Cauvery Dispute: ತಮಿಳುನಾಡು ಸಚಿವರಾಗಿ ಸಿದ್ದರಾಮಯ್ಯ ಪ್ರಮಾಣ ವಚನ?

ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ಕನ್ನಡಿಗರಿಗೆ ದೊಡ್ಡ ಹಿನ್ನಡೆಯಾಗಿದೆ. ಬರಸ್ಥಿತಿ ಎದುರಾದ ಸಮಯದಲ್ಲೇ ಗಾಯದ ಮೇಲೆ ಬರೆ ಎಳೆಯುವ ಕೆಲಸ ನಡೆಯುತ್ತಿದೆ. ಇದು ಕನ್ನಡಿಗರನ್ನ ಬಡಿದೆಬ್ಬಿಸಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಹೋರಾಟ ಜೋರಿದೆ. ಈ ಹೊತ್ತಲ್ಲೇ ಬಿಜೆಪಿ ಕೂಡ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.

ಹೌದು, ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಂತರ ಬಿಜೆಪಿ & ಕಾಂಗ್ರೆಸ್ ಮಧ್ಯೆ ಒಂದಲ್ಲ ಒಂದು ವಿಚಾರಕ್ಕೆ ಕಿತ್ತಾಟ ನಡೆಯುತ್ತಲೇ ಇದೆ. ಆದರೆ ಈಗ ಕಾವೇರಿ ವಿಚಾರಕ್ಕೆ ಇಬ್ಬರ ಜಗಳ ಶಿಫ್ಟ್ ಆಗಿದೆ. ತಮಿಳುನಾಡಿಗೆ 5000 ಕ್ಯುಸೆಕ್ ನೀರು ಹರಿಸಲು ಕಾವೇರಿ ಪ್ರಾಧಿಕಾರ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ಕೋರಿ ಕರ್ನಾಟಕ ಅರ್ಜಿ ಸಲ್ಲಿಸಿತ್ತು. ಆದರೆ ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Discover how BJP accused against Siddaramaiah government over Cauvery Dispute

ಕಾವೇರಿ ವಿವಾದದಲ್ಲಿ ಕೈ-ಕಮಲ ಕಿತ್ತಾಟ

ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಕರ್ನಾಟಕ ಮತ್ತೊಮ್ಮೆ ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಆದೇಶ ಹೊರಬಿದ್ದ ಬಳಿಕ ಕಿಚ್ಚು ಧಗಧಗಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ಗಂಭೀರ ಆರೋಪ ಮಾಡಿದೆ. ಡಿಎಂಕೆ & ಕಾಂಗ್ರೆಸ್ ಹೊಂದಾಣಿಕೆ ಎಂಬ ಪದವನ್ನ ಬಿಜೆಪಿ ಮತ್ತೆ ಬಳಸಿ, ಗರಂ ಆಗಿದೆ. ಹಾಗಾದರೆ ಏನದು ಆ ಆರೋಪ? ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಇದೀಗ ಹೇಳಿದ್ದೇನು? ಮುಂದೆ ಓದಿ.

ತಮಿಳುನಾಡಿಗೆ ಸಿದ್ದರಾಮಯ್ಯ ಸಚಿವರಾ?

ಬಿಜೆಪಿ ಇದೀಗ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ಟ್ವೀಟ್ ಒಂದನ್ನ ಮಾಡಿದ್ದು, ತಮಿಳುನಾಡಿನ 35 ಸಚಿವರಿಗಿಂತಲೂ ಹೆಚ್ಚು ಶ್ರಮಪಟ್ಟು, ನ್ಯಾಯಾಲಯ ಹಾಗೂ ನ್ಯಾಯಾಧಿಕರಣ ಪ್ರಾಧಿಕಾರದಲ್ಲಿ ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡಿ, ಕಾವೇರಿ ನೀರು ಲೀಲಾಜಾಲವಾಗಿ ಹರಿಯುವಂತೆ ಮಾಡಿದ ಸಿದ್ದರಾಮಯ್ಯ ಅವರನ್ನು ಗುರುತಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಸಂಪುಟಕ್ಕೆ ನೂತನ ನೀರಾವರಿ ಸಚಿವರನ್ನಾಗಿ ನೇಮಕ ಮಾಡಿಕೊಂಡರೆ ಅಚ್ಚರಿಯಿಲ್ಲ ಎಂದಿದೆ.

ಹಾಗೇ, ಕರ್ನಾಟಕದ ಹಿತವನ್ನು ಬದಿಗಿಟ್ಟು ತಮಿಳುನಾಡಿಗೆ ನೀರು ಹರಿಸುತ್ತಾ DMK ಹಾಗೂ I.N.D.I ಮೈತ್ರಿಕೂಟದ ಬಾಂಧವ್ಯವನ್ನು ಮತ್ತಷ್ಟು ಭದ್ರಗೊಳಿಸಬೇಕೆಂಬ ರಾಹುಲ್ ಗಾಂಧಿರವರ ಸೂಚನೆಯನ್ನು ಸಿದ್ದರಾಮಯ್ಯರವರು ಚಾಚೂ ತಪ್ಪದೆ ಪರಿಪಾಲಿಸುತ್ತಿದ್ದಾರೆ! ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪವನ್ನ ಮಾಡಿದೆ.

Discover how BJP accused against Siddaramaiah government over Cauvery Dispute

ಕಾವೇರಿ ನೀರಿಗಾಗಿ ಕನ್ನಡಿಗರ ಪರದಾಟ

ನಿನ್ನೆಯಷ್ಟೇ ರಾಜ್ಯದ ಸಂಸದರು ಒಟ್ಟಾಗಿ ಸಭೆ ನಡೆಸಿದ್ದರು. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಲು ಮುಂದಾಗಿದ್ದರು. ಇಂದು ಕೇಂದ್ರ ಜಲಶಕ್ತಿ ಸಚವರ ಜೊತೆಗೆ ಭೇಟಿ ಕೂಡ ನಡೆದಿತ್ತು. ಆದರೆ ಇದೆಲ್ಲಾ ಈಗ ಉಪಯೋಗಕ್ಕೆ ಬಂದಂತೆ ಕಾಣುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಕರ್ನಾಟಕ ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಬಹುದು ಅಂತಿದ್ದಾರೆ ತಜ್ಞರು. ಹೀಗಾಗಿ ರಾಜ್ಯದಲ್ಲಿ ಕಾವೇರಿ ಕಿಚ್ಚು ಹೊತ್ತಿಕೊಂಡಿದೆ.

ಒಟ್ನಲ್ಲಿ ಕಾವೇರಿ ಕಿಚ್ಚು ಕನ್ನಡ ನಾಡನ್ನ ಸುಡುತ್ತಿರುವ ಬೆನ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭೀಕರ ಕದನ ಆರಂಭವಾಗಿದೆ. ಈ ಮೂಲಕ ಕಾವೇರಿ ಹೋರಾಟದಲ್ಲೂ ಮತ್ತೆ ರಾಜಕೀಯ ಎಂಟ್ರಿ ಆಗಿದೆಯಾ? ಎಂಬ ಪ್ರಶ್ನೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಈಗ ಹರಿದಾಡುತ್ತಿದೆ. ಇದೀಗ ಬಿಜೆಪಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಯಾವ ರೀತಿ ಉತ್ತರ ಕೊಡುತ್ತೆ, ಮುಂದೆ ಈ ಕಿತ್ತಾಟ & ತಿಕ್ಕಾಟ ಯಾವ ಹಂತಕ್ಕೆ ಹೋಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಇಷ್ಟೆಲ್ಲಾ ಗೊಂದಲದ ನಡುವೆ ನೀರಿಗಾಗಿ ಕಾಯುತ್ತಿದ್ದ ಕರ್ನಾಟಕ ರೈತರು ಹಾಗೂ ಜನರು ಇದೀಗ ಮುಂದಿನ ಕರಾಳ ದಿನಗಳ ಬಗ್ಗೆ ಚಿಂತಿಸುವ ಪರಿಸ್ಥಿತಿಯೇ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+