ಕನ್ನಡಿಗರಿಗಾಗಿ ಮತ್ತೊಂದು ‘ಜನತಾ ದರ್ಶನ’ ನಡೆಸಲು ಸಕಲ ಸಿದ್ಧತೆ!
ಸಿಎಂ ಸಿದ್ದರಾಮಯ್ಯ ಕರ್ನಾಟಕದ ಜನರ ಸಂಕಷ್ಟಗಳನ್ನ ಕೇಳಲು ಕೆಲವು ದಿನಗಳ ಹಿಂದಷ್ಟೇ ಜನತಾ ದರ್ಶನ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲವೂ ಸಿಕ್ಕಿತ್ತು. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಕನ್ನಡಿಗರು ತಮ್ಮ ಸಂಕಷ್ಟ ಹೇಳಿಕೊಂಡು, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಅಧಿಕಾರಿಗಳಿಗೆ ಶಾಕ್ ಕೊಡುತ್ತಿದ್ದಾರೆ. ಹೀಗೆ ಆಡಳಿತ ಯಂತ್ರವನ್ನ ಚುರುಕಾಗಿಸಿ ಕನ್ನಡಿಗರ ಸಂಕಷ್ಟ ದೂರ ಮಾಡುವ ಪ್ಲ್ಯಾನ್ ಕಾಂಗ್ರೆಸ್ ಸರ್ಕಾರದ್ದು. ಇದೇ ಕಾರಣಕ್ಕೆ, ಕಾಂಗ್ರೆಸ್ ಸರ್ಕಾರ ಜನತಾ ದರ್ಶನದ ಮೊರೆ ಹೋಗಿದೆ. ಸಿಎಂ ಸಿದ್ದರಾಮಯ್ಯ ನಂತರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಜನರ ಕಷ್ಟ ಕೇಳಲು ಮುಂದಾಗಿದ್ದಾರೆ.

ಎಲ್ಲಿ ನಡೆಯುತ್ತೆ ಜನತಾ ದರ್ಶನ?
ಅಂದಹಾಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಡಿಸೆಂಬರ್ 2 ರಂದು ಅಂದರೆ ಇದೇ ಶನಿವಾರ ಜನ ಸಂಪರ್ಕ ಸಭೆಯ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ವಾರ್ತಾ ಇಲಾಖೆ ಮೂಲಕ ಮಾಹಿತಿ ನೀಡಿದ್ದು, ರಾಮನಗರ ಜಿಲ್ಲೆಯ ಕನಕಪುರ ಟೌನ್‌ನ ಅಂಬೇಡ್ಕರ್ ಭವನದಲ್ಲಿ ದಿನಾಂಕ 02-12-2023 ರಂದು ಶನಿವಾರ ಬೆಳಗ್ಗೆ 10.30 ರಿಂದ ಸಂಜೆ 5 ರವರೆಗು ಜನ ಸಂಪರ್ಕ ಸಭೆ ಅಂದರೆ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ.
ಸ್ಥಳದಲ್ಲೇ ಪರಿಹಾರದ ನಿರೀಕ್ಷೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಈ ಜನ ಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಕನಕಪುರದ ಜನರು ತಮ್ಮ ಸಮಸ್ಯೆ ಬಗ್ಗೆ ಖುದ್ದು ಡಿಸಿಎಂ ಮತ್ತು ಕ್ಷೇತ್ರ ಶಾಸಕರಾದ ಡಿ.ಕೆ.ಶಿವಕುಮಾರ್ ಅವರಿಗೆ ಅಹವಾಲು ಸಲ್ಲಿಸಬಹುದು. ಅವರು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದರ ಜೊತೆ ಜನರ ಸಮಸ್ಯೆ ಅರಿಯಲು ಆಡಳಿತ ಯಂತ್ರ ಚುರುಕಾಗಿಸಿ ಅಧಿಕಾರಿಗಳಿಗೆ ಕೂಡ ಬಿಸಿ ಮುಟ್ಟಿಸಲು ಜನತಾ ದರ್ಶನ ಸಹಾಯಕವಾಗುವ ನಿರೀಕ್ಷೆ ಇದೆ.

ಇನ್ನೂ ಈ ಜನ ಸಂಪರ್ಕ ಸಭೆಯಲ್ಲಿ ರಾಮನಗರ ಜಿಲ್ಲಾ & ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿದ್ದು, ಜನರ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿದ್ದಾರೆ ಎಂದು ಇದೀಗ ಜಿಲ್ಲಾಡಳಿತ ತಿಳಿಸಿದೆ. ಹಾಗೇ ಜನತಾ ದರ್ಶನಕ್ಕೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನ ಈಗ ಮಾಡಿಕೊಳ್ಳಲಾಗುತ್ತಿದೆ.












Click it and Unblock the Notifications