ಹೆಚ್ ಡಿ‌ ಕುಮಾರಸ್ವಾಮಿಯವರನ್ನ ಹಾಡಿ ಹೊಗಳಿದ ಭವಾನಿ ರೇವಣ್ಣ; 2023 ಕ್ಕೆ ಸಿಎಂ ಆಗ್ತಾರಂತೆ

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಅವರು ಹೆಚ್ ಡಿ‌ ಕುಮಾರಸ್ವಾಮಿ ‌ಹಾಡಿ ಹೊಗಳದ್ದಾರೆ.

ಹಾಸನ,ಫೆಬ್ರವರಿ25: ಹಾಸನ ವಿಧಾನಸಭಾ ಟಿಕೆಟ್ ಅಭ್ಯರ್ಥಿಯನ್ನ ದಳಪತಿಗಳು ಘೋಷಣೆ ಮಾಡುವ ಮೊದಲೇ ಹಾಸನದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನ ಆರಂಭಿಸಿದ್ದಾರೆ. ಇನ್ನು ಹಾಸನ ಟಿಕೆಟ್ ವಿಚಾರವಾಗಿ ನಾಳೆ ಚರ್ಚೆ ನಡೆಸಲಾಗುವುದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇತ್ತ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಅವರು ಹೆಚ್ ಡಿ‌ ಕುಮಾರಸ್ವಾಮಿ ‌ಹಾಡಿ ಹೊಗಳದ್ದಾರೆ. 2023 ರ ಮುಂದಿನ ಮುಖ್ಯಮಂತ್ರಿ ಕುಮಾರಣ್ಣನೇ ಆಗ್ತಾರೆ. ಕುಮಾರಣ್ಣ ಬಿಸಿಲನ್ನ ಲೆಕ್ಕಿಸದೇ ರಾಜ್ಯಾದ್ಯಂತ ಪ್ರಚಾರ ಕಾರ್ಯವನ್ನ ನಡೆಸಿದ್ದಾರೆ. ಕಳೆದ ಬಾರಿ ಪೂರ್ಣವಧಿ ಅವಕಾಶ ನೀಡಿದರೆ ಇನ್ನು ಅಭಿವೃದ್ಧಿ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಅವರೇ ಮುಖ್ಯಮಂತ್ರಿ ಆಗ್ತಾರೆ ಅವರಿಗೆ ಬಲ ತುಂಬಬೇಕು ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

HD Kumaraswamy will Become CM By 2023 Says Bhavani Revanna

ಈ ಬಾರಿಯೂ ಕುಮಾರಣ್ಣ ಮುಖ್ಯಮಂತ್ರಿಯಾಗುತ್ತಾರೆ. ಅದರಿಂದ ಜಿಲ್ಲೆಯಲ್ಲಿ ಅವರಿಗೆ ಶಕ್ತಿ ತುಂಬಬೇಕು. ಯಾಕೆಂದ್ರೆ ಕುಮಾರಸ್ವಾಮಿ ಅವರ ಮೇಲೆ ದೇವರ ಅನುಗ್ರಹವಿದೆ. ರಾಜ್ಯವೇ ಅವರಿಗೆ ಶಕ್ತಿ ತುಂಬುತ್ತಿದೆ ಎಂದ ಮೇಲೆ ನಾವು ಕೂಡ ಜಿಲ್ಲೆಯಲ್ಲಿ ಅವರಿಗೆ ಶಕ್ತಿ ತುಂಬಬೇಕು. ನಾವು ಒಂದೇ ಬಾರಿಗೆ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂಬ ಪುಟ್ಟ ಕಥೆಯೊಂದನ್ನು ಹೇಳಿ ಕುಮಾರಸ್ವಾಮಿಯವರನ್ನು ಭವಾನಿ ರೇವಣ್ಣ ಹೊಗಳಿದರು.

ಇನ್ನುಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಿಸಿ ಕೊಡುವ ಮೂಲಕ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿಯೂ ಜೆಡಿಎಸ್ ಪಕ್ಷವನ್ನ ಕಟ್ಟಲು ಸಾಧ್ಯವಾಗುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಅವರ ಹಾಕಿಕೊಂಡಿರುವ ಯೋಜನೆಗಳು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ.

HD Kumaraswamy will Become CM By 2023 Says Bhavani Revanna

ಇನ್ನು ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರು ಇಲ್ಲ ಅಂತ ಸಾಕಷ್ಟು ಅಹಿತಕರ ಘಟನೆ ನಡೆದಿದೆ ಕಾರ್ಯಕರ್ತರು ನಮ್ಮ ಮನೆಗೆ ಬಂದು ಅಳಲು ತೋಡಿಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ನಮ್ಮ ಕುಟುಂಬ ಸ್ಪಂದಿಸಿದೆ ಪಕ್ಷ ಅವರ ಬೆನ್ನೆಲುಬುಗೆ ನಿಂತಿದೆ. ಅಂತಹ ಅಹಿತಕರ ಘಟನೆಗಳು ಮುಂದೆ ನಡೆಯಬಾರದು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನ ತರುವ ಮೂಲಕ ಪಕ್ಷವನ್ನ ಸದೃಢಗೊಳಿಸೋಣ ಅಂತ ಮನವಿ ಮಾಡಿದರು.

ಸ್ವತಂತ್ರವಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತ ನಿಟ್ಟಿನಲ್ಲಿ ಕುಮಾರಣ್ಣ ನವರು ಸಾಕಷ್ಟು ಶ್ರಮಿಸಬೇಕಿದೆ. ಅವರು ಮುಖ್ಯಮಂತ್ರಿಯಾಗಲು ನಾವೆಲ್ಲ ಅವರಿಗೆ ಶಕ್ತಿ ಕೊಡಬೇಕು. ಅವರು ಮುಖ್ಯಮಂತ್ರಿ ಆದರೆ ರಾಜ್ಯ ಸಮಗ್ರ ಅಭಿವೃದ್ದಿ ಆಗುತ್ತದೆ ಎಂದ ಭವಾನಿ ರೇವಣ್ಣ ಪತಿ ರೇವಣ್ಣ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇವತ್ತು ಮಕ್ಕಳು ಮರಿ ಮಕ್ಕಳು ನೋಡುವಂತಹ ಕೆಲಸವನ್ನ ರೇವಣ್ಣನವರು ಮಾಡಿದ್ದಾರೆ. ಯಾರಿಗೂ ಮೋಸ ಮಾಡೋರಲ್ಲ ಜಿಲ್ಲೆಯ ಜನರ ಹಿತವನ್ನ ಬಯಸುವವರು ರೇವಣ್ಣ. ದೇವೇಗೌಡರ ಕನಸು ಈಗ ನನಸು ಮಾಡುವ ಕಾಲ ಬಂದಿದೆ. ರೇವಣ್ಣನವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೇವಲ 5 ವರ್ಷಕ್ಕೆ 10 ವರ್ಷಕ್ಕೆ ಸೀಮಿತವಲ್ಲ. ಅದು ಶಾಶ್ವತ ಕಾರ್ಯಕ್ರಮಗಳು. ಮನುಷ್ಯ ಭೂಮಿ ಬಿಟ್ಟು ಹೋದರು ರೇವಣ್ಣನ ಕೊಟ್ಟಿರುವ ಕೊಡುಗೆಗಳು ಶಾಶ್ವತವಾಗಿ ಇರುತ್ತವೆ ಮುಂದಿನ ಪೀಳಿಗೆಗೆ ಅದು ಅನುಕೂಲವಾಗುತ್ತದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+