Rain Alert: ಗುಡುಗು & ಸಿಡಿಲು ಸಹಿತ ಭೀಕರ ಮಳೆ ಗ್ಯಾರಂಟಿ! ಎಲ್ಲಿ ಗೊತ್ತಾ?

ಭೀಕರ ಮಳೆ ಕೊರತೆಗೆ ಇಡೀ ಕರ್ನಾಟಕ ನಲುಗಿ ಹೋಗಿದೆ, ಜನರು ಈಗ ಹನಿ ಹನಿ ನೀರು ಪಡೆಯಲು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಮಳೆಯ ಸುಳಿವು ಇಲ್ಲ ಅಂತಾ ರೈತರು & ಜನ ಸಾಮಾನ್ಯರು ಚಿಂತೆಯಲ್ಲಿ ಮುಳುಗಿದ್ದಾರೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಭೀಕರ ಮಳೆಯ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಹಾಗಾದರೆ ಯಾವಾಗ ಈ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

ಒಣಗಿ ಹೋದ ಡ್ಯಾಂಗಳು, ಜಲಾಶಯದ ನೀರು ಖಾಲಿಯಾದ ಕಾರಣಕ್ಕೆ ತೀವ್ರಗೊಂಡಿದೆ ಆತಂಕ. ಅಷ್ಟಕ್ಕೂ ಕರ್ನಾಟಕದ ಯಾವುದೇ ಊರಿಗೆ ಹೋದರೂ ಇಂತಹ ಪರಿಸ್ಥಿತಿಯನ್ನ ನೀವು ಕಣ್ತುಂಬಿಕೊಳ್ಳಬಹುದು. ಯಾಕಂದ್ರೆ ಅಷ್ಟು ಕಷ್ಟದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಜನ ಒಂದು ಬಿಂದಿಗೆ ನೀರು ತರಲು ಹತ್ತಾರು ಕಿಲೋ ಮೀಟರ್ ಹೋಗಬೇಕಾದ ಪರಿಸ್ಥಿತಿ, ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ನಿರ್ಮಾಣವಾಗಿದೆ. ಹೀಗಿದ್ದಾಗ ಮಳೆ ಬರಲೇಬೇಕು, ಜೋರಾಗಿ ಮಳೆ ಸುರಿಸು ವರುಣ ದೇವ ಅಂತಾ ಕನ್ನಡಿಗರು ಮಳೆರಾಯನ ಬಳಿ ಡಿಮ್ಯಾಂಡ್ ಇಟ್ಟಿರುವಾಗಲೇ ಭರ್ಜರಿ ಮಳೆಯ ಮುನ್ಸೂಚನೆ ಸಿಗುತ್ತಿದೆ.

Heavy Rain Alert Has Been Given To These States

ಭರ್ಜರಿ ಮಳೆ ಬಗ್ಗೆ ಬಿಗ್ ಅಪ್‌ಡೇಟ್

ಹೌದು ಇದೀಗ ಹವಾಮಾನ ಇಲಾಖೆ ತಜ್ಞರು ನೀಡಿರುವ ಮಾಹಿತಿ ಪ್ರಕಾರ ಇಂದಿನಿಂದಲೇ ಮಳೆಯ ಅಬ್ಬರ ಶುರುವಾಗಲಿದೆ. ಹಾಗೇ ಮುಂದಿನ 5 ದಿನಗಳ ಕಾಲ ಭರ್ಜರಿ ಮಳೆಯು ಬೀಳಲಿದೆ, ಇದರ ಜೊತೆಗೆ ನದಿಗಳೂ ಕೂಡ ತುಂಬಿ ಹರಿಯಲಿವೆ ಎನ್ನಲಾಗಿದೆ. ಹಾಗಾದ್ರೆ ಯಾವ ಯಾವ ಪ್ರದೇಶದಲ್ಲಿ ಮಳೆ ಸುರಿಯಲಿದೆ? ಎಷ್ಟು ದಿನಗಳ ಕಾಲ ಇದೇ ರೀತಿಯಾಗಿ ಮಳೆ ಸುರಿಯಬಹುದು? ಸಂಪೂರ್ಣ ಮಾಹಿತಿ ತಿಳಿಯಲು ಇದೀಗ ಮುಂದೆ ಓದೋಣ ಬನ್ನಿ.

ಮಳೆ ಬಂತು ಮಳೆ..!

ಅಂದಹಾಗೆ ಇದೀಗ ಮಳೆಯ ಮುನ್ಸೂಚನೆ ಸಿಕ್ಕಿರುವುದು ಕರ್ನಾಟಕದಲ್ಲಿ ಅಲ್ಲ, ಬದಲಾಗಿ ಉತ್ತರ ಭಾರತದಲ್ಲಿ. ಹೌದು ಈಗಿನ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಉತ್ತರ ಭಾರತ ಮತ್ತೊಮ್ಮೆ ಮಳೆ ಆರ್ಭಟಕ್ಕೆ ನಲುಗಿ ಹೋಗಲಿದೆ. ಭಾರತದ ಕಿರೀಟದಂತೆ ಇರುವ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶದ ಕೆಲವು ಭಾಗಗಳು ಸೇರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೂಡ ಭರ್ಜರಿ ಮಳೆ ಮತ್ತು ಹಿಮಪಾತ ಸುರಿಯುವ ಲಕ್ಷಣ ಗೋಚರಿಸಿದೆ. ಈಗಾಗಲೇ ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆ ಬೀಳ್ತಿದೆ. ಹಾಗಾದರೆ ಕರ್ನಾಟಕದಲ್ಲಿ ಭರ್ಜರಿ ಮಳೆ ಬೀಳುವುದು ಯಾವಾಗ? ಮುಂದೆ ಓದಿ.

Heavy Rain Alert Has Been Given To These States

ಕರ್ನಾಟಕದಲ್ಲಿ ಮಳೆ ಬರೋದೆ ಇಲ್ವಾ?

ಹವಾಮಾನ ಇಲಾಖೆ ಈ ಹಿಂದೆಯೇ ನೀಡಿದ ಮಾಹಿತಿ ಪ್ರಕಾರ ಕನ್ನಡಿಗರ ನೆಲದಲ್ಲಿಯೂ ಭಾರಿ ಮಳೆ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದ ಮಾಹಿತಿಯಂತೆ ಕಳೆದ ವಾರ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಬೀಳುವ ನಿರೀಕ್ಷೆ ಇತ್ತು. ಆದರೆ ಮಳೆಯ ಎಂಟ್ರಿ ಬಿಡಿ ಮೋಡಗಳು ಕೂಡ ಕರ್ನಾಟಕದ ಬಳಿಗೆ ಸುಳಿದಿಲ್ಲ. ಪರಿಸ್ಥಿತಿ ಹೀಗಿದ್ದಾಗಲೇ, ಈ ತಿಂಗಳಲ್ಲಿ ಒಂದು ಮಳೆ ಬರಬಹುದು ಎಂಬ ನಿರೀಕ್ಷೆ ಮನೆಮಾಡಿದೆ. ಇದೇ ಕಾರಣಕ್ಕೆ ಕನ್ನಡ ನಾಡಿನ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಈಗಿನ ಪರಿಸ್ಥಿತಿ ನೋಡಿದರೆ ಕೆಲವು ದಿನಗಳಲ್ಲಿ ಉತ್ತಮವಾಗಿ ಮಳೆ ಆಗದೇ ಇದರೆ, ರಾಜ್ಯದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕು ಅಂಥ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಈ ಕಾರಣಕ್ಕೆ ಮಂಡ್ಯ ಮತ್ತು ಮೈಸೂರು ಭಾಗದ ರೈತರು ಚಿಂತೆ ಮಾಡುತ್ತಿದ್ದಾರೆ ಮತ್ತೊಮ್ಮೆ ಕಾವೇರಿ ನೀರಿಗೆ ಕಿತ್ತಾಟ ಶುರುವಾಗುವ ಆತಂಕ ಕೂಡ ಆವರಿಸಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಶೀಘ್ರದಲ್ಲೇ ಮಳೆ ಬರಲೇಬೇಕಿದೆ. ಇಲ್ಲವಾದರೆ ನಮ್ಮ ರೈತರ ಪರಿಸ್ಥಿತಿ ಸಾಕಷ್ಟು ಸಮಸ್ಯೆಗೆ ಸಿಲುಕಲಿದೆ.

ಕರ್ನಾಟಕಕ್ಕೂ ಬಾರೋ ಮಳೆರಾಯ...

ಏನೇ ಹೇಳಿ ಮಳೆ ಬಂದರೆ ಮಾತ್ರ ನಮ್ಮ ಭೂಮಿಗೆ ಕಳೆ, ಇಲ್ಲವಾದ್ರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತ ರೈತರು ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗಲೇ, ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಆದ್ರೆ ಈಗ ಮತ್ತೆ ಮಳೆ ಶುರುವಾಗುತ್ತಿದೆ ದೇಶದ ಹಲವು ರಾಜ್ಯದಲ್ಲಿ ಮಳೆ ಹಾಗೂ ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲಿ, ಕನ್ನಡಿಗರ ನೆಲವೂ ಮಳೆ ಕಾರಣ ಒದ್ದೆಯಾಗಲಿದೆ ಉತ್ತಮ ಮಳೆ ಬೀಳುತ್ತೆ ಅಂತ ರೈತರು ಕಾಯುತ್ತಿದ್ದಾರೆ.

ಹಾಗೇ ಗ್ರಾಮೀಣ ಭಾಗದಲ್ಲಿ ಇಂತಹ ಸಮಯದಲ್ಲಿ ಮಳೆ ಬಿದ್ರೆ ಕುಡಿಯುವ ನೀರಿಗೆ ಎದುರಾದ ಸಮಸ್ಯೆ ಸರಿಹೋಗಲಿದೆ. ಉತ್ತರ ಕರ್ನಾಟಕ & ಮೈಸೂರು ಕರ್ನಾಟಕ ಭಾಗದ ಜನರು ಇದೀಗ, ಭಾರಿ ಮಳೆ ಕೊರತೆ ಕಾರಣ ನಲುಗಿ ಹೋಗಿದ್ದಾರೆ. ಹಳ್ಳಿಗಳಲ್ಲಿ ಇದೀಗ, ನೀರು ಪಡೆಯುವುದೇ ದೊಡ್ಡ ಸಾಹಸ ಆಗಿದೆ. ಹೀಗಾಗಿ ಪ್ರತಿಯೊಬ್ಬರು ಮಳೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ ಆದರೆ ವರುಣ ದೇವ ಯಾವಾಗ ಕರುಣೆ ತೋರಿಸುತ್ತಾನೋ ಗೊತ್ತಿಲ್ಲ.

ಡ್ಯಾಂಗಳಲ್ಲಿ ನೀರು ಖಾಲಿ ಖಾಲಿ!

ಕಾವೇರಿ, ಕೃಷ್ಣಾ, ಹೇಮಾವತಿ, ತುಂಗಾ, ಭದ್ರಾ ಹೀಗೆ ಕನ್ನಡಿಗರ ನಾಡಲ್ಲಿ ದೊಡ್ಡ ದೊಡ್ಡ ನದಿಗಳೇ ಬತ್ತುತ್ತಿವೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು ಜನರು & ರೈತರು. ಹೀಗಿದ್ದಾಗ, ಕರ್ನಾಟಕದಲ್ಲಿ ಇರುವ ಬಹುತೇಕ ಎಲ್ಲಾ ಡ್ಯಾಂಗಳು ಬತ್ತಿ ಹೋಗುತ್ತಿವೆ. ಮಳೆ ಬಂದರೆ ಮಾತ್ರ ಭೂಮಿಗೆ ಕಳೆ, ಇಲ್ಲವಾದರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತಾ ರೈತರು ಕೂಡ ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗ ಕಳೆದ ವರ್ಷ ಅಂದ್ರೆ 2023 ರಲ್ಲಿ ಮಳೆ ಕೈಕೊಟ್ಟಿತ್ತು. ಹೀಗಾಗಿ ಸರಿಯಾಗಿ ಮಳೆಯೇ ಬೀಳಲಿಲ್ಲ. ಇದೇ ಕಾರಣಕ್ಕೆ ನಮ್ಮ ಕನ್ನಡ ನಾಡಿನ ಬಹುತೇಕ ಜಲಾಶಯಗಳು ಚಳಿಗಾಲದಲ್ಲೇ ಬತ್ತಿ ಹೋಗಿವೆ, ಇನ್ನು ಕೆಲವೇ ಕೆಲವು ಡ್ಯಾಂಗಳಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ.

ಕನ್ನಡ ನಾಡಿನ ಪರಿಸ್ಥಿತಿ ಏನು?

ಕಳೆದ 4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನಗಳು ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನರಿಗೆ ಮಳೆ ಸಾಕಷ್ಟು ಸಮಸ್ಯೆ ಕೊಟ್ಟಿತ್ತು. ಆದರೂ ಕಳೆದ ವರ್ಷ ಮಳೆಯೇ ನಾಪತ್ತೆ. ಬೇಸಿಗೆ ಸಮಯದಲ್ಲಿ ಬಿದ್ದಿದ್ದ ಒಂದೆರಡು ಮಳೆ ಮಾತ್ರ ಬೆಂಗಳೂರಿಗೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಬೆಂಗಳೂರಿನಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಹೀಗಿದ್ದಾಗ ಕನ್ನಡಿಗರು ಕರ್ನಾಟಕದಲ್ಲಿ ಈಗ, ಮಳೆ ಬೀಳಲಿ ಅಂತಾ ದೇವರಲ್ಲಿ ಬೇಡುವಾಗಲೇ ಉತ್ತರ ಭಾರತದಲ್ಲಿ ಭಾರಿ ಮಳೆ ಶುರುವಾಗಿದೆ. ಆದರೆ ಕನ್ನಡ ನಾಡಿನಲ್ಲೀಗ ಮಳೆಯೇ ನಾಪತ್ತೆಯಾಗಿದೆ. ಹೀಗಾಗಿ ಜನರು ಕೂಡ ಪರದಾಡುತ್ತಿದ್ದಾರೆ. ಒಂದು ಬಿಂದಿಗೆ ನೀರಿಗೂ ಬಡಿದಾಡುವ ಪರಿಸ್ಥಿತಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+