Rain Alert: ಮಳೆ.. ಮಳೆ.. ಮುಂದಿನ 48 ಗಂಟೆ ಹೊರಗೆ ಹೋಗದೇ ಇದ್ದರೆ ಒಳ್ಳೆಯದು!
ಮಳೆ.. ಮಳೆ.. ಎಲ್ಲೆಲ್ಲೂ ಮತ್ತೆ ಮಳೆ ಶುರುವಾಗಿದೆ. ಇನ್ನೇನು ಮುಂಗಾರು ಮಳೆ ಅಬ್ಬರ ಮುಕ್ತಾಯ ಆಯ್ತು, ಮತ್ತೆ ಮಳೆ ಬರಲ್ಲ ಬಿಡು ಅಂತಾ ಅಂದುಕೊಳ್ಳುವ ಸಮಯದಲ್ಲೇ, ಇದೀಗ ಮತ್ತೆ ಹಿಂಗಾರು ಮಳೆ ತನ್ನ ಅಸಲಿ ಮುಖ ತೋರಿಸುತ್ತಿದೆ. ಈ ಮೂಲಕ ಸದ್ಯಕ್ಕೆ ಮಳೆರಾಯ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು, ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಇನ್ನೂ 48 ಗಂಟೆ ಕಾಲ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಬರಲಿದೆಯಂತೆ. ಹಾಗಾದ್ರೆ ಈ ರೀತಿ ಭಾರಿ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು?
ಕಳೆದ ಕೆಲ ದಿನಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿಯಾಗಿ ಹಿಂಗಾರು ಮಳೆಯ ಆಗಮನ ಆಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಫುಲ್ ಅಲರ್ಟ್ ಆಗಿರುವ ಮಳೆರಾಯ ಇದೀಗ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲೂ ಮುಂದಿನ ಹಲವಾರು ದಿನಗಳ ಕಾಲ ಅಬ್ಬರಿಸುವ ಮುನ್ಸೂಚನೆ ನೀಡುತ್ತಿದ್ದಾನೆ. ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಅಸಲಿ ಮ್ಯಾಟರ್ ಇಲ್ಲಿಗೆ ಮುಗಿದಿಲ್ಲ, ಮುಂದಿನ 48 ಗಂಟೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಕ್ಷರಶಃ ರಣಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ...
ಮಳೆ ಯಾಕೆ ಇಷ್ಟು ಜೋರಾಗಿ ಬೀಳುತ್ತಿದೆ? ಮಳೆಗಾಲ ಮುಕ್ತಾಯ ಆಗಿದೆಯಲ್ವಾ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು, ಆದರೆ ಲಕ್ಷದ್ವೀಪ ಪ್ರದೇಶದಲ್ಲಿ ವಾಯುಭಾರದ ಕುಸಿತ ಹಿನ್ನೆಲೆಯಲ್ಲಿ ಭರ್ಜರಿ ಮಳೆ ಬೀಳುತ್ತಿದೆ. ಈಗಾಗಲೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಗೂ ಮಳೆಯ ಎಂಟ್ರಿ ಆಗಿದ್ದು, ಮುಂದಿನ 4 ದಿನಗಳಲ್ಲಿ ರಾಜ್ಯಾದ್ಯಂತ ಮಳೆ ಅಬ್ಬರಿಸುವ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಕೂಡ ನಿರ್ಮಾಣ ಆಗಿದೆ.
ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ!
ಮುಂದಿನ 4 ದಿನಗಳಲ್ಲಿ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದ್ದು, ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಕರಾವಳಿ, ದಕ್ಷಿಣ ಒಳನಾಡಿನ ಪ್ರದೇಶ ಸೇರಿದಂತೆ ಉತ್ತರ ಕರ್ನಾಟಕ & ಮಧ್ಯ ಕರ್ನಾಟಕ ಭಾಗದಲ್ಲಿ ಕೂಡ ಮಳೆರಾಯ ಅಬ್ಬರ ತೋರಿಸಲು ಸಜ್ಜಾಗಿದ್ದಾನೆ.
ಅಕ್ಟೋರ್ 14 ರವರೆಗೆ ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಗದಗ, ಧಾರವಾಡ, ಹುಬ್ಬಳ್ಳಿ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಇದರ ಜೊತೆಗೆ, ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ ಎಂದು ಎಚ್ಚರಿಸಲಾಗಿದೆ. ಭಾರಿ ಮಳೆ ಕಾರಣಕ್ಕೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಹಳದಿ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications