Darshan: ರೇಣುಕಾಸ್ವಾಮಿ ಕೊಲೆಯಾದ ದಿನವೇ ಭಯದಿಂದ ಪೊಲೀಸರಿಗೆ ಫೋನ್ ಮಾಡಿದ್ದ ದರ್ಶನ್; ಮುಂದೆ ಆಗಿದ್ದೇನು?
ಬೆಂಗಳೂರು, ಜೂನ್ 13: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಂದೂ ನಡೆಯದ ಘಟನೆಯೊಂದು ನಡೆದು ಹೋಗಿದೆ. ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಈಗ ಅಕ್ಷರಶಃ ವಿಲವಿಲ ಅಂತಿದ್ದು, ರೇಣುಕಾಸ್ವಾಮಿ ಕೊಲೆಯಾದ ದಿನವೇ ನಟ ದರ್ಶನ್ ಪೊಲೀಸರಿಗೆ ಫೋನ್ ಮಾಡಿದ್ದರು ಎಂಬ ವಿಚಾರ ತಡವಾಗಿ ಬೆಳಕಿದೆ ಬಂದಿದೆ.
ಹೌದು, ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಈಗಾಗಲೇ ಚುರುಕುಕೊಂಡಿದ್ದು, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ 17 ಆರೋಪಿಗಳ ಹೆಸರು ಉಲ್ಲೇಖಿಸಿದ್ದು, ಸದ್ಯ 13 ಜನರನ್ನು ಬಂಧಿಸಲಾಗಿದೆ.

ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಹಾಗೂ ಫೋಟೋಗಳನ್ನು ಕಳಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್, ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಕೊಲೆಯಾದ ದಿನವೇ ನಟ ದರ್ಶನ್ ಪೊಲೀಸರಿಗೆ ಫೋನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ರೇಣುಕಾ ಸ್ವಾಮಿ ಸಾವನ್ನಪ್ಪಿದ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಭಯದಲ್ಲಿ ನಡುಗುತ್ತಿದ್ದರಂತೆ. ಏನು ಮಾಡ್ಬೇಕು ಎಂದು ತಿಳಿಯದೆ ನಟ ದರ್ಶನ್, ನಟ ದರ್ಶನ್ ಪಶ್ಚಿಮ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿದ್ದರಂತೆ. 'ಅಚಾತುರ್ಯದಿಂದ ಒಂದು ಕೊಲೆ ಆಗಿದೆ' ಏನ್ಮಾಡಬೇಕೆಂದು ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಪಿ ಎಸ್ ಐ ನಟ ದರ್ಶನ್ ಅವರಿಗೆ ಕೊಲೆ ಮಾಡಿದವರು ಸೆರೆಂಡರ್ ಆಗ್ಬೇಕು ಎಂದಿದ್ದಾರೆ. ಪೊಲೀಸ್ ಅಧಿಕಾರಿ ಹೇಳಿದ್ದಂತೆ ನಾಲ್ವರನ್ನ ಸೆರೆಂಡರ್ ದರ್ಶನ್ ಮಾಡಿಸಿದ್ದರು. ರಾಘವೇಂದ್ರ , ನಿಖಿಲ್, ಕಾರ್ತಿಕ್, ಕೇಶವಮೂರ್ತಿ ಸೆರೆಂಡರ್ ಆಗಿದ್ರು. ಕೇಸ್ನಲ್ಲಿ PSI ಕೂಡ ಸಾಕ್ಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆಸಿ, ಬರ್ಬರವಾಗಿ ಹತ್ಯೆ ಮಾಡಿ, ಮೃತ ದೇಹ ಎಸೆಯಲಾಗಿತ್ತು. ವಿಚಾರಣೆ ವೇಳೆ ಮೃತ ದೇಹ ಎಸೆಯೋದಕ್ಕೆ ಬರೋಬ್ಬರಿ 30 ಲಕ್ಷ ರೂಪಾಯಿ ಡೀಲ್ ನಡೆಸಿರೋ ಮಾಹಿತಿಯೂ ಲಭ್ಯವಾಗಿದೆ. ಇನ್ನು ಇಡೀ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳಿದ್ದರು ಎನ್ನಲಾಗಿದೆ.












Click it and Unblock the Notifications