Bengaluru Rain: ಮಳೆ.. ಮಳೆ.. ಸೆಪ್ಟೆಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?
ಮಳೆ.. ಮಳೆ.. ಯಾಕಪ್ಪಾ ಈ ರೀತಿ ಮಳೆ ಸುರಿಯುತ್ತಿದೆ? ಅಂತಾ ಕನ್ನಡಿಗರು ಇದೀಗ ಭರ್ಜರಿ ಮಳೆ ಬಗ್ಗೆ ಗೊಣಗುವಂತೆ ಆಗಿದೆ. ಮುಂಗಾರು ಮಳೆ ಸಮಯ ಇನ್ನೇನು ಮುಗಿಯುವ ಸಮಯ ಹತ್ತಿರುವ ಬಂದಿರುವಾಗಲೂ ಭಾರಿ ಘೋರ ಮಳೆ ಮುಂದುವರಿದಿದೆ. ಅದರಲ್ಲೂ ಮಳೆರಾಯ ಈ ರೀತಿ ಸುರಿಯುತ್ತಿರುವ ರೀತಿ ನೋಡಿದರೆ ಸಿಕ್ಕಾಪಟ್ಟೆ ಟೆನ್ಷನ್ ಆಗಿದ್ದಾರೆ ಕನ್ನಡ ನಾಡಿನ ಜನರು. ಯಾಕಂದ್ರೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಮಲೆನಾಡು, ಬಯಲು ಸೀಮೆ, ಕರಾವಳಿ ಭಾಗದಲ್ಲೂ ಬೇಡ ಬೇಡ ಅನ್ನುವಷ್ಟು ಮಳೆ ಇದೀಗ ಸುರಿದು ಹೋಗಿದೆ...
ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣಕ್ಕೆ ಈಗಾಗಲೇ ಹಲವು ಬಾರಿ ರಜೆ ನೀಡಲಾಗಿತ್ತು. ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳು ಸೇರಿದಂತೆ ಕೊಡಗು ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ, ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸುವ ಆತಂಕ ಇದ್ದು, ಬೆಂಗಳೂರು & ಮೈಸೂರು ಸುತ್ತಮುತ್ತ ಕೂಡ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಸಮಯದಲ್ಲೇ, ಸೆಪ್ಟೆಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?

ಸೆಪ್ಟೆಂಬರ್ 8 ಸೋಮವಾರ ರಜೆ?
ಇನ್ನು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುವ ಮುನ್ನೆಚ್ಚರಿಕೆ ನೀಡಿರುವ ಕಾರಣಕ್ಕೆ ಈಗ ಸೆಪ್ಟೆಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಮಳೆ ಅಬ್ಬರವು ಜೋರಾಗಿರುವ ಕಾರಣಕ್ಕೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಜನ ಕೂಡ ಸುಸ್ತಾಗಿ ಹೊಗಿದ್ದಾರೆ. ಈ ಎಲ್ಲಾ ಆತಂಕದ ನಡುವೆ ಮತ್ತೆ ಮಳೆ ತನ್ನ ಆರ್ಭಟ ಮುಂದುವರಿಸುವ ಭಯ ಮೂಡಿದೆ. ಇದೇ ಕಾರಣಕ್ಕೆ ಇದೀಗ ಸೆಪ್ಟೆಂಬರ್ 8 ಸೋಮವಾರ ಶಾಲಾ & ಕಾಲೇಜು ರಜೆ ಘೋಷಣೆ ಸಾಧ್ಯತೆ ಇದ್ದು, ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರ ಬೀಳಬೇಕಿದೆ.
ಭಾರಿ ಮಳೆ ಕಾರಣಕ್ಕೆ ಎಲ್ಲೆಲ್ಲೂ ಅವಾಂತರ!
ಅಂದಹಾಗೆ ಮತ್ತೊಂದು ಕಡೆ ಸುದೀರ್ಘವಾಗಿ ಮಳೆರಾಯ ಅಬ್ಬರಿಸುತ್ತಿರುವ ಕಾರಣಕ್ಕೆ ಇದೀಗ ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತಿದೆ. ಮತ್ತೊಂದು ಕಡೆ ಮಳೆ ಯಾವಾಗ ನಿಲ್ಲುತ್ತೆ? ಅಂತಾ ಕೂಡ ಕೇಳುವಂತೆ ಆಗಿದೆ. ಇಷ್ಟೆಲ್ಲದರ ನಡುವೆಯೇ ರೈತರು ತಮ್ಮ ಬೆಳೆ ಕಳೆದುಕೊಂಡು ನರಳುವ ವಾತಾವರಣ ಕೂಡ ಇದೀಗ ನಿರ್ಮಾಣ ಆಗುತ್ತಿದೆ. ಹೀಗಗಿ ಪ್ರಕೃತಿ ಮಾತೆ ಕರುಣೆ ತೋರಿಸಿ ಮಳೆ ನಿಲ್ಲಿಸಲಿ ಅಂತಾ ಬೇಡುತ್ತಿದ್ದಾರೆ ಮನುಷ್ಯರು.












Click it and Unblock the Notifications