ಜಗದೀಶ್ ಶೆಟ್ಟರ್ ರಾಮ ಮಂದಿರ ವಿಚಾರದಲ್ಲಿ ಅಡ್ವಾಣಿ & ಜೋಶಿ ಅವರ ಬಗ್ಗೆ ಹೇಳಿದ್ದೇನು?

ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳೆ ಟಿಕೆಟ್ ಸಿಗಲಿಲ್ಲ ಅಂತಾ ಮುನಿಸಿಕೊಂಡು ಕಾಂಗ್ರೆಸ್ ಕಡೆಗೆ ಹೋದರು. ಹೀಗಿದ್ದಾಗ ಜಗದೀಶ್ ಶೆಟ್ಟರ್ ಅವರು ವಾಪಸ್ ಬಿಜೆಪಿಗೆ ಬರ್ತಾರೆ ಎಂಬ ಮಾತು ಓಡಾಡುತ್ತಿರುವ ಸಮಯಕ್ಕೆ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ & ಮುರಳಿ ಮನೋಹರ ಜೋಶಿ ಅವರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಜಗದೀಶ್ ಶೆಟ್ಟರ್ ಹೇಳಿದ್ದು ಏನು?

ರಾಮ ಮಂದಿರಕ್ಕಾಗಿ ಅವಿರತ ಹೋರಾಟ ಮಾಡಿದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರ ಕಡೆಗಣನೆ ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿ ಆಂತರಿಕ ವಿಚಾರನ ಪ್ರಸ್ತಾಪ ಮಾಡಿದರು. ಇದೇ ಸಮಯದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ & ಮುರಳಿ ಮನೋಹರ ಜೋಶಿ ಅವರ ಬಗ್ಗೆಯು ಮಾತನಾಡಿದರು. ಹೀಗೆ ಮಾಜಿ ಬಿಜೆಪಿ ನಾಯಕ & ಹಾಲಿ ಕಾಂಗ್ರೆಸ್ ಲೀಡರ್ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಅವರ ಸಂಪೂರ್ಣ ಹೇಳಿಕೆ ಮುಂದೆ ಇದೆ.

Discover Why Jagadish Shettar Supports LK Advani And Murli Manohar Joshi

ಅಡ್ವಾಣಿ & ಜೋಶಿ ಪರ ನಿಂತ ಶೆಟ್ಟರ್!

ಹೌದು, ಬಿಜೆಪಿ ವರಿಷ್ಠರ ಬಗ್ಗೆ ಪರೋಕ್ಷವಾಗಿ ಮತ್ತೆ ಬೇಸರ ಹೊರಹಾಕಿದ ಜಗದೀಶ್ ಶೆಟ್ಟರ್, 'ಅಡ್ವಾಣಿ ಅವರು ತಮ್ಮ ಜೀವನ ಪೂರ್ತಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿದ್ದರು. ಹೀಗಿದ್ದಾಗ ಮೂರ್ತಿ ಪ್ರತಿಷ್ಠಾಪನೆ ವೇಳೆ ಅವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಇಬ್ಬರೂ ಗಣ್ಯರನ್ನ ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ವಯಸ್ಸಿನ ಕಾರಣ ಹೇಳಿ ಅವರು ಬರೋದೆ ಬೇಡ ಅನ್ನೋದು ಸರಿಯಲ್ಲ' ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ ಜಗದೀಶ್ ಶೆಟ್ಟರ್. ಹೀಗೆ ಬಿಜೆಪಿಗೆ ಮತ್ತು ಬಿಜೆಪಿ ವರಿಷ್ಠರಿಗೆ ಜಗದೀಶ್ ಶೆಟ್ಟರ್ ಬುದ್ಧಿ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆ ಈಗ ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವರಿಷ್ಠರ ವಿರುದ್ಧ ಪರೋಕ್ಷ ಅಸಮಾಧಾನ?

ಬಿಜೆಪಿಯಲ್ಲಿ ಹಿಂದಿನಿಂದ ಹಿರಿಯರನ್ನು ಕಡೆಗಣನೆ ಮಾಡಲಾಗ್ತಿದೆ. ಈಗಾಗಲೇ ಅಡ್ವಾಣಿ ಮತ್ತು ಮನೋಹರ್ ಜೋಶಿ ಅವರನ್ನ ಮೂಲೆಗುಂಪು ಮಾಡಲಾಗಿದೆ. 75 ವರ್ಷ ದಾಟಿದೆ ಎಂಬ ಕಾರಣ ನೀಡಿ ಮೂಲೆಗುಂಪು ಮಾಡಲಾಗಿದೆ. ಈಗ ಅಯೋಧ್ಯಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ವಯಸ್ಸಿನ ನೆಪ ಹೇಳೋದು ಸರಿಯಲ್ಲ. ಅಂತಹ ಹಿರಿಯ ನಾಯಕರನ್ನು ಕರೆಸಬೇಕು ಎಂದು ಈಗ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದು ಬಿಜೆಪಿ ವರಿಷ್ಠರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

Discover Why Jagadish Shettar Supports LK Advani And Murli Manohar Joshi

ಒಟ್ನಲ್ಲಿ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾದ ಸಮಯದಲ್ಲೇ ಬಿಜೆಪಿ ಪಕ್ಷದಿಂದಲೇ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರು, ಕಮಲ ಪಾಳಯದ ವರಿಷ್ಠರಿಗೆ ಸಲಹೆ ನೀಡಿದ್ದಾರೆ. ಹಾಗೇ ಇದರ ಜೊತೆಗೆ ಹಿರಿಯರಿಗೆ ಬೆಲೆ ನೀಡಿ ಎನ್ನುವ ಬುದ್ಧಿ ಮಾತು ಕೂಡ ಹೇಳಿದ್ದಾರೆ. ಈ ಮೂಲಕ ಜಗದೀಶ್ ಶೆಟ್ಟರ್ ಅವರ ನಡೆ ಕುತೂಹಲ ಕೆರಳಿಸಿದೆ. ಮತ್ತೊಂದು ಕಡೆ ಕಾಂಗ್ರೆಸ್‌ನ ಟಿಕೆಟ್ ಪಡೆದು ಜಗದೀಶ್ ಶೆಟ್ಟರ್ ಲೋಕಸಭೆಗೂ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಕೂಡ, ಇದೀಗ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಎಲ್ಲಾ ಕುತೂಹಲಕ್ಕೆ ಇನ್ನು ಕೆಲವೇ ದಿನದಲ್ಲಿ ಉತ್ತರ ಕೂಡ ಸಿಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+