Rain Alert: ಮುಂದಿನ 24 ಗಂಟೆ ರಣಭೀಕರ ಮಳೆ, ಯಾವ ಯಾವ ಜಿಲ್ಲೆಗಳಿಗೆ ಮಳೆ ಭಯ?

ಮಳೆ.. ಮಳೆ.. ಮಳೆ.. ಈಗ ಕನ್ನಡಿಗರ ಕಿವಿಗೆ ಮಳೆ ಅನ್ನೋ ಶಬ್ಧ ಕೇಳಿದರೆ ಸಾಕು ಆ ಕ್ಷಣವೇ ಭಯ ಆಗುತ್ತೆ. ಆದರೆ ಕೇವಲ 3 ತಿಂಗಳ ಹಿಂದೆ ಇದೇ ನಮ್ಮ ಕನ್ನಡಿಗರು ಮಳೆಗೆ ಕಾದು ಕುಳಿತಿದ್ದರು. ಒಂದು ಸಾರಿ ಜೋರಾಗಿ ಮಳೆ ಬಿದ್ದರೆ ಸಾಕಪ್ಪಾ ದೇವರೇ ಅಂತಾನೂ ಬೇಡಿಕೊಂಡಿದ್ದರು. ಆದರೆ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಕನ್ನಡ ನಾಡು ತತ್ತರಿಸಿ ಹೋಗಿದ್ದು, ಮುಂದಿನ 24 ಗಂಟೆ ಅವಧಿಯಲ್ಲಿ ಮತ್ತಷ್ಟು ರಣಭೀಕರ ಮಳೆ ಸುರಿಯುತ್ತದೆ ಎಂದು ಎಚ್ಚರಿಸಲಾಗಿದೆ!

ಕರ್ನಾಟಕದ ನದಿಗಳಲ್ಲಿ ಬರ ಬಂದಿತ್ತು, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಪರದಾಟ ಶುರುವಾಗಿತ್ತು. ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ಇಂತಹ ಪರಿಸ್ಥಿತಿಯನ್ನ ಕನ್ನಡಿಗರು ಎದುರಿಸಿದ್ದರು. ಆದರೆ ಇದೀಗ ಮಳೆ ಆರ್ಭಟಿಸುತ್ತಿರುವ ರೀತಿಗೆ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ. ಎಷ್ಟೋ ಊರುಗಳು ಮುಳುಗಿ ಹೋಗಿವೆ. ಹೀಗಿದ್ದಾಗಲೇ ಮತ್ತೆ ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ರಣಭೀಕರ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Heavy Rain Alert Given To These Districts On 31st Of July 2024

ಮಳೆ.. ಮಳೆ.. ಭರ್ಜರಿ ಮಳೆ!

ಅಂದಹಾಗೆ ಈಗಿನ ಮಾಹಿತಿ ಪ್ರಕಾರ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಹಾಗೇ ಉತ್ತರ ಕನ್ನಡ & ಹಾಸನದ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರ ತೋರುವುದು ಪಕ್ಕಾ ಆಗಿದೆ. ಇದರ ಜೊತೆಗೆ ಉತ್ತರ ಒಳನಾಡು ಭಾಗದಲ್ಲೂ 2 ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ಇದ್ದು, ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ಕೂಡ ನೀಡಿದ್ದಾರೆ. ಅದರಲ್ಲೂ, ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಅಕ್ಷರಶಃ ಜಲಪ್ರಳಯ ಆಗುವ ಭಯ ಕಾಡುತ್ತಿದೆ. ಕೊಡಗು ಜಿಲ್ಲೆಯಲ್ಲೂ ಮಳೆರಾಯ ಆರ್ಭಟಿಸುತ್ತಿದ್ದಾನೆ.

ನದಿ & ಜಲಪಾತಗಳ ಬಳಿ ಹೋಗಬೇಡಿ

ಇದೀಗ ಅಗತ್ಯ ಇರುವ ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನದಿ & ಹಳ್ಳಗಳ ಬಳಿ ಯಾರೂ ಸುಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳ ಬಳಿ ಎಚ್ಚರಿಕೆ ಬೋರ್ಡ್ ಅಳವಡಿಸಲಾಗಿದೆ. ಹಾಗೇ ಪ್ರವಾಸಿಗರು ಜಲಪಾತಗಳ ಬಳಿ ಸುಳಿಯದಂತೆ ಆದೇಶ ಹೊರಡಿಸಲಾಗಿದ್ದು, ನಿಯಮಗಳನ್ನು ಮೀರುವವರ ವಿರುದ್ಧ ಕ್ರಮಕ್ಕೆ ಕೂಡ ಆದೇಶ ನೀಡಲಾಗಿದೆ.

ಮಳೆ ಅಬ್ಬರ ಹೀಗೆ ಇರಲಿದೆ...

ಕರ್ನಾಟಕದಲ್ಲಿ ಮುಂಗಾರು ಮಳೆ ಇದೇ ರೀತಿ ಇನ್ನೂ ಕೆಲವು ದಿನಗಳ ಕಾಲ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ಮಳೆ ಅಬ್ಬರದಿಂದ ಬಚಾವ್ ಆಗೋದಕ್ಕೆ ಎಷ್ಟೋ ಜನರು ಊರು ಬಿಡುವ ಪರಿಸ್ಥಿತಿ ಕೂಡ ಸೃಷ್ಟಿ ಆಗಿದೆ. ಹಾಗೇ ಹಲವು ಕಡೆ ಸೇತುವೆ & ರಸ್ತೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿವೆ. ಹೀಗಾಗಿಯೇ ಭಾರಿ ಮಳೆ ಬೀಳುತ್ತಿರುವ ಪ್ರದೇಶಗಳಲ್ಲಿ, ಜನ ಎಚ್ಚರಿಕೆಯಿಂದ ಓಡಾಡಲು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+