200,000 ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದವರಿಗೆ ಸರ್ಕಾರದಿಂದ ಬಿಗ್ ಶಾಕ್!
Gruha Lakshmi Scheme: ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ಸರ್ಕಾರ ಮಾಡಿದೆ. ಇನ್ನು ಕರ್ನಾಟಕ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 2,000 ಸಾವಿರ ರೂಪಾಯಿ ಸಕಾಲದಲ್ಲಿ ಸಿಗುತ್ತಿಲ್ಲ. ಈ ರೀತಿ ಇರುವಾಗಲೇ ಕರ್ನಾಟಕ ಸರ್ಕಾರವು 2 ಲಕ್ಷ ಗೃಹಲಕ್ಷ್ಮಿಯರಿಗೆ ಶಾಕ್ ನೀಡಿದೆ ಎಂದು ಹೇಳಲಾಗಿದೆ. ಇದರ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಮೊದಲಿ
ನಿಂದಲೂ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಲ್ಲೇ ಇದೆ. ಇದೀಗ ಗೃಹಲಕ್ಷ್ಮಿ ಯೋಜನೆಯಿಂದ ಬರೋಬ್ಬರಿ 2 ಲಕ್ಷ ಜನರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಟ್ಟಿದೆ. ಹೌದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಲ್ಲಿ ಅನರ್ಹರನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ತೆ ಮಾಡಿದೆ ಅಂತಾ ಹೇಳಲಾಗಿದ್ದು, ತೆರಿಗೆ ಪಾವತಿ ಮಾಡುತ್ತಿರುವ 2 ಲಕ್ಷ ಮಂದಿಯನ್ನು ಅನರ್ಹರು ಎಂದು ಪರಿಗಣಿಸಿ ಯೋಜನೆಯಿಂದ ಕೈಬಿಡಲು ಇಲಾಖೆ ನಿರ್ಧರಿಸಲಾಗಿದೆ.

ಈ ಯೋಜನೆ ಜಾರಿಯಾಗಿ ಎರಡೂವರೆ ವರ್ಷವಾದ ಮೇಲೆ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿ ರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತೆರಿಗೆ ಪಾವತಿ ಮಾಡುವವರು ಎಂದು ಪರಿಗಣನೆ ಮಾಡಿ, ಅನರ್ಹರು ಎಂದು ಪರಿಗಣಿಸಲಾಗಿದೆ. ಇದೀಗ ಈ ಪ್ರಕ್ರಿಯೆಯಲ್ಲಿ ಮೊದಲ ಹಂತದಲ್ಲಿ 1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳು ಇದ್ದಾರೆ.
ಪ್ರತಿ ತಿಂಗಳು ಸಹ ಹಂತ ಹಂತವಾಗಿ ಅನರ್ಹರನ್ನು ಇಲಾಖೆ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಆದಾಯ ತೆರಿಗೆ ಮಾಹಿತಿಯೊಂದಿಗೆ ತೆರಿಗೆ ಪಾವತಿ ಮಾಹಿತಿ ಮಾಡುವುದನ್ನು ಆಧರಿಸಿ ಅನರ್ಹರು ಎಂದು ಪರಿಗಣಿಸಿರುವುದಾಗಿ ಹೇಳಲಾಗಿದೆ. ಆದರೆ ಈ ಪ್ರಕ್ರಿಯೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನೀಡುವುದಾಗಿ ಪುಂಗಿ ಊದಿದ್ದ ಲೂಟಿಕೋರ ಕಾಂಗ್ರೆಸ್ ಸರ್ಕಾರವೀಗ 2,13,064 ಮಂದಿ ಮಹಿಳೆಯರಿಗೆ ಖಾಲಿ ಚೊಂಬು ನೀಡಿ ದ್ರೋಹ ಬಗೆದಿದೆ. ಸುಳ್ಳುಬುರುಕ ಸಿದ್ದರಾಮಯ್ಯ
ನವರ ಅವಾಸ್ತವಿಕ ಭರವಸೆಗಳು ದಿನ ಕಳೆದಂತೆ ಗ್ಯಾರೇಜ್ ಸೇರುತ್ತಿವೆ ಎಂಬುವುದಕ್ಕೆ ಗೃಹಲಕ್ಷ್ಮಿ ಯೋಜನೆ
ಯಿಂದ 2 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಕೈಬಿಟ್ಟಿರುವುದೇ ಸಾಕ್ಷಿ ಎಂದು ಕರ್ನಾಟಕ ವಿರೋಧ ಪಕ್ಷವಾದ ಬಿಜೆಪಿ ಟೀಕೆ ಮಾಡಿದೆ.
ಚುನಾವಣೆ ವೇಳೆ ಬಣ್ಣ ಬಣ್ಣದ ಕಾಗೆ ಹಾರಿಸಿ, ಷರತ್ತುಗಳ ಕುರಿತು ಮಾತನಾಡದೆ ಯಾಮಾರಿಸಿದ್ದ ಕಾಂಗ್ರೆಸ್ಸಿಗರ ಅಸಲಿ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯನವರೇ, ತಮ್ಮ ದಿಕ್ಕು ತಪ್ಪಿದ ಯೋಜನೆಗಳಿಂದ ಬದುಕು ಸುಧಾರಿಸುತ್ತಿಲ್ಲ, ಬದಲಿಗೆ ಬದುಕು ಅಧೋಗತಿ ತಲಪುತ್ತಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications