Election Result: ಬಿಜೆಪಿ ಮರ್ಯಾದೆ ಉಳಿಸಿದ್ದೇ ಹೆಚ್.ಡಿ. ಕುಮಾರಸ್ವಾಮಿ!
ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗುತ್ತಿದೆ. 400ರ ಗಡಿದಾಟುವ ವಿಶ್ವಾಸದಲ್ಲಿದ್ದ ಎನ್‌ಡಿಎಗೆ ಭಾರಿ ಆಘಾತ ಎದುರಾಗಿದೆ. 400 ಇರಲಿ ಸದ್ಯ 300 ಸ್ಥಾನ ಗೆದ್ದರೆ ಸಾಕು ಎನ್ನುವ ಪರಿಸ್ಥಿತಿ ಇದೆ.
2019ರ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ, ಬಿಜೆಪಿ ಜೆಡಿಎಸ್ ನಾಯಕರಿಗೆ ಅಷ್ಟೇನೂ ಪ್ರಾಮುಖ್ಯತೆ ಕೊಟ್ಟಿರಲಿಲ್ಲ, ತನಗೆ ಜೆಡಿಎಸ್‌ನಿಂದ ಲಾಭವಾಗುವುದಿಲ್ಲ, ತನ್ನಿಂದ ಜೆಡಿಎಸ್‌ಗೆ ಲಾಭವಾಗುತ್ತದೆ ಎನ್ನುವ ಧೋರಣೆಯಂತೆ ವರ್ತಿಸಿತ್ತು.

ಅಳೆದು ತೂಗಿ ಜೆಡಿಎಸ್3 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿತ್ತು. ಮೋದಿ ಅಲೆಯಲ್ಲಿ ಈ ಬಾರಿ ಮತ್ತೆ 25 ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಕನಸು ಕಂಡಿದ್ದ ಬಿಜೆಪಿಗೆ ರಾಜ್ಯದ ಮತದಾರ ಆಘಾತ ಕೊಟ್ಟಿದ್ದಾನೆ.
25 ಸ್ಥಾನಗಳಿಂದ ಬಿಜೆಪಿ 16 ಸ್ಥಾನಗಳಿಗೆ ಕುಸಿದಿದೆ. ಜೆಡಿಎಸ್ 3 ರಲ್ಲಿ ಎರಡು ಸ್ಥಾನ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಬಿಜೆಪಿ ರಕ್ಷಿಸಿದ ಹೆಚ್‌ಡಿ ಕುಮಾರಸ್ವಾಮಿ
ಇಂದಿನ ಫಲಿತಾಂಶ ನೋಡಿದ ಬಳಿಕ ಬಿಜೆಪಿ ಗೆಲುವಿನಲ್ಲಿ ಜೆಡಿಎಸ್ ಎಷ್ಟು ಪ್ರಾಮುಖ್ಯತೆ ವಹಿಸಿದೆ ಎನ್ನುವುದು ತಿಳಿಯುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರನ್ನು ಸೋಲಿಸಲು ಬಿಜೆಪಿ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸಿತು, ಡಿಕೆ ಸುರೇಶ್ ವಿರುದ್ಧದ ಸವಾಲಿನಲ್ಲಿ ಹೆಚ್‌ಡಿ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಜೆಡಿಎಸ್ ಪಾತ್ರ ದೊಡ್ಡದಿದೆ. ಒಂದು ವೇಳೆ ಕುಮಾರಸ್ವಾಮಿ ಬೆಂಬಲ ಇರದೇ ಇದ್ದರೆ ಈ ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿತ್ತು.
ಎನ್‌ಡಿಎ ಬಹುಮತ ಪಡೆದು ಸರ್ಕಾರ ರಚನೆ ಮಾಡಿದರೆ, ಹೆಚ್‌ಡಿ ಕುಮಾರಸ್ವಾಮಿ ಮೋದಿ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications