ಇಂದಿನಿಂದ ರಾಜ್ಯದಲ್ಲಿ ಡಯಾಲಿಸಿಸ್ ಸೇವೆ ಬಂದ್: ಸಿಬ್ಬಂದಿಗಳಿಂದ ಪ್ರತಿಭಟನೆ, ಬೇಡಿಕೆಗಳೇನು?

ಬೆಂಗಳೂರು, ನವೆಂಬರ್ 30: ಆರೋಗ್ಯ ಸಚಿವರ ದಿವ್ಯ ನಿರ್ಲಕ್ಷ್ಯಕ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆಯ ಮೂಲಕ ಆಕ್ರೋಶ ಹೊರ ಹಾಕಲು ಡಯಾಲಿಸೀಸ್ ಸಿಬ್ಬಂದಿ ಸಜ್ಜಾಗಿದ್ದಾರೆ. ಡಯಾಲಿಸೀಸ್ ನೌಕರರ ಸಂಘದ ಅಧ್ಯಕ್ಷ ಚೇತನ್ ನೇತೃತ್ವದಲ್ಲಿ ಇವತ್ತು ಬ್ರಹತ್ ಪ್ರತಿಭಟನೆ ಆರಂಭಿಸಿದ್ದು, ನವೆಂಬರ್ 30 ಇಂದಿನಿಂದಲೇ ಸೇವೆ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೆಡಿಯಾಗಿದ್ದಾರೆ.

ವಿವಿಧ ಬೇಡಿಕೆಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಹಾಗಾದರೆ ಡಯಾಲಿಸಿಸ್ ಸೆಂಟರ್ ಆಪರೇಟರ್ಸ್ ಪ್ರಮುಖ ಬೇಡಿಕೆಗಳು, ಆಗ್ರಹವೇನು? ತಿಳಿಯಿರಿ.

Dialysis Workers Started Protest By Shutting Down All Dialysis Centers Urge Fulfillment Demands

ಹಲವು ಸಮಸ್ಯೆ ಹಿನ್ನೆಲೆ ಡಯಾಲಿಸಿಸ್ ಸೆಂಟರ್ ಸಿಬ್ಬಂದಿ ಕೆಲಸ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಆರೋಗ್ಯ ಸಚಿವರಿಗೆ ಹಲವು ಬಾರಿ ಮನವಿ‌ ಮಾಡಿದರೂ ನಮಗೆ ಸರ್ಕಾರದಿಂದಾಗಲಿ, ಅಧಿಕಾರಿಗಳಿಂದಾಗಿ ಸ್ಪಂದನೆ ಸಿಕ್ಕಿಲ್ಲ. ನಮ್ಮ ಕಷ್ಟ ಹೇಳಿದ್ರೂ ನಮ್ಮ ಸಮಸ್ಯೆಗಳು ಈಡೇರಿಲ್ಲ. ರಾಜ್ಯದ ಎಲ್ಲಾ ಡಯಾಲಿಸಿಸ್ ಸೆಂಟರ್ ಗೆ ಸಾಮೂಹಿಕ ಗೈರಾಗಲು ಸಿಬ್ಬಂದಿ ತೀರ್ಮಾನಿಸಿದ್ದಾರೆ.

202 ಡಯಾಲಿಸಿಸ್ ಕೇಂದ್ರ ಬಂದ್

ಸರ್ಕಾರದ ವಿರುದ್ಧ ತಮ್ಮ‌ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜ್ಯದ 202 ಡಯಾಲಿಸಿಸ್ ಕೇಂದ್ರಗಳು ಶುಕ್ರವಾರದಿಂದ ಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಇದರಿಂದ ಡಯಾಲಿಸಿಸ್ ರೋಗಿಗಳು ಪರದಾಡಲಿದ್ದು, ಜೀವಕ್ಕೆ ಕುತ್ತು ತರಬಹುದು. ಸರ್ಕಾರ ಕೊರೊನಾ ಕಾರಣ ಹೇಳಿ ಸಂಬಳಕ್ಕೆ ಕತ್ತರಿ ಹಾಕಿತ್ತು.

ಈ ಹಿನ್ನೆಲೆ ಕಳೆದ ಎರಡುವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುದ್ದೇವೆ. ಇದು ಕನಿಷ್ಠ ಜೀವನಕ್ಕೂ ಸಾಲುತ್ತಿಲ್ಲ. ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಭೇಟಿ ಮಾಡಿದರೂ ಸಚಿವರು ಸ್ಪಂದಿಸಿಲ್ಲ. ಅಲ್ಲದೇ ಕಳೆದ ಎರಡುವರೆ ತಿಂಗಳ ಸಂಬಳ ಕೂಡ ಹೋಲ್ಡ್ ಮಾಡಲಾಗಿದ್ದು, ಅರ್ಧ ಸಂಬಳ ಕೂಡ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿಭಟನೆಗೆ ಪ್ರಮುಖ ಕಾರಣಗಳು

- ಕೋವಿಡ್ ನೆಪವೊಡ್ಡಿ ಸಂಬಳಕ್ಕೆ ಕತ್ತರಿ ಹಾಕಿರುವ ಸರ್ಕಾರ

- ಕಳೆದ ಎರಡುವರೆ ತಿಂಗಳ ಸಂಬಳ ಕೂಡ ಹೋಲ್ಡ್ ಕೊಡುವ ಆ ಅರ್ಧ ಸಂಬಳ ಕೂಡ ಸಿಗದೇ ಪರದಾಟ

- ಈ ಹಿಂದೆ ಡಯಾಲಿಸಿಸ್ ಸೆಂಟರ್ ನಿರ್ವಹಣೆ ಮಾಡುತ್ತಿದ್ದ ಬಿಆರ್ಎಸ್ ಸಂಸ್ಥೆ

- ಏಕಾಏಕಿ 50ರಷ್ಟು ಸಂಬಳ ಕಡಿತ ಮಾಡಿ ಜೀವನ ನಡೆಸುವುದು ಕಷ್ಟಕರ

- ಕಳೆದ ಎರಡುವರೆ ವರ್ಷಗಳಿಂದ ಅರ್ಧ ಸಂಬಳ ಪಡೆದು ಕೆಲಸ ನಿರ್ವಹಿಸುತ್ತಿರುವ ಡಯಾಲಿಸಿಸ್ ಸಿಬ್ಬಂದಿ

- ಕನಿಷ್ಠ ಜೀವನಕ್ಕೂ ಸಾಲದ ಸಂಬಳ ಅಂತ ಸರ್ಕಾರದ ವಿರುದ್ಧ ಕಿಡಿ

- 2021ಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಆಗದ ಕಾರಣ ನಿರ್ವಹಣೆಯಿಂದ ಹಿಂದೆ ಸರಿದ ಬಿಆರ್ಎಸ್

- ನಂತರದಲ್ಲಿ ಯಾವುದೇ ಟೆಂಡರ್ ಆಗದೇ ಕೋಲ್ಕತ್ತ ಮೂಲದ ESKAG ಸಂಜೀವಿನಿಗೆ ನಿರ್ವಹಣೆ ಜವಬ್ದಾರಿ

-ಈ ಹಿಂದೆ 45 ಸೆಂಟರ್ಗಳ ಜವಬ್ದಾರಿ ಹೊತ್ತಿದ್ದ ESKAG ಸಂಜೀವಿನಿಗೆ 202 ಸೆಂಟರ್ಗಳ ಜವಬ್ದಾರಿ

- ಡಯಾಲಿಸಿಸ್ 650 ಸಿಬ್ಬಂದಿಗಳ ಸಂಬಳದ ಬಗ್ಗೆ ಅಸಡ್ಡೆ

- ಸ್ಯಾಲರಿ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳ ಪರದಾಟ

- ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವರಿಗೆ ಮನವಿ

- 3 ಬಾರಿ ಭೇಟಿ ಮಡಿದ್ರೂ ಸ್ಪಂದಿಸದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+