ಬೇಗನೇ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ. ಈ ಕಾರಣಕ್ಕೆ ಕನ್ನಡಿಗರ ನಾಡಿನಲ್ಲಿ ಇದೀಗ ಮುಂಗಾರು ಮಳೆ ಮೆರವಣಿಗೆ ಕೂಡ ಭರ್ಜರಿಯಾಗಿ ಸಾಗಿದೆ. ಹೀಗಿದ್ದಾಗ ಮುಂದಿನ 10 ದಿನಗಳ ಕಾಲ ಮತ್ತಷ್ಟು ಜೋರು ಮಳೆ ಬೀಳುವ ಬಗ್ಗೆ, ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿಯ ಹಲವು ಪ್ರದೇಶಗಳಲ್ಲಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ?

ಇದರ ಜೊತೆಗೆ ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ವಿಜಯಪುರ ಜಿಲ್ಲೆಗು ಭರ್ಜರಿ ಮಳೆ ಬೀಳಲಿದೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಿಗೆ ಭರ್ಜರಿ ಮಳೆ ಆಗಲಿದೆ. ಈ ಸುದ್ದಿಯ ಜೊತೆಗೆ ಕರ್ನಾಟಕದ ಡ್ಯಾಂಗಳು ಕೂಡ ತುಂಬುತ್ತಿವೆ. ಈ ಮೂಲಕ, ಕಳೆದ ವರ್ಷ ಕೈಕೊಟ್ಟು ಹೋಗಿದ್ದ ಮುಂಗಾರು ಮಳೆ ಈ ಬಾರಿ ಬಡ್ಡಿ ಸಮೇತ ಬೀಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+