Karnataka Rain: ತಮಿಳುನಾಡಿಗೆ ಹರಿದ ಕೆಆರ್‌ಎಸ್ ಡ್ಯಾಂ ನೀರು!

ಕರ್ನಾಟಕದಲ್ಲಿ ಮತ್ತೆ ಮಳೆ ಕೊರತೆ ಕಾಡಲಾರಂಭಿಸಿದೆ. ಕಳೆದ ತಿಂಗಳು ಅಂದರೆ ಜುಲೈ ಪೂರ್ತಿ ಉತ್ತಮ ಮಳೆ ಬಿದ್ದರೂ ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಡುತ್ತಿದೆ. ಹೀಗಾಗಿ ನಮ್ಮ ರಾಜ್ಯದ ಪ್ರಮುಖ ಜಲಾಶಯಗಳೇ ತುಂಬಿಲ್ಲ. ಇದೇ ಪರಿಸ್ಥಿತಿಯಲ್ಲಿ ತಮಿಳುನಾಡು ನೀರು ಬಿಡುವಂತೆ ಕಿರಿಕ್ ಶುರು ಮಾಡಿದ್ದು ಕೆಆರ್‌ಎಸ್ ಜಲಾಶಯದಿಂದ ಇಂದು ತಮಿಳುನಾಡು ಕಡೆಗೆ ನೀರು ಹರಿದು ಹೋಗಿದೆ.

ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂನಿಂದ (KRS Dam) ತಮಿಳುನಾಡಿಗೆ (Tamil Nadu) ನೀರು ಬಿಡಲಾಗಿದೆ. ಸುಮಾರು 5,300 ಕ್ಯೂಸೆಕ್‌ ನೀರನ್ನು ಜಲಾಶಯದ ಅಧಿಕಾರಿಗಳು ತಮಿಳುನಾಡಿಗೆ ರಿಲೀಸ್ ಮಾಡಿದ್ದಾರೆ. ಅತ್ತ ನಾಲೆಗೆ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿಗೆ ಬಿಡಬೇಕಾದ ನೀರನ್ನ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ. ರೈತರ ಬೆಳೆಗೆ ನೀರು ಬಿಡುಗಡೆ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜನಪ್ರತಿನಿಧಿಗಳು ತಿಳಿಸಿದ ಬೆನ್ನಲ್ಲೇ ಇಂತಹ ಘಟನೆ ನಡೆದಿದೆ. ಹೀಗಾಗಿ ರೈತರಿಂದ ಭಾರಿ ಆಕ್ರೋಶ ವ್ಯಕ್ತವಾಗುವ ಮುನ್ಸೂಚನೆ ಸಿಕ್ಕಿದೆ.

water-karnataka-released-to-tamil-nadu

ನೀರಿಗಾಗಿ ಶುರುವಾಗುತ್ತಾ ವಾರ್?

ಅಷ್ಟಕ್ಕೂ ಜೂನ್ ತಿಂಗಳಲ್ಲಿ ಕೆಆರ್‌ಎಸ್ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಹಂತ ತಲುಪಿತ್ತು. ಆದ್ರೆ ಜುಲೈ ತಿಂಗಳಲ್ಲಿ ಉತ್ತಮವಾಗಿ ಮಳೆ ಬಿದ್ದ ಕಾರಣ ಕೆಆರ್‌ಎಸ್ ಡ್ಯಾಂ ಒಂದಷ್ಟು ತುಂಬಿಕೊಂಡಿದೆ. ಮುಂಗಾರಿನ ಹಿನ್ನೆಲೆ ಕೆಲ ದಿನಗಳ ಹಿಂದೆ ಕೊಡಗಿನಲ್ಲಿ ಉತ್ತಮ ಮಳೆ ಬಿದ್ದಿತ್ತು. ಅಲ್ಲದೆ ಕೇರಳದ ವಯನಾಡು ಪ್ರದೇಶದಲ್ಲೂ ಉತ್ತಮವಾಗಿ ಮಳೆಯು ಬಿದ್ದಿತ್ತು. ಹೀಗಾಗಿಯೇ ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ ಹೆಚ್ಚಾಗಿದೆ. ಆದರೆ ತಮಿಳುನಾಡು ಜಲಾಶಯಗಳಿಗೆ ರಾಜ್ಯ ಬಿಡಬೇಕಾದ ನೀರು ಇನ್ನೂ ಲಭ್ಯವಾಗಿಲ್ಲ. ಇಷ್ಟಾದರೂ ಡ್ಯಾಂನ ನೀರು ತಮಿಳುನಾಡು ಕಡೆಗೆ ಹರಿಯಲು ಆರಂಭಿಸಿದೆ.

ರಾಜ್ಯದ ರೈತರಿಗೆ ನೀರಿನ ಕೊರತೆ?

ಪರಿಸ್ಥಿತಿ ಕಠಿಣವಾಗಿದ್ರೂ ಒತ್ತಾಯದ ಮೇರೆಗೆ ತಮಿಳುನಾಡಿಗೆ ನೀರು ಹರಿಸಿರುವ ಆರೋಪ ಕೇಳಿಬಂದಿದೆ. ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು ಜಲಾಶಯದ ಇಂದಿನ ಮಟ್ಟ 113.44 ಅಡಿ ಆಗಿತ್ತು. ಒಳ ಹರಿವು ಈಗ 5,270 ಕ್ಯೂಸೆಕ್ ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾರಣ ಹೊರ ಹರಿವನ್ನ ಹೆಚ್ಚಿಸಲಾಗಿದೆ. ಇದೀಗ 5,358 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಕೆಆರ್‌ಎಸ್ ಡ್ಯಾಂನಲ್ಲಿ 35.325 ಟಿಎಂಸಿ ನೀರಿದೆ ಪರಿಣಾಮ ರೈತರು ಆತಂಕ ಎದುರಿಸುವಂತಾಗಿದೆ. ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಾರಾ? ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

water-karnataka-released-to-tamil-nadu

ಕಳೆದ ವರ್ಷ ತಮಿಳುನಾಡಿಗೆ ಬಂಪರ್!

ಇನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿನ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಮೆಟ್ಟೂರು ಡ್ಯಾಂ ತಮಿಳುನಾಡಿನ ಜೀವನಾಡಿ. ಕರ್ನಾಟಕದಲ್ಲಿ ನೀರು ಬಿಡುಗಡೆಯಾದರೆ ಮೆಟ್ಟೂರು ಡ್ಯಾಂನಲ್ಲಿ ಶೇಖರಣೆ ಆಗುತ್ತದೆ. ಕಳೆದ ವರ್ಷ ಇಲ್ಲಿ ಭಾರಿ ಮಳೆಯಾಗಿ ಕರ್ನಾಟಕ ಎಷ್ಟು ಹೆಚ್ಚುವರಿ ನೀರು ಹರಿಸಿತ್ತು ಗೊತ್ತಾ? 2022ರಲ್ಲಿ 472.6 ಟಿಎಂಸಿ ನೀರನ್ನು ಕರ್ನಾಟಕದಿಂದ ಹೆಚ್ಚುವರಿಯಾಗಿ ಬಿಡಲಾಗಿತ್ತು. ಈ ಮೂಲಕ ಒಟ್ಟು 682 ಟಿಎಂಸಿ ನೀರನ್ನು ಹೊರಬಿಡಲಾಗಿತ್ತು. ಹೀಗಾಗಿ ಕಳೆದ ವರ್ಷ ತಮಿಳುನಾಡಿಗೆ ಬಂಪರ್ ನೀರು ಸಿಕ್ಕಿತ್ತು. ಆದರೆ ಈ ಬಾರಿ ಕರ್ನಾಟಕವೇ ಮಳೆ ಇಲ್ಲದೆ ಪರದಾಡುತ್ತಿದೆ.

ಅಯ್ಯೋ ದೇವರೆ.. ನೀರಿಗಾಗಿ ಮತ್ತೆ ಕಾದಾಟ?

ಮೆಟ್ಟೂರು ಡ್ಯಾಂ ಮೂಲಕ ರಿಲೀಸ್ ಆಗುವ ನೀರು ಈರೋಡ್ ಸೇರಿ ತಿರುಚ್ಚಿ, ತಿರುವರೂರ್, ನಾಗಪಟ್ಟಣಂ, ಕಡಲೂರು, ಕರೂರ್, ಪೆರಂಬಲೂರು, ತಂಜಾವೂರು, ಪುದುಕ್ಕೊಟ್ಟೈ ಜಿಲ್ಲೆಗಳ ಕೃಷಿಭೂಮಿಗಳನ್ನು ಹಸಿರಾಗಿಸುತ್ತದೆ. ಹೀಗಾಗಿಯೇ ಇದೀಗ ಮೆಟ್ಟೂರು ಡ್ಯಾಂನಿಂದ ನೀರು ಹೊರಬಿಡಲಾಗುತ್ತಿದೆ. ಮೆಟ್ಟೂರು ಡ್ಯಾಂನ ಒಟ್ಟಾರೆ 89 ವರ್ಷಗಳ ಇತಿಹಾಸದಲ್ಲಿ 1961ರಲ್ಲಿ ರಿಲೀಸ್ ಆಗಿದ್ದ 321 ಟಿಎಂಸಿ ಹಿಂದಿನ ದಾಖಲೆ ಆಗಿತ್ತು. ಆದರೆ ಕಳೆದ ವರ್ಷ ಆ ದಾಖಲೆ ಮುರಿದಿತ್ತು. 1 ವರ್ಷದ ನಂತರ ನೀರಿಗಾಗಿ ಮತ್ತೆ ಕಾದಾಟ ಶುರುವಾಗಿದೆ.

water-karnataka-released-to-tamil-nadu

ದಿಢೀರ್ ಹರಿದ ಕಾವೇರಿ ನೀರು!

ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟಿರುವ ಈ ಮೆಟ್ಟೂರು ಡ್ಯಾಂನ ಒಟ್ಟು ಸಾಮರ್ಥ್ಯ 120. ಇಲ್ಲಿ 93.47 ಟಿಎಂಸಿ ನೀರು ಸಂಗ್ರಹಿಸಬಹುದಾಗಿದ್ದು, ಇದೀಗ ಮೆಟ್ಟೂರು ಜಲಾಶಯದಲ್ಲಿ 27 ಟಿಎಂಸಿ ನೀರಿದ್ದು, 10,000 ಕ್ಯುಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಒಳಹರಿವು 800 ಕ್ಯುಸೆಕ್ ಇದ್ದು ಈ ಬಾರಿ ಕರ್ನಾಟಕ ಜೊತೆ ತಮಿಳುನಾಡು ಮತ್ತೆ ನೀರಿಗಾಗಿ ಕಿರಿಕ್ ತೆಗೆಯುತ್ತಾ? ಅನ್ನೋ ಅನುಮಾನ ಕಾಡುತ್ತಿದೆ. ಇದೇ ಸಂದರ್ಭಕ್ಕೆ ಕೆಆರ್‌ಎಸ್ ಜಲಾಶಯದಿಂದ ದಿಢೀರ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.

ಈಗ ಮೇಕೆದಾಟು ಏಕೆ ಮುಖ್ಯ?

ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಮಳೆಗಾಲದಲ್ಲಿ ಸುಮ್ಮನೆ ವ್ಯರ್ಥವಾಗುತ್ತಿರುವ ನೀರನ್ನ ಕರ್ನಾಟಕ & ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಕುಡಿವ ನೀರಿನ ಯೋಜನೆಗೆ ಬಳಸಿಕೊಳ್ಳಲು ಸಾಧ್ಯ. ಮೇಕೆದಾಟು ಡ್ಯಾಂನಲ್ಲಿ ನೀರು ಸಂಗ್ರಹವಾದರೆ 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾದಂತೆ ತಡೆಯಬಹುದು. ಇದ್ರಿಂದ ತಮಿಳುನಾಡು ಕೂಡ ಉಪಯೋಗ ಪಡೆಯಲಿದೆ. ಬೆಂಗಳೂರು ಸುತ್ತಮುತ್ತ ಕುಡಿವ ನೀರು ಒದಗಿಸುವ ಜೊತೆ ಕರ್ನಾಟಕಕ್ಕೂ ಅಗತ್ಯ ಇರುವ ವಿದ್ಯುತ್‌ ಉತ್ಪಾದನೆಗೆ ಸಹಕಾರಿ. ಹಾಗೇ ತಮಿಳುನಾಡು ಕೂಡ ಇದರಿಂದ ಲಾಭ ಪಡೆಯಬಹುದು.

water-karnataka-released-to-tamil-nadu

ಕರ್ನಾಟಕ & ತಮಿಳುನಾಡಿಗೆ ಮೇಕೆದಾಟು ಬೇಕು!

ಮೇಕೆದಾಟು ಯೋಜನೆ ಪೂರ್ಣವಾದರೆ ಬೆಂಗಳೂರು ಹೊರವಲಯದಲ್ಲಿರುವ ನೀರಿನ ಸಮಸ್ಯೆ ಬಹುತೇಕ ಶಮನವಾಗಲಿದೆ. ಮೇಕೆದಾಟು ಯೋಜನೆ ಬರದಲ್ಲಿ ಬೆಂದು ಹೋದ ರಾಮನಗರ ಜಿಲ್ಲೆಗೂ ವರ ನೀಡಬಲ್ಲದು ಎಂಬ ವಿಶ್ವಾಸವಿದೆ. ಹಾಗೇ ರಾಮನಗರ ಸುತ್ತಮುತ್ತ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ, ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಅಂತರ್ಜಲದ ಮಟ್ಟ ಏರಿಕೆ ಆಗಬಹುದು. ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.

ಹೀಗೆ ಕಳೆದ ವರ್ಷ 400 ಟಿಎಂಸಿಗು ಹೆಚ್ಚು ನೀರು ವ್ಯರ್ಥವಾಗಿದೆ. ಅದೇ ಮೇಕೆದಾಟು ಡ್ಯಾಂ ನಿರ್ಮಾಣವಾಗಿದ್ದರೆ, ಮಳೆ ನೀರು ವ್ಯರ್ಥವಾಗಿ ಹೋಗುವುದನ್ನ ತಪ್ಪಿಸಬಹುದಿತ್ತು. ಹೀಗಾಗಿ ಕರ್ನಾಟಕ ಕೂಡ ನಮ್ಮ ನೆಲದಲ್ಲಿ ಮೇಕೆದಾಟು ಬಳಿ ಡ್ಯಾಂ ಕಟ್ಟಲು ಪಣತೊಟ್ಟಿದೆ. ಇದನ್ನ ಅರ್ಥ ಮಾಡಿಕೊಂಡಿದ್ದರೂ ತಮಿಳುನಾಡು ರಾಜಕಾರಣಿಗಳು ಸುಖಾಸುಮ್ಮನೆ ಕಿರಿಕ್ ಮಾಡ್ತಾ ಇದ್ದಾರೆ ಆನ್ನೋ ಆರೋಪ ಕೇಳಿಬರುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುವ ಸಂದರ್ಭಕ್ಕೆ ಕಾವೇರಿ ನೀರನ್ನ ದಿಢೀರ್ ಕೆಆರ್‌ಎಸ್ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ. ಮುಂದೆ ಇದು ಯಾವ ರೀತಿ ತಿರುವು ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+