ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ: ಕೆಆರ್‌ಎಸ್ ಡ್ಯಾಂ ಮಟ್ಟ ಶೀಘ್ರದಲ್ಲೇ 100 ಅಡಿ!
ಕರ್ನಾಟಕದಲ್ಲಿ ಭರ್ಜರಿ ಮಳೆ ಬೀಳುತ್ತಿರುವ ಕಾರಣಕ್ಕೆ ಕರ್ನಾಟಕದ ಬಹುತೇಕ ಡ್ಯಾಂ & ಹಳ್ಳ-ಕೊಳ್ಳಗಳು ತುಂಬಿಕೊಳ್ಳುತ್ತಿವೆ. ಹಾಗೇ ಕೆರೆ & ಕಟ್ಟೆಗಳಿಗೆ ಭಾರಿ ನೀರು ಹರಿದು ಬರುತ್ತಿದೆ. ಅದ್ರಲ್ಲೂ ಬೆಂಗಳೂರಿಗೆ ಕುಡಿಯುವ ನೀರಿನ ಮೂಲವಾದ ಕೆಆರ್‌ಎಸ್ ಡ್ಯಾಂ ಈಗ ಮತ್ತೆ ಜೀವಕಳೆ ತುಂಬಿಕೊಳ್ಳುತ್ತಿದೆ. ಹಾಗಾದರೆ ಇದೀಗ ಕನ್ನಂಬಾಡಿ ಕಟ್ಟೆಯಲ್ಲಿ ಎಷ್ಟು ನೀರಿದೆ? ಮುಂದೆ ಓದಿ.
ಮಳೆ.. ಮಳೆ.. ಮಳೆ.. ಹೀಗೆ ಮಳೆ ಅನ್ನೋದು ಮನುಷ್ಯರ ಬದುಕಿನ ಒಂದು ಅಂಶ. ಮಳೆ ಇಲ್ಲದೆ ಮನುಷ್ಯರ ಜೀವನ ಊಹೆಗು ಕೂಡ ನಿಲುಕದು ಯಾಕಂದ್ರೆ ಮನುಷ್ಯರ ಬಹು ಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರಿಲ್ಲದೆ ಮನುಷ್ಯರು, ಏನೂ ಮಾಡಲು ಆಗದು. ಪ್ರಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋದರೆ ಮಾತ್ರ ಸರಿಯಾಗಿ ಮಳೆ & ಬೆಳೆ ಆಗುತ್ತದೆ. ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಿಕರು ಉಳಿಸಿಕೊಂಡು ಬಂದ ಪ್ರಕೃತಿ ರಕ್ಷಣೆ ನಮ್ಮ ಹೊಣೆಯಾಗಿದೆ.

ಕೆಆರ್‌ಎಸ್ ನೀರಿನ ಮಟ್ಟ ಎಷ್ಟು?
ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ತಪ್ಪುಗಳಿಂದ ಸಾಕಷ್ಟು ಸಮಸ್ಯೆಗಳ ಎದುರಿಸುವ ವಾತಾವರಣ ನಿರ್ಮಾಣ ಆಗಿದೆ. ಸರಿಯಾದ ಸಮಯಕ್ಕೆ ಮಳೆಯೇ ಬೀಳುತ್ತಿಲ್ಲ. ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ 2023 ರಲ್ಲಿ ಇಡೀ ಜಗತ್ತು ದೊಡ್ಡ ವಿಪತ್ತು ಎದುರಿಸಿದ್ದು, ಈ ವರ್ಷದ ಬೇಸಿಗೆ ಸಮಯದಲ್ಲಿ ನರಕ ನೋಡಿದ್ದಾರೆ ಜನ. ಹೀಗಾಗಿ ಮಳೆಗಾಗಿ ಕಾಯುತ್ತಿದ್ದ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಿದೆ, ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ? ಮುಂದೆ ಓದಿ.
ಎಷ್ಟು ನೀರು ಸಂಗ್ರಹ ಇದೆ?
ಕಾವೇರಿ ನದಿ ಪ್ರದೇಶದಲ್ಲಿರುವ ಹಾರಂಗಿ ಜಲಾಶಯದಲ್ಲಿ 3.79 ಟಿಎಂಸಿ, ಹೇಮಾವತಿ ಜಲಾಶಯದಲ್ಲಿ 12.76 ಟಿಎಂಸಿ, ಕೆಆರ್‌ಎಸ್ ಜಲಾಶಯದಲ್ಲಿ 17.68 ಟಿಎಂಸಿ ಹಾಗೂ ಕಬಿನಿ ಜಲಾಶಯದಲ್ಲಿ 14.31 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಈ ಎಲ್ಲಾ ಡ್ಯಾಂ ಸೇರಿಸಿ ಒಟ್ಟಾರೆ ಕಾವೇರಿ ಕೊಳ್ಳದಲ್ಲಿ 48.54 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಪ್ರಭಾವದಿಂದ ಇದೀಗ ನೀರಿನ ಮಟ್ಟ ಕೂಡ ವೇಗವಾಗಿ ಏರಿಕೆ ಕಾಣುತ್ತಿದೆ. ಅದರಲ್ಲೂ ಕೆಆರ್‌ಎಸ್ ಡ್ಯಾಂಗೆ ಈಗ 18,644 ಕ್ಯೂಸೆಕ್ ಒಳಹರಿವು ಇದ್ದು, ಶೀಘ್ರದಲ್ಲೇ 100 ಅಡಿ ತಲುಪುವ ನಿರೀಕ್ಷೆ ಇದೆ.
ಯಾವ ಯಾವ ಡ್ಯಾಂಗೆ ಎಷ್ಟು ನೀರು?
ಆಲಮಟ್ಟಿ ಜಲಾಶಯದಲ್ಲಿ ಇದೀಗ 34.46 ಟಿಎಂಸಿ ನೀರು ಇದ್ದು, 7,895 ಕ್ಯೂಸೆಕ್ ಒಳಹರಿವು ಇದೆ. ತುಂಗಭದ್ರಾ ಜಲಾಶಯಕ್ಕೆ ಕೂಡ ಉತ್ತಮವಾಗಿ ಒಳಹರಿವು ಇದ್ದು, 1819 ಕ್ಯುಸೆಕ್ ಹರಿದು ಬರುತ್ತಿದೆ ಹೀಗಾಗಿ 5.27 ಟಿಎಂಸಿ ನೀರಿನ ಸಂಗ್ರಹ ಇದೆ. ಹೀಗೆ ಲಿಂಗನಮಕ್ಕಿ ಜಲಾಶಯಕ್ಕೆ 9,184 ಕ್ಯೂಸೆಕ್ ಒಳಹರಿವು ಇದ್ದರೆ 17.78 ಟಿಎಂಸಿ ಈಗ ನೀರಿನ ಸಂಗ್ರಹ ಇದೆ. ಕಬಿನಿ ಜಲಾಶಯಕ್ಕೆ 17,873 ಕ್ಯೂಸೆಕ್ ಒಳಹರಿವು ಇದ್ದು, ಈ ಸಮಯದಲ್ಲಿ 14.31 ಟಿಎಂಸಿ ನೀರು ಬಾಕಿ ಉಳಿದಿದೆ.
ಬೆಂಗಳೂರಿನಲ್ಲೂ ಮಳೆ ಗ್ಯಾರಂಟಿ!
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು & ಶಿವಮೊಗ್ಗ ಜಿಲ್ಲೆಗಳನ್ನ ಹೊರತುಪಡಿಸಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ರಾಮನಗರ, ಚಾಮರಾಜನಗರ, ತುಮಕೂರು, ದಾವಣಗೆರೆ ಜಿಲ್ಲೆ, ಹಾಸನ, ಚಿಕ್ಕಮಗಳೂರಲ್ಲಿ ಹಗುರ ಮಳೆ ಬೀಳಲಿದೆ. ಹೀಗಾಗಿ ಅಲರ್ಟ್ ಘೋಷಿಸಲಾಗಿದೆ.
ಈ ನಡುವೆ ಕಾವೇರಿ ಕೊಳ್ಳದಲ್ಲಿ ಕೂಡ ಮತ್ತೆ ಮಂದಹಾಸ ಮೂಡಿದೆ. ಭಾರಿ ಪ್ರಮಾಣದ ನೀರು ಈಗ ಕಾವೇರಿ ಕೊಳ್ಳದ ನದಿಗಳಿಗೆ ಹರಿದು ಹರಿದು ಬರುತ್ತಿದೆ. ಅದರಲ್ಲೂ ಮಳೆ ಅಬ್ಬರ ಕಂಡು ರೈತರು ಖುಷ್ ಆಗಿದ್ದು, ಇನ್ನೂ ಕೆಲ ದಿನಗಳ ಕಾಲ ಇದೇ ರೀತಿ ಮಳೆ ಎಂಟ್ರಿ ಆಗಿದ್ದೇ ನಿಜವಾದರೆ ಜಲಾಶಯಗಳು ತುಂಬಿ ತುಳುಕಲಿವೆ.












Click it and Unblock the Notifications