ಉತ್ತರ ಕರ್ನಾಟಕಕ್ಕೆ ಒಳ್ಳೆಯ ಬಸ್ ಕೊಡಿ; ಟ್ವೀಟ್ ಅಭಿಯಾನ
ಉತ್ತರ ಕರ್ನಾಟಕ ಭಾಗಕ್ಕೆ ಉತ್ತಮ ಬಸ್‌ಗಳನ್ನು ಕೊಡಿ ಎಂದು ಟ್ವೀಟರ್‌ನಲ್ಲಿ ಅಭಿಯಾನವೊಂದು ನಡೆಯುತ್ತಿದೆ.
ಬೆಂಗಳೂರು, ಫೆಬ್ರವರಿ 24; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ತನ್ನ ಉತ್ತಮ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ದೇಶದಲ್ಲಿಯೇ ನಿಗಮದ ಬಳಿ ಇರುವಷ್ಟು ಐಷಾರಾಮಿ ಬಸ್‌ಗಳು ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. 'ಅಂಬಾರಿ ಉತ್ಸವ' ಹೆಸರಿನ ಬಸ್ ಸೇವೆಗೆ ಎರಡು ದಿನಗಳ ಹಿಂದೆ ಚಾಲನೆ ನೀಡಲಾಗಿದೆ.
ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಸೌಕರ್ಯಗಳು ಸರಿಯಾಗಿಲ್ಲ. ಇರುವ ಸರ್ಕಾರಿ ಬಸ್‌ಗಳು ದಯಾನೀಯ ಸ್ಥಿತಿಯಲ್ಲಿವೆ. ಆದ್ದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಉತ್ತಮ ಬಸ್ ಕೊಡಿ ಎಂದು ಟ್ವಿಟರ್‌ನಲ್ಲಿ ಅಭಿಯಾನ ಆರಂಭವಾಗಿದೆ. ಈ ಅಭಿಯಾನಕ್ಕೆ ಕೆಎಸ್ಆರ್‌ಟಿಸಿ, ಕರ್ನಾಟಕದ ಮುಖ್ಯಮಂತ್ರಿಗಳ ಟ್ವಿಟರ್ ಹ್ಯಾಂಡಲ್ ಟ್ಯಾಗ್ ಮಾಡಲಾಗುತ್ತಿದೆ.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಅನೇಕ ನೆಟ್ಟಿಗರು ನಮಗೆ ಏಕೆ ಉತ್ತಮ ಬಸ್ ಸೌಕರ್ಯಗಳಿಲ್ಲ? ಎಂದು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಕೆಎಸ್ಆರ್‌ಟಿಸಿ, ಬಿಎಂಟಿಸಿಯಲ್ಲಿ ಓಡಿಸಿ ಹಳೆಯದಾದ ಬಸ್‌ಗಳನ್ನು ನಮ್ಮ ಭಾಗದ ಕಡೆ ನೀಡಬೇಡಿ ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

'ನಿಮಗೆ ಲೋಕಾರ್ಪಣೆ ಅರ್ಥ ಗೊತ್ತ ಉತ್ತರ ಕರ್ನಾಟಕದ ಜನ ಅಂದ್ರೆ ಅಷ್ಟು ಕೀಳಾಗಿ ನೋಡ್ತಿರಾ ನಮ್ಮ ಜನ ದುಡ್ಡು ಕೊಟ್ಟು ಪ್ರಯಾಣ ಮಾಡೋದಿಲ್ಲವ. ಅಂದ್ರೆ ಹೊಸ hitech ಬಸ್ಸುಗಳು ಕೇವಲ ಪಕ್ಕದ ರಾಜ್ಯಗಳಿಗೆ ಕೊಟ್ಟು ಉತ್ತರ ಕರ್ನಾಟಕಕ್ಕೆ ಸ್ಕ್ರಾಪ್ ಡಕೋಟ ಬಸ್ಸು ಕೊಟ್ಟು ಜನರ ಜೀವದ ಜೊತೆ ಆಟ ಆಡ್ತೀರಾ?' ಎಂದು ಟ್ವೀಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರು ಅಭಿಯಾನ ಆರಂಭಿಸಿದ್ದಾರೆ.
ಉತ್ತರ ಕರ್ನಾಟಕದ ಎಂಎಲ್ಎ ಗಳಿಗೆ ಇದನೆಲ್ಲ ಕೇಳಬೇಕು ಅಂತ ಅನ್ನಿಸೋದೆ ಇಲ್ವಾ? @AppugoudaPatil @b_mattimadu @UmeshJadhav_BJP @khaneezaFatima @Dr_Ajay_Singh @PriyankKharge @bhagwantkhuba @BSBommai @KSRTC_Journeys pic.twitter.com/340uEOLYut
— Kalaburagi Kampu (@Kalaburagikampu) February 22, 2023
ಮತ್ತೊಂದು ಟ್ವೀಟ್‌ನಲ್ಲಿ ಬಸ್‌ಗಳ ಚಿತ್ರಗಳನ್ನು ಹಾಕಿ, 'ಇದು ನೋಡಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಮಧ್ಯ ಇರುವ ಅಂತರ, ಅವರು ಮನುಷ್ಯರು, ನಾವು ಜೀತದಾಳುಗಳು, ಸರ್ಕಾರ ಉತ್ತರ ಕರ್ನಾಟಕದ ಜನರನ್ನು ಸರ್ಕಾರ ಅಸ್ಪೃಶ್ಯರಂತೆ ನೋಡುತ್ತಿದೆ' ಎಂದು ಆರೋಪ ಮಾಡಲಾಗಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳು ಯಾವ ಪಾಪ ಮಾಡಿವೆ @KSRTC_Journeys? ಯಾಕೆ ಈ ಭಾಗವನ್ನು ಸವತಿ ಮಕ್ಕಳಂತೆ ಕಾಣುತ್ತಿದ್ದಿರಿ? ಇವು ಕರ್ನಾಟಟಕದ ಭೌಗೋಳಿಕ ಭಾಗ ಅಲ್ಲವೇ? ನಿಮ್ಮ ಅಂಬಾರಿ ಹೊರಲು ಈ ರಸ್ತೆಗಳಿಗೆ ತಾಕತ್ ಇಲ್ಲವೇ?' ಎಂದು ಪ್ರಶ್ನಿಸಲಾಗಿದೆ.
ಕೆಎಸ್ಆರ್‌ಟಿಸಿಯ ಅಂಬಾರಿ ಬಸ್ ಚಿತ್ರವನ್ನು ಟ್ವೀಟ್‌ನಲ್ಲಿ ಹಾಕಿ, 'ಉತ್ತರ ಕರ್ನಾಟಕದ ಎಂಎಲ್ಎ ಗಳಿಗೆ ಇದನೆಲ್ಲ ಕೇಳಬೇಕು ಅಂತ ಅನ್ನಿಸೋದೆ ಇಲ್ವಾ?' ಎಂದು ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ 'ಕರ್ನಾಟಕದ ಜನರ ತೆರಿಗೆ ದುಡ್ಡಿನಿಂದ ಅನ್ಯ ರಾಜ್ಯಗಳಿಗೆ ಬಸ್ ಏಕೆ ಬಿಡಬೇಕು? ಇದರಿಂದ ಅನ್ಯ ರಾಜ್ಯದ ಜನರಿಗೆ ಅನುಕೂಲ ಅಲ್ಲವೇ? ಬೆಂಗಳೂರಿನಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಏಕೆ ಈ ಹೊಸ ಬಸ್ ವ್ಯವಸ್ಥೆ ಕಲ್ಪಿಸಬಾರದು' ಎಂದು ಧ್ವನಿ ಎತ್ತಲಾಗಿದೆ.
ಟ್ವೀಟ್‌ನಲ್ಲಿ, 'ಕರ್ನಾಟಕದ ಜನರ ತೆರಿಗೆ ದುಡ್ಡಿನಿಂದ ಅನ್ಯ ರಾಜ್ಯಗಳಿಗೆ ಬಸ್ ಏಕೆ ಬಿಡಬೇಕು? ಇದರಿಂದ ಅನ್ಯ ರಾಜ್ಯದ ಜನರಿಗೆ ಅನುಕೂಲ ಅಲ್ಲವೇ? ಬೆಂಗಳೂರಿನಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಏಕೆ ಈ ಹೊಸ ಬಸ್ ವ್ಯವಸ್ಥೆ ಕಲ್ಪಿಸಬಾರದು?' ಎಂದು ಪ್ರಶ್ನಿಸಲಾಗಿದೆ.
ಬಸ್ ಮಾತ್ರವಲ್ಲ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ರೈಲು ಯೋಜನೆಗಳು, ಬೆಂಗಳೂರಿಗೆ ಇರುವ ರೈಲು ಸೌಕರ್ಯಗಳ ಬಗ್ಗೆಯೂ ಸರಣಿ ಟ್ವೀಟ್ ಮಾಡಲಾಗುತ್ತಿದೆ.












Click it and Unblock the Notifications