Gruhalakshmi Scheme: 'ಗೃಹಲಕ್ಷ್ಮಿ'ಯರು ತಿಳಿದುಕೊಳ್ಳಲೇಬೇಕಾದ ಮಹತ್ವದ ಮಾಹಿತಿ

Gruhalakshmi Scheme: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2,000 ರೂಪಾಯಿಗಳನ್ನು ಹಾಕಲಾಗುತ್ತಿದೆ. ಆದರೆ ಕಳೆದ ಕೆಲ ದಿನಗಳಿಂದ ಇದರ ದುರುಪಯೋಗ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯಡಿ ಪ್ರತಿ ತಿಂಗಳು ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಮುಂಬರುವ ದಿನಗಳಲ್ಲಿ ಕಟ್ಟುನಿಟ್ಟಿನ ಅರ್ಹತಾ ತಪಾಸಣೆ ಎದುರಾಗಲಿದೆ. ಯೋಜನೆಯ ಲಾಭವು ಕೇವಲ ಅರ್ಹ ಮಹಿಳೆಯರಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಸಮಗ್ರ ಮರುಪರಿಶೀಲನೆ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ.

Gruhalakshmi Scheme in Karnataka State New Rules Documents and 17-Question Verification Form

ಯಾವೆಲ್ಲಾ ದಾಖಲೆಗಳು ಕಡ್ಡಾಯ?

ಇಲ್ಲಿಯವರೆಗೆ ಯಜಮಾನಿಯ ಆಧಾರ್ ಕಾರ್ಡ್ ಮಾತ್ರ ಪ್ರಮುಖ ಆಧಾರವಾಗಿತ್ತು. ಆದರೆ ಪ್ರಸ್ತುತ ಹೊಸ ನಿಯಮಗಳ ಪ್ರಕಾರ, ಫಲಾನುಭವಿ ಮಹಿಳೆಯ ಗಂಡನ ಆಧಾರ್ ವಿವರಗಳನ್ನು ಒದಗಿಸುವುದು ಮತ್ತು ಲಿಂಕ್ ಮಾಡುವುದು ಕಡ್ಡಾಯವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಅಷ್ಟೇ ಅಲ್ಲದೆ, ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಅಭ್ಯರ್ಥಿಯು ಕರ್ನಾಟಕದ ನೋಂದಾಯಿತ ಮತದಾರರೇ ಎಂಬುದನ್ನು ಖಚಿತಪಡಿಸಿಕೊಂಡು, ಯೋಜನೆ ರಾಜ್ಯದ ನಿವಾಸಿಗಳಿಗೆ ಮಾತ್ರ ಸೀಮಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

17 ಪ್ರಶ್ನೆಗಳನ್ನೊಳಗೊಂಡ ಹೊಸ ಫಾರ್ಮ್‌ ತಯಾರಿ

ರಾಜ್ಯದಲ್ಲಿ ಸದ್ಯ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದ್ದು, ಇದು ಮುಗಿದ ನಂತರ ಅಧಿಕಾರಿಗಳ ತಂಡವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಲಿದೆ. ಈ ಪರಿಶೀಲನೆಗಾಗಿ ಸರ್ಕಾರದಿಂದ 17 ಪ್ರಶ್ನೆಗಳನ್ನೊಳಗೊಂಡ ಹೊಸ ಫಾರ್ಮ್‌ ಅನ್ನು ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಹತ್ವದ ಮಾಹಿತಿ

* ಫಲಾನುಭವಿಯ ಸಮ್ಮುಖದಲ್ಲೇ ಸಿಬ್ಬಂದಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ದಾಖಲಿಸಲಿದ್ದಾರೆ. ಅಷ್ಟೇ ಅಲ್ಲದೆ, ಜಿಪಿಎಸ್ ಮೂಲಕ ಮನೆಯ ಸ್ಥಳವನ್ನು ಗುರುತಿಸಲಾಗುತ್ತದೆ.

* ಅಗತ್ಯವಿದ್ದರೆ ಬಯೋಮೆಟ್ರಿಕ್ ಅಥವಾ ಮುಖ ಚಹರೆ (Facial Recognition) ಮೂಲಕ ಫಲಾನುಭವಿಯ ಗುರುತನ್ನು ದೃಢೀಕರಿಸಲಾಗುವುದು.

* ಮೊದಲ ಭೇಟಿ ವೇಳೆ ಫಲಾನುಭವಿ ಲಭ್ಯವಿಲ್ಲದಿದ್ದರೆ, ಎರಡನೇ ಬಾರಿ ಭೇಟಿ ನೀಡಲಾಗುತ್ತದೆ. ಎರಡೂ ಬಾರಿ ಸಿಗದಿದ್ದಲ್ಲಿ ನೆರೆಹೊರೆಯವರಿಂದ ಅಥವಾ ಕುಟುಂಬದವರಿಂದ ಮಾಹಿತಿ ಪಡೆದು ವರದಿ ಸಿದ್ಧಪಡಿಸಲಾಗುತ್ತದೆ.

* ಫಲಾನುಭವಿಯ ಹೆಸರು, ವಯಸ್ಸು ಆಧಾರ್ ಕಾರ್ಡ್‌ನಲ್ಲಿರುವಂತೆ ಹೊಂದಾಣಿಕೆಯಾಗಬೇಕು. ಜೊತೆಗೆ, ಯೋಜನೆಯ ಮೊತ್ತ ಜಮೆಯಾಗುವ ಬ್ಯಾಂಕ್ ಖಾತೆಗೆ ಯಾವುದೇ ಸಾಲದ ಲಿಂಕ್ ಇರಬಾರದು.

* ಅಷ್ಟೇ ಅಲ್ಲದೆ, ಯೋಜನೆಗೆ ಅನರ್ಹರಾಗಿದ್ದು ಅಥವಾ ಆರ್ಥಿಕವಾಗಿ ಸಬಲರಾಗಿ ಇನ್ಮುಂದೆ ಈ ನೆರವು ಬೇಡವೆನ್ನಿಸುವ ಫಲಾನುಭವಿಗಳಿಗೆ ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರನಡೆಯಲು ಅವಕಾಶ ನೀಡಲಾಗುತ್ತದೆ.

* ನಕಲಿ ದಾಖಲೆ ನೀಡಿ ಸೌಲಭ್ಯ ಪಡೆಯುತ್ತಿರುವವರನ್ನು ಹಾಗೂ ಒಂದೇ ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಮಂದಿ ಸೌಲಭ್ಯ ಪಡೆಯುತ್ತಿರುವವರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲು ಸೂಚಿಸಲಾಗಿದೆ.

ಪ್ರಸ್ತುತ ಸಿದ್ಧಪಡಿಸಲಾಗಿರುವ ಈ ಹೊಸ ಮಾರ್ಗಸೂಚಿಗಳಿಗೆ ಮುಖ್ಯಮಂತ್ರಿಗಳ ಅಂತಿಮ ಅನುಮೋದನೆ ದೊರೆತ ನಂತರ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಈ ಮರುಪರಿಶೀಲನೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಈ ತಪಾಸಣೆಗಳ ವೇಳೆ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳ ಸುರಕ್ಷತೆಗೆ ಸಂಪೂರ್ಣ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಭೇಟಿಯ ಸಮಯದಲ್ಲಿ ಮಾಹಿತಿ ನೀಡಲಾಗದವರು 'ಬೆಂಗಳೂರು ಒನ್', 'ಗ್ರಾಮ ಒನ್' ನಂತಹ ಸರ್ಕಾರಿ ಸೇವಾ ಕೇಂದ್ರಗಳ ಮೂಲಕ ಮರು-ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+