ಉಚಿತದ ಹೊರೆಯನ್ನು ಶ್ರೀಸಾಮಾನ್ಯನ ತಲೆ ಮೇಲಿಟ್ಟ ಸರ್ಕಾರ
ಬೆಂಗಳೂರು, ಮಾರ್ಚ್, 02: ವಿಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ವಿರುದ್ಧ ಪುಂಖಾನು ಪುಂಖವಾಗಿ ಆರೋಪಗಳನ್ನು ಮಾಡುವ ಯಾವುದೇ ರಾಜಕೀಯ ಪಕ್ಷ ತಾನು ಅಧಿಕಾರಕ್ಕೆ ಬಂದಾಗ ತಾವು ವಿರೋಧಪಕ್ಷದಲ್ಲಿದ್ದಾಗ ಮಾಡಿದ ಆರೋಪಗಳೆಲ್ಲವನ್ನು ಮರೆತು ಸ್ವಹಿತ ಬಯಸಲು ಆರಂಭಿಸುತ್ತಾರೆ. ಅಷ್ಟೇ ಅಲ್ಲದೆ ಎಂದೆಂದಿಗೂ ನಮಗೆ ಅಧಿಕಾರ ಶಾಶ್ವತವಾಗಿರುತ್ತದೆ. ಮತದಾರರನ್ನು ನಮ್ಮನ್ನೇ ಮುಂದೆಯೂ ಅಧಿಕಾರಕ್ಕೆ ತರುತ್ತಾರೆ ಎಂಬ ಭ್ರಮೆಯಲ್ಲಿ ತೇಲಾಡುತ್ತಾರೆ.
ಜನರ ಆಶೋತ್ತರಗಳನ್ನು ಈಡೇರಿಸಬೇಕು ಎಂಬುದನ್ನು ಮರೆತು ತಮ್ಮ ನಡವಳಿಕೆ ತೋರಿಸುತ್ತಾರೆ. ಇದು ಎಲ್ಲಾ ಪಕ್ಷಗಳ ನಾಯಕರು ಅಧಿಕಾರದಲ್ಲಿದ್ದಾಗ ವರ್ತಿಸುವ ರೀತಿ ನೀತಿಗಳಾಗಿದ್ದು, ಇದ್ಯಾವುದೂ ಬದಲಾಗುವುದು ಕಷ್ಟವೇ.

ರಾಜಕೀಯ ಪಕ್ಷಗಳ ಉದ್ದೇಶಗಳು ಅಧಿಕಾರಕ್ಕೆ ಬಂದ ತಕ್ಷಣ ಬದಲಾಗಿ ಬಿಡುತ್ತವೆ. ತಮ್ಮನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಸಂಘಟನೆಗಳು, ಸಮುದಾಯ, ಕಾರ್ಯಕರ್ತರು ಹೀಗೆ ಎಲ್ಲರನ್ನು ಮರೆತು ಬಿಡುತ್ತಾರೆ. ಚುನಾವಣೆಗೆ ಮುನ್ನ ಮಠಮಾನ್ಯ, ದೇಗುಲ, ಸಮುದಾಯ ಹೀಗೆ ಎಲ್ಲ ಕಡೆ ಓಡಾಡಿ ಕೈಕಾಲು ಹಿಡಿದು ಮತ ಕೇಳುವ ನಾಯಕರು ಬಳಿಕ ಎಲ್ಲರಿಗೂ ಎಳ್ಳು ನೀರು ಬಿಟ್ಟು ಬಿಡುತ್ತಾರೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಿಗೆ ಮಣ್ಣುಹಾಕಿ ಸಮಾಧಿ ಮಾಡಿ ಬಿಡುತ್ತಾರೆ.
ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರಗಳಿರಲಿ ಅವು ನಾವು ಜನತೆಗೆ ದೊಡ್ಡ ಉಪಕಾರ ಮಾಡಿಬಿಟ್ಟೆವು ಎಂದು ಬೆನ್ನುತಟ್ಟಿಕೊಳ್ಳುವ ಯಾವುದೇ ಅಗತ್ಯವೇನಿಲ್ಲ. ಸರ್ಕಾರ ನಡೆಸುವ ಯಾವ ನಾಯಕರು ಕೂಡ ತಮ್ಮ ಮನೆಯಿಂದ ಸಂಪನ್ಮೂಲಗಳನ್ನು ತಂದು ಜನರಿಗೆ ನೀಡಿದ ಉದಾಹರಣೆಗಳಿಲ್ಲ. ಜನಸಾಮಾನ್ಯರ ತೆರಿಗೆ ಹಣದಿಂದ ಒಂದಿಷ್ಟು ಒಳ್ಳೆ ಕೆಲಸಗಳನ್ನು ಮಾಡಿರಬಹುದಷ್ಟೆ. ಕೆಲ ನಾಯಕರು ಚುನಾವಣೆ ವೇಳೆ ಮತಕ್ಕಾಗಿ ತಮ್ಮ ಹಣವನ್ನು ಖರ್ಚು ಮಾಡಿರಬಹುದೇನೋ? ಅದರಾಚೆಗೆ ಜನಕಲ್ಯಾಣಕ್ಕಾಗಿ ಮನೆಯಿಂದ ಹಣವನ್ನು ತಂದು ಹಂಚುವವರು ಯಾರೂ ಇಲ್ಲ.
ಸರ್ಕಾರಿ ಸವಲತ್ತು ಪಡೆಯುವವರು ಸಮಾಜಸೇವಕರೇ?: ರಾಜಕೀಯ ನಾಯಕರನ್ನು ಮತದಾರರು ಆಯ್ಕೆ ಮಾಡಿ ಕಳುಹಿಸುವುದೇ ಜನ ಸೇವೆ ಮಾಡಲೆಂದು. ಹೀಗಿರುವಾಗ ಜನರಿಗಾಗಿ ಯಾವುದಾದರೂ ಯೋಜನೆಗಳ ಮೂಲಕ ಒಳಿತಾಗುವಂತೆ ಮಾಡಿದರೆ ಅದರಲ್ಲಿ ಸಾಧನೆ ಏನು ಬಂತು? ತಮಗೇನು ಮಾಡಿಕೊಳ್ಳದೆ ತಾವು ದುಡಿದ ಸಂಪಾದನೆಯಲ್ಲಿ ಸಮಾಜ ಸೇವೆ ಮಾಡುವ ಜನ ಬೇಕಾದಷ್ಟಿದ್ದಾರೆ.
ಸಮಾಜ ಸೇವೆ ಮಾಡುವ ಜನರ ಮುಂದೆ ರಾಜಕೀಯ ನಾಯಕರು ಶೂನ್ಯವೇ ಸರಿ. ಆದರೂ ಸಾರ್ವಜನಿಕರ ಹಣವನ್ನು ತಮ್ಮದೇ ಹಣ ಎಂಬಂತೆ ಬಿಂಬಿಸಿಕೊಂಡು ಸಮಾಜ ಸೇವೆ ಮಾಡಿದೆವು ಎಂದು ಹೇಳಿಕೊಂಡು ತಿರುಗಾಡುವ ನಾಯಕರನ್ನು ಜನ ದೂರವಿಡಬೇಕಾಗಿದೆ. ರಾಜಕೀಯವನ್ನೇ ಸಂಪಾದನೆ ಎಂಬಂತೆ ಮಾಡಿಕೊಂಡು ತಾವು ಮಾತ್ರವಲ್ಲದೆ, ತಮ್ಮ ಇಡೀ ಕುಟುಂಬವನ್ನು ದುಂಡಗೆ ಮಾಡಿಕೊಂಡಿರುವ ನಾಯಕರು ನಮ್ಮ ದೇಶದಲ್ಲಿ ಬೇಕಾದಷ್ಟು ಮಂದಿಯಿದ್ದಾರೆ.
ರಾಜಕೀಯ ನಾಯಕರಲ್ಲಿ ಎಷ್ಟು ಜನ ಸಮಾಜಕ್ಕಾಗಿ ಬದುಕುತ್ತಿದ್ದಾರೆ? ಎಂದು ನೋಡಿದರೆ ಫಲಿತಾಂಶ ಮಾತ್ರ ಶೂನ್ಯ. ಆಡಳಿತದಲ್ಲಿ ಇರುವ ಸಮಾಜ ಸೇವಕರು ಅರ್ಥಾತ್ ಜನಪ್ರತಿನಿಧಿಗಳಿಗೆ ಸರ್ಕಾರ ಹಲವು ರೀತಿಯ ಸೌಲಭ್ಯಗಳನ್ನು ನೀಡಿದೆ. ಅದೆಲ್ಲವನ್ನು ಬಳಸಿಕೊಂಡ ಮೇಲೆ ಅವರು ಹೇಗೆ ಸಮಾಜ ಸೇವಕರಾಗಲು ಸಾಧ್ಯ ಎಂಬ ಪ್ರಶ್ನೆ ಮೂಡದಿರದು.
ಮತ ತಂದು ಕೊಡುವ ಉಚಿತ ಯೋಜನೆ: ಇವತ್ತಿನ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಟಾಸ್ಕ್ ಎಂದರೂ ತಪ್ಪಾಗಲಾರದು. ಹಿಂದೆ ಚುನಾವಣೆ ಸಮಯದಲ್ಲಿ ಮತ ಸೆಳೆಯುವ ಸಲುವಾಗಿ ಹತ್ತಾರು ಭರವಸೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ನೀಡುತ್ತಿದ್ದರು. ಜನ ಮತನೀಡಿದ ಬಳಿಕ ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಭರವಸೆಗಳ ಪೈಕಿ ಒಂದಷ್ಟನ್ನು ಈಡೇರಿಸಿದರೆ ಅದೇ ಸಾಧನೆ. ಇಲ್ಲದಿದ್ದರೆ ಇಲ್ಲ.
ಇತ್ತೀಚೆಗಿನ ದಿನಗಳಲ್ಲಿ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದ್ದರೂ ಗ್ಯಾರಂಟಿ ಯೋಜನೆಗಳನ್ನು ನೀಡಲು ರಾಜಕೀಯ ಪಕ್ಷಗಳು ಆರಂಭಿಸಿವೆ. ಈ ಉಚಿತ ಯೋಜನೆಗಳು ಜನಪ್ರಿಯವಾಗ ತೊಡಗಿವೆ. ಆದರೆ ಮುಂದೆ ಯಾವ ರೀತಿ ತೊಂದರೆಗಳು ಆಗುತ್ತವೆ ಎನ್ನುವುದನ್ನು ಮಾತ್ರ ಯೋಚನೆ ಮಾಡುತ್ತಿಲ್ಲ.
ಇದರಿಂದ ಸಮಾಜಕ್ಕೆ ತೊಂದರೆ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗಿದ್ದರೂ, ವಯಕ್ತಿಕವಾಗಿ ತಮಗೆ ಒಂದಿಷ್ಟು ಆದಾಯ ಬರುತ್ತದೆ ಎಂಬ ಸಮಾಧಾನ ಮತ್ತು ಖುಷಿ ಮತದಾರರಲ್ಲಿದೆ. ಸಾರ್ವಜನಿಕವಾಗಿ ನೋಡುವುದಾದರೆ ಉಚಿತ ಯೋಜನೆಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗುತ್ತಿದೆ. ಹಾಗಾದ್ರೆ, ಉಚಿತ ಯೋಜನೆಗಳು ಬೇಡವೇ? ಹಾಗೆಂದು ಹೇಳಲಾಗುವುದಿಲ್ಲ. ಅದು ಯಾರಿಗೆ ನೀಡಬೇಕಾಗಿತ್ತೋ ಅವರಿಗಷ್ಟೆ ನೀಡಿದ್ದರೆ ಅದರಿಂದ ಬಡತನದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು.
ಸರ್ಕಾರಕ್ಕೆ ಉಚಿತದ ಹೊರೆ, ಜನಕ್ಕೆ ಬೆಲೆ ಏರಿಕೆಯ ಬರೆ: ಇವತ್ತು ಅವೈಜ್ಞಾನಿಕವಾಗಿ ಉಚಿತ ಯೋಜನೆಗಳನ್ನು ನೀಡಿದ್ದರಿಂದ ಉಪಯೋಗಕ್ಕಿಂತ ದುರುಪಯೋಗ ಆಗುತ್ತಿದೆ. ಸರ್ಕಾರದ ಖಜಾನೆ ಬರಿದಾಗುತ್ತಿದೆ. ಅದನ್ನು ಭರಿಸಲು ತೆರಿಗೆ, ಬೆಲೆ ಏರಿಕೆ ಮಾಡಿ ಎಲ್ಲರಿಗೂ ಬರೆ ಎಳೆಯಲಾಗುತ್ತಿದೆ. ಮತದಾರರನ್ನು ಸೆಳೆದು ಮತ ಪಡೆದು ಅಧಿಕಾರಕ್ಕೆ ಬಂದರಾಯಿತು. ಆಮೇಲೆ ನೋಡಿಕೊಳ್ಳೋಣ ಎಂಬ ಆಲೋಚನೆಗಳಿಂದ ಅವೈಜ್ಞಾನಿಕವಾಗಿ ಕೆಲವೊಂದು ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳತ್ತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಇತ್ತೀಚೆಗಿನ ಚುನಾವಣೆಗಳನ್ನು ಗಮನಿಸಿದರೆ, ಎಲ್ಲಾ ಪಕ್ಷಗಳು ಉಚಿತ ಯೋಜನೆಗಳನ್ನು ಘೋಷಿಸದಿದ್ದರೆ, ಗೆಲುವು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಆದ್ದರಿಮದ ಕಲರ್ ಕನ್ನಡ ಹಾಕುತ್ತಿದ್ದಾರೆ. ನಾವು ಕಣ್ಣಿದ್ದು ಕುರುಡರಾಗುತ್ತಿದ್ದೇವೆ. ಇದು ಹೀಗೆಯೇ ಮುಂದುವರೆದರೆ ದೇಶದ ಗತಿಯೇನು? ಈಗಾಗಲೇ ಉಚಿತ ಯೋಜನೆಗಳನ್ನು ಜಾರಿ ಮಾಡಿರುವ ಬಹುತೇಕ ರಾಜ್ಯಗಳ ಪರಿಸ್ಥಿತಿ ಸಂಕಷ್ಟಕ್ಕೀಡಾಗಿದೆ. ಸಾಲದ ಹೊರೆ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ಜನರನ್ನು ಸುಡುತ್ತಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದೆಲ್ಲವೂ ಜನರ ಕಣ್ಣಮುಂದೆಯೇ ಇದೆ. ಹಾಗಾದರೆ ಜನ ಎಚ್ಚೆತ್ತುಕೊಳ್ಳುವುದು ಯಾವಾಗ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.
-
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
Cabinet Reshuffle: ಶಾಸಕರ ದೆಹಲಿಗೆ ಭೇಟಿ ತಪ್ಪಿಲ್ಲ, ಸಂಪುಟ ಪುನರ್ರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಿದ್ದರಾಮಯ್ಯ -
ದಾವಣಗೆರೆ ಬೈಎಲೆಕ್ಷನ್ ಬೆನ್ನಲ್ಲೇ ಭಿನ್ನಮತ ಸ್ಫೋಟ: KPCC ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ -
Vijay: ಇದು ತಲೆಮಾರಿನ ಬದಲಾವಣೆಗಾಗಿ ನಡೆಯುತ್ತಿರುವ ಚುನಾವಣೆ: ಕಾರ್ಯಕರ್ತರಿಗೆ ದಳಪತಿ ವಿಜಯ್ ವಿಶೇಷ ಕರೆ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ











Click it and Unblock the Notifications