ಅಮುಲ್, ಕೆಎಂಎಫ್ ನಡುವಿನ ವ್ಯತ್ಯಾಸ, ಸಾಮ್ಯತೆ: ಅಂಕಿ-ಅಂಶಗಳನ್ನು ತಿಳಿಯಬೇಕೆ? ಇಲ್ಲಿ ನೋಡಿ
ಬೆಂಗಳೂರು, ಡಿಸೆಂಬರ್ 02: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಡುವಿನ 'ಸಹಕಾರ'ದ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಭಾರೀ ವಿವಾದವನ್ನು ಹುಟ್ಟುಹಾಕಿದೆ.
ಮಂಡ್ಯ ಜಿಲ್ಲೆಯಲ್ಲಿ ನೀಡಿದ ಹೇಳಿಕೆಗೆ ಪ್ರತಿಪಕ್ಷಗಳ ನಾಯಕರು ಹಾಗೂ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು?
ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ 260 ಕೋಟಿ ವೆಚ್ಚದಲ್ಲಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸ್ಥಾಪಿಸಿರುವ ಮೆಗಾ ಡೈರಿಯನ್ನು ಶಾ ಶನಿವಾರ ಉದ್ಘಾಟಿಸಿದ್ದರು. ಆ ವೇಳೆ ಮಾತನಾಡಿದ್ದ ಅವರು, 'ರಾಜ್ಯದ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಇರುವುದನ್ನು ಖಚಿತಪಡಿಸಿಕೊಳ್ಳಲು ಅಮುಲ್ ಮತ್ತು ಕೆಎಂಎಫ್ ಒಟ್ಟಾಗಿ ಕೆಲಸ ಮಾಡುತ್ತವೆ. 47 ವರ್ಷಗಳಲ್ಲಿ ಕರ್ನಾಟಕವು ಹೈನುಗಾರಿಕೆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಇದೇ ಅವಧಿಯಲ್ಲಿ 4 ಕೋಟಿ ರೂಪಾಯಿಗಳಿಂದ 25,000 ಕೋಟಿ ರೂಪಾಯಿಗಳಷ್ಟು ವಹಿವಾಟನ್ನು ಕೆಎಂಎಫ್ ಮಾಡಿದೆ. ಈ ವಹಿವಾಟನ್ನು ಇನ್ನಷ್ಟು ಹೆಚ್ಚಿಸಲು ಅಮುಲ್ ಮತ್ತು ಕೆಎಂಎಫ್ ಒಟ್ಟಾಗಿ ಕೆಲಸ ಮಾಡಬೇಕು' ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಕೆಎಂಎಫ್ ಹಾಗೂ ಅಮುಲ್ ಸಂಸ್ಥೆಗಳಿಗೆ ಸಂಬಂಧಿಸಿದ ಅಂಕಿ- ಅಂಶಗಳ ಕುರಿತ ಮಾಹಿತಿಯನ್ನು ನಾವಿಲ್ಲಿ ಗಮನಿಸಬಹುದು.

ಕರ್ನಾಟಕ ಹಾಲು ಒಕ್ಕೂಟ (KMF)
ಕೆಎಂಫ್ ಸಂಸ್ಥೆಯು ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚಾಲೊಕೇಟ್ ಹಾಗೂ ಮತ್ತು ಸಿಹಿತಿಂಡಿ (ಕಾಜು ಕಟ್ಲಿ, ಬೇಸನ್ ಲಡ್ಡೂ, ಮೈಸೂರು ಪಾಕ್, ಪೇಡಾ, ಇತ್ಯಾದಿ) ಮಾರಾಟ ಮಾಡುತ್ತದೆ. ಇದು ನಂದಿನಿ ಬ್ರ್ಯಾಂಡ್ ಹೆಸರಲ್ಲಿ ಖ್ಯಾತಿ ಪಡೆದಿದೆ.
1974ರಲ್ಲಿ ಸ್ಥಾಪನೆಯಾದ ದಕ್ಷಿಣ ಭಾರತದ ಸಹಕಾರಿ ಹಾಲು ಮಹಾಮಂಡಳಿಗಳಲ್ಲಿ ಕೆಎಂಫ್ ಅಗ್ರಸ್ಥಾನದಲ್ಲಿದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ. ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 15043ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಎಂಎಫ್ 26.38 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ.
ಕೆಎಂಎಫ್ ಅಡಿ 17014 ನೋಂದಾಯಿತ ಸಂಘಗಳಿವೆ. 15043 ಸಂಘಗಳು ಸಕ್ರಿಯವಾಗಿವೆ. 4143 ಮಹಿಳಾ ಸಂಘಗಳು ಕಾರ್ಯಾಚರಣೆಯಲ್ಲಿವೆ. 25.90 ಲಕ್ಷ ಸದಸ್ಯರು ಕೆಎಂಎಫ್‌ಗೆ ಕೆಲಸ ಮಾಡುತ್ತಾರೆ. ದೈನಂದಿನವಾಗಿ ಸುಮಾರು 81.66 ಲಕ್ಷದಷ್ಟು (ಲೀಟರ್) ಸರಾಸರಿ ಹಾಲು ಶೇಖರಣೆಯಾಗುತ್ತದೆ. ದೈನಂದಿನವಾಗಿ 37.17(ಲೀಟರ್) ಹಾಲು ಮಾರಾಟವಾಗುತ್ತದೆ. 5.92 (ಲೀಟರ್) ಮೊಸರು ಮಾರಾಟವಾಗುತ್ತದೆ. ಹಾಲು ಉತ್ಪಾದಕರಿಗೆ ಪಾವತಿಯಾಗುವ ದೈನಂದಿನ ಹಣ 22.52 ಕೋಟಿ ರೂಪಾಯಿ. ಕೆಎಂಎಫ್‌ನ ವಾರ್ಷಿಕ ವಹಿವಾಟು 19784 ಕೋಟಿ ರೂಪಾಯಿ.

ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (Amul)
ಅಮುಲ್ ಸಂಸ್ಥೆಯು ಹಾಲಿನ ಪುಡಿ, ಹಾಲು, ಬೆಣ್ಣೆ, ತುಪ್ಪ, ಗಿಣ್ಣು, ಮಸ್ತಿ ದಾಹಿ, ಮೊಸರು, ಮಜ್ಜಿಗೆ ಚಾಕೊಲೇಟ್, ಐಸ್ ಕ್ರೀಂ,ಶ್ರೀಖಂಡ್, ಪನೀರ್(ತಾಜಾ ಗಿಣ್ಣು), ಗುಲಾಬ್ ಜಾಮೂನುಗಳು ಮುಂತಾದವುಗಳನ್ನು ಮಾರಾಟ ಮಾಡುತ್ತದೆ.
1946 ಸ್ಥಾಪನೆಯಾದ ಅಮುಲ್ ಭಾರತದ ಅತೀ ದೊಡ್ಡ ಹಾಲು ಉತ್ಪನ್ನಗಳ ಮಾರಾಟ ಸಂಸ್ಥೆಯಾಗಿದೆ. ಅಮುಲ್ ಸಂಸ್ಥೆಯು 2.8 ದಶಲಕ್ಷ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿದ್ದು, ಪ್ರತಿ ದಿನ ಸರಾಸರಿ 10.16 ದಶಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ.
ಇದು 13, 141 ಗ್ರಾಮೀಣ ಡೈರಿ ಸಹಕಾರ ಸಂಘಗಳನ್ನು ಹೊಂದಿದೆ. ಈ ಸಹಕಾರ ಸಂಸ್ಥೆಗಳು ಸರಾಸರಿ ಪ್ರತಿ ದಿನ 7.5 ದಶಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿವೆ. ಹಾಲು ಉತ್ಪಾದಕರಲ್ಲಿ ಶೇ 70 ರಷ್ಟು ಜನರು ಚಿಕ್ಕ, ಅತೀ ಚಿಕ್ಕ ಮತ್ತು ಭೂರಹಿತ ಕಾರ್ಮಿಕರಾಗಿದ್ದಾರೆ.
ದೈನಂದಿನವಾಗಿ ಸುಮಾರು 8.5 ದಶಲಕ್ಷ (ಲೀಟರ್) ಸರಾಸರಿ ಹಾಲು ಶೇಖರಣೆಯಾಗುತ್ತದೆ. ಅಮುಲ್‌ನ ಪ್ರತಿದಿನದ ವಹಿವಾಟು 150 ದಶಲಕ್ಷ ರೂಪಾಯಿ. 53 ಶತಕೋಟಿ ರೂಪಾಯಿ ವಾರ್ಷಿಕ ವಹಿವಾಟನ್ನು ಅಮುಲ್ ಹೊಂದಿದೆ. 48 ಮಾರಾಟ ಕಚೇರಿಗಳು, 3000 ಸಗಟು ವಿತರಣೆ ಕೇಂದ್ರಗಳು, 5 ಲಕ್ಷ ಚಿಲ್ಲರೆ ಅಂಗಡಿಗಳನ್ನು ಅಮುಲ್ ಹೊಂದಿದೆ.

ಅಮಿತ್ ಶಾ ಹೇಳಿಕೆಗೆ ವಿಪಕ್ಷ ನಾಯಕರ ಆಕ್ರೋಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕರ್ನಾಟಕದ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವರು ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನಂದಿನಿ ಎಂಬುದು ಕರ್ನಾಟಕದ ಅಸ್ಮಿತೆ. ಇದಕ್ಕೆ ಕೈಹಾಕಬೇಡಿ' ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications