ದೀಪಾವಳಿ; ಬೆಂಗಳೂರಿನಿಂದ ಹೊರಡುವ ವಿಶೇಷ ರೈಲುಗಳು, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 20; ದೀಪಾವಳಿ ಹಬ್ಬದ ಅಂಗವಾಗಿ ಸಾವಿರಾರು ಜನರು ಬೆಂಗಳೂರು ನಗರದಿಂದ ಊರಿಗೆ ಹೋಗುತ್ತಾರೆ. ಆದರೆ ಬಸ್‌ಗಳ ದುಬಾರಿ ದರದ ಕಾರಣ ಜನರು ರೈಲಿನತ್ತ ಮುಖ ಮಾಡುತ್ತಿದ್ದಾರೆ. ರೈಲ್ವೆ ಇಲಾಖೆ ಸಹ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ನೈಋತ್ಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ನೈಋತ್ಯ ರೈಲ್ವೆ ಬೇಡಿಕೆಯ ಮೇರೆಗೆ ಈ ಮಾರ್ಗದಲ್ಲಿ ರೈಲುಗಳನ್ನು ಓಡಿಸಲಿದೆ ಎಂದು ಹೇಳಿದೆ.
ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಎಸ್. ಎಸ್. ಎಸ್. ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಟೌನ್, ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತದೆ. ಪ್ರಯಾಣಿಕರು ಈ ರೈಲುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮುಂದಿನ ವಾರ ದೀಪಾವಳಿ ಹಬ್ಬವಿದೆ. ಹಲವು ಜನರು ಶುಕ್ರವಾರ, ಶನಿವಾರವೇ ಬೆಂಗಳೂರು ನಗರದಿಂದ ಹೊರಡಲಿದ್ದಾರೆ. ಅದಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 21 ಮತ್ತು 22ರಂದು ಈ ರೈಲುಗಳು ಬೆಂಗಳೂರು ನಗರದಿಂದ ಹೊರಡಲಿವೆ. ಕೆಲವು ವಿಶೇಷ ರೈಲುಗಳು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿವೆ. ರೈಲುಗಳ ವೇಳಾಪಟ್ಟಿ, ನಿಲ್ದಾಣಗಳ ವಿವರಗಳು ಚಿತ್ರಗಳಲ್ಲಿವೆ.

ಯಶವಂತಪುರ-ಹುಬ್ಬಳ್ಳಿ-ಯಶವಂತಪುರ
ರೈಲು ಸಂಖ್ಯೆ 06271 ಯಶವಂತಪುರ-ಎಸ್. ಎಸ್. ಎಸ್. ಹುಬ್ಬಳ್ಳಿ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 21ರಂದು ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ರಾತ್ರಿ 9.50ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ರಾಣಿಬೆನ್ನೂರು ಮತ್ತು ಎಸ್. ಎಮ್. ಎಮ್ ಹಾವೇರಿ ನಿಲ್ದಾಣಗಳಲ್ಲಿ ಆಗಮಿಸಿ/ ನಿರ್ಗಮಿಸಲಿದೆ.
ರೈಲುಸಂಖ್ಯೆ 06272 ಎಸ್. ಎಸ್. ಎಸ್. ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 22ರಂದು ಬೆಳಗಿನ ಜಾವ 1 ಗಂಟೆಗೆ ಹೊರಟು ಅದೇ ದಿನ ಬೆಳಗ್ಗೆ 8.50ಕ್ಕೆ ಯಶವಂತಪುರ ತಲುಪಲಿದೆ. ಎಸ್. ಎಮ್. ಎಮ್. ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಅರಸೀಕೆರೆ, ತುಮಕೂರು ಮೂಲಕ ರೈಲು ಸಂಚಾರ ನಡೆಸಲಿದೆ.
ಈ ರೈಲು 1 ಎರಡನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ, ಆರು ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದರ್ಜೆ, ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಒಳಗೊಂಡು 14 ಬೋಗಿ ಹೊಂದಿದೆ.

ಯಶವಂತಪುರ-ಬೆಳಗಾವಿ-ಯಶವಂತಪುರ ರೈಲು
ರೈಲು ಸಂಖ್ಯೆ 06505 ಯಶವಂತಪುರ-ಬೆಳಗಾವಿ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 21 & 22ರಂದು ಯಶವಂತಪುರ ನಿಲ್ದಾಣದಿಂದ ರಾತ್ರಿ 11.30ಕ್ಕೆ ಹೊರಟು ಮರುದಿನ ಬೆಳಗ್ಗೆ 9.25 ಎಸ್. ಎಸ್. ಎಸ್. ಹುಬ್ಬಳ್ಳಿ ತಲುಪಲಿದೆ. ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರ, ದಾವಣಗೆರೆ, ರಾಣಿಬೆನ್ನೂರು, ಎಸ್. ಎಮ್. ಎಮ್. ಹಾವೇರಿ, ಎಸ್. ಎಸ್. ಎಸ್. ಹುಬ್ಬಳ್ಳಿ, ಧಾರವಾಡ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳ ಮೂಲಕ ಸಾಗಲಿದೆ.
ರೈಲು ಸಂಖ್ಯೆ 06506 ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 22ರಂದು ಬೆಳಗಾವಿಯಿಂದ ಬೆಳಗ್ಗೆ 11.10ಕ್ಕೆ ಹೊರಟು ಅದೇ ದಿನ ರಾತ್ರಿ 10ಕ್ಕೆ ಯಶವಂತಪುರ ತಲುಪಲಿದೆ. ಖಾನಾಪುರ, ಲೋಂಡಾ, ಧಾರವಾಡ, ಎಸ್. ಎಸ್. ಎಸ್. ಹುಬ್ಬಳ್ಳಿ, ಎಸ್. ಎಮ್. ಎಮ್ ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ ಮತ್ತು ತುಮಕೂರು ಮಾರ್ಗವಾಗಿ ಸಂಚಾರ ನಡೆಸಲಿದೆ.

ಯಶವಂತಪುರ-ಶಿವಮೊಗ್ಗ ಟೌನ್ ರೈಲು
ರೈಲು ಸಂಖ್ಯೆ 06507 ಯಶವಂತಪುರ-ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 22ರಂದು ಯಶವಂತಪುರ ನಿಲ್ದಾಣದಿಂದ ಬೆಳಗ್ಗೆ 10.30ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗ ಟೌನ್ ತಲುಪಲಿದೆ. ರೈಲು ತುಮಕೂರು, ಅರಸೀಕೆರೆ, ಬೀರೂರು ಮತ್ತು ಭದ್ರಾವತಿ ಮೂಲಕ ಸಾಗಲಿದೆ.
ಈ ರೈಲು ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ, ಆರು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡು 14 ಬೋಗಿಗಳನ್ನು ಹೊಂದಿದೆ.

ಬೆಳಗಾವಿ-ಯಶವಂತಪುರ (ಏಕೈಕ ಸೇವೆ)
ರೈಲು ಸಂಖ್ಯೆ 07305 ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 26ರಂದು ಬೆಳಗಾವಿ ರೈಲು ನಿಲ್ದಾಣದಿಂದ ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
ಖಾನಾಪುರ, ಲೋಂಡಾ, ಧಾರವಾಡ, ಎಸ್. ಎಸ್. ಎಸ್. ಹುಬ್ಬಳ್ಳಿ, ಎಸ್. ಎಮ್. ಎಮ್. ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು ಮೂಲಕ ಸಂಚಾರ ನಡೆಸಲಿದೆ.












Click it and Unblock the Notifications