'ಮಾಟ-ಮಂತ್ರ, ವಶೀಕರಣ'ದ ಹೆಸರಲ್ಲಿ ಹಣ ಪೀಕಿದ್ರೆ ಕೇಸ್ ಹಾಕ್ತಾರೆ ಹುಲಿಕಲ್ ನಟರಾಜ್!: ಸಂತ್ರಸ್ತರು ಸಂಪರ್ಕಿಸಿ
ಬೆಂಗಳೂರು, ಜುಲೈ 19: ಸಾಮಾಜಿಕ ಜಾಲತಾಣದಲ್ಲಿ 'ಮಾಟ ಮಂತ್ರ, ಹಣಕಾಸಿನ ತೊಂದರೆ, ವಶೀಕರಣ, ಪತಿ - ಪತ್ನಿ ಕಲಹ, ವ್ಯಾಪಾರದಲ್ಲಿ ಲಾಭ - ನಷ್ಟ, ಆಸ್ತಿ ಕಲಹ ಹೀಗೆ ನಾನಾ ಸಮಸ್ಯೆಗೆಗಳಿಗೆ ಕೇವಲ 30 ನಿಮಿಷಗಳಲ್ಲಿ ಪರಿಹಾರ ಶತಸಿದ್ಧ' ಎಂಬ ಜಾಹೀರಾತುಗಳನ್ನು ನೋಡದವರೇ ಇಲ್ಲ ಎನ್ನಬಹುದು.
ದಿನಕ್ಕೊಂದು ಬಾರಿಯಾದರೂ ಈ ಜಾಹೀರಾತು ನಮ್ಮ ಕಣ್ಣಿಗೆ ಬೀಳಲಿದ್ದು, ಇದಕ್ಕೆ ಆಕರ್ಷಿತರಾಗಿ ಕರೆ ಮಾಡುವವರ ಸಂಖ್ಯೆಗೇನು ಕಡಿಮೆ ಇಲ್ಲ. ಹೀಗೆ ಮಾಟ ಮಂತ್ರದ ಹೆಸರಿನಲ್ಲಿ ಜನರಿಂದ ಹಣ ಪೀಕುವ ಹೊಸ ವ್ಯವಹಾರವನ್ನು ಕೆಲವರು ರೂಢಿಸಿಕೊಂಡಿದ್ದು, ದಿನ ಕಳೆದಂತೆ ವಂಚಕರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಈ ಮೋಸದ ಜಾಹೀರಾತಿಗೆ ಬಲಿಯಾಗಿ ಹಣ ಕಳೆದುಕೊಂಡವರ ಸಂಖ್ಯೆಯೂ ಸಹ ಹೆಚ್ಚಿದೆ.

ಹೀಗೆ ಭವಿಷ್ಯ ಚೆನ್ನಾಗಿರಲೆಂದು ಕೂಲಿ-ನಾಲಿ ಮಾಡಿ ಕೂಡಿಟ್ಟ ಹಣವನ್ನು 'ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುತ್ತೇವೆ, ನಮ್ಮನ್ನು ಸಂಪರ್ಕಿಸಿ' ಎಂದು ಹೇಳುವ ಕಿಡಿಗೇಡಿಗಳ ಮಾತು ಹಾಳು ಮಾಡುಕೊಂಡು ತಲೆ ಮೇಲೆ ಕೈ ಹೊತ್ತವರ ಸಂಖ್ಯೆ ಕೂಡ ದೊಡ್ಡ ಮಟ್ಟದಲ್ಲಿದೆ.
ಸಂತ್ರಸ್ತರ ಪರ ದೂರು ದಾಖಲಿಸಿ ಕಾನೂನಾತ್ಮಕ ಹೋರಾಟ
ಯಾರೋ ಹೇಳಿದ ಸಮಸ್ಯೆ ಬಗೆಹರಿಸಲು ಹೋಗಿ ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಂಡು ಕಂಗಾಲಾದವರಿಗೆ ಇದೀಗ ಹುಲಿಕಲ್ ನಟರಾಜ್ ಅವರು ಕಾನೂನಾತ್ಮಕವಾಗಿ ಹೋರಾಡಿ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಮೌಢ್ಯತೆ ವಿರುದ್ಧ ಅವರು ಬಹಿರಂಗ ಸಮರ ಸಾರಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು ಈ ರೀತಿ ಮೋಸ ಹೋದವರು ತಮ್ಮನ್ನು ದಾಖಲೆ, ಸಾಕ್ಷಿ ಸಮೇತ ಸಂಪರ್ಕಿಸಲು ಕರೆ ನೀಡಿದ್ದಾರೆ. ಹೀಗೆ ಹಣ ಕಳೆದುಕೊಂಡವರು ಇವರ ಬಳಿ ಸಾಕ್ಷಿ ಸಮೇತ ಬಂದರೆ 'ಕರ್ನಾಟಕ ಮೌಢ್ಯತೆ ಕಾನೂನು' ಅಡಿಯಲ್ಲಿ ದೂರು ದಾಖಲಿಸಿ ಹಣ ವಾಪಸ್ ಕೊಡಿಸಲಿದ್ದಾರೆ.
ಯಾರಾದರೂ ಈ ರೀತಿ ಹಣ ಕಳೆದುಕೊಂಡಿದ್ದರೆ ತಪ್ಪದೇ ಹುಲಿಕಲ್ ನಟರಾಜ್ ಅವರನ್ನು ಸಂಪರ್ಕಿಸಿ, ಸಾಕ್ಷಿ ಸಮೇತ ಮೋಸ ಹೋಗಿದ್ದರ ಬಗ್ಗೆ ದೂರು ನೀಡಬಹುದು. ಈ ಕುರಿತು ಅವರು ಸಾರ್ವಜನಿಕಾಗಿ ಕರೆ ನೀಡಿರುವ ವಿಡಿಯೋವನ್ನು ತಮ್ಮ (Hulikal Nataraj) ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕರೆ ಮಾಡಿ ಅಳಲು ತೋಡಿಕೊಂಡ ವ್ಯಕ್ತಿಗೆ ಸ್ಪಂದನೆ
ಹುಲಿಕಲ್ ನಟರಾಜ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ತಮಗೆ ಬೇರೆಯವರು ಮಾಟ, ಮಂತ್ರ ಮಾಡಿಸಿದ್ದಾರೆ, ಇದರಿಂದ ಮುಕ್ತಿ ಕೊಡಲು ಬಲಿ ಕೊಡಬೇಕು, ಪೂಜೆ ಮಾಡಿಸಿ ಪರಿಹಾರ ಕೊಡಬೇಕು ಎಂದು ಹೇಳಿದ್ದರು. ನಂಬಿ ನಾನು ರೂ.02 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದೇನೆ. ಮತ್ತೊಬ್ಬರಿಗೆ 51000 ರೂ. ಕೊಟ್ಟಿದ್ದೇನೆ. ನಿಮ್ಮ ಪೋಟೊ ಇಟ್ಟು ನೋಡಿ ಏನೇನು ಮಾಡಿಸಿದ್ದಾರೆ ನಿಮ್ಮ ಮೇಲೆ ಎಂದು ಹೇಳಿ ಮೋಸ ಮಾಡಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷ್ಯ ಕಳಹಿಸಿದರೆ ನಿಮಗೆ ನ್ಯಾಯ ದೊರಕಿಸಿಕೊಡುವುದಾಗಿ ಹುಲಿಕಲ್ ನಟರಾಜ್ ಅವರು ಸ್ಪಂದಿಸಿದ್ದಾರೆ.
ಹುಲಿಕಲ್ ನಟರಾಜ್ ಸಾಮಾಜಿಕ ಕಳಕಳಿ
ಇಂದು ನೀವು ಮೊಬೈಲ್‌ಗೆ ಅಡಿಕ್ಷನ್ ಆಗತ್ತಿದ್ದಾರೆ. ಈ ವೇಳೆ ಸ್ತ್ರವಶೀಕರಣ, ಪುರಷ ವಶೀಕರಣ, ಮಾಟ, ಮಂತ್ರದಂತಹ ಅನೇಕ ಜಾಹೀರಾತು ನೀಡುತ್ತಾರೆ. ಅದಕ್ಕೆ ಮರುಳಾಗಿ, ಅವರ ಖಾತೆ ಹಣ ಹಾಕುವ ಮೂಲಕ ಸಾರ್ವಜನಿಕರು ಎಚ್ಚರ ವಹಿಸಬೇಕು. ಯಾರು ಸಮಸ್ಯೆಯನ್ನು ಜಾರಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬೇರೆಯವರು ನಿಮಗೆ ಒಂದಷ್ಟು ಸಾಂತ್ವನ ಹೇಳಬಹುದೇ ವಿನಃ ಪರಿಹಾರ ಯಾರಿಂದಲೂ ಸಾಧ್ಯವಿಲ್ಲ.
ಹೀಗೆ ನಂಬಿ ಹಣ ಕಳೆದುಕೊಂಡವರು ಸಾಕ್ಷಿ ಸಮೇತ ನನ್ನ ಬಳಿ ಬಂದರೆ, 'ಕರ್ನಾಟಕದ ಮೌಡ್ಯತೆ ಕಾನೂನಿ'ನಡಿ ಮೋಸ ಮಾಡಿದವರ ವಿರುದ್ಧ ನಾನು ದೂರು ದಾಖಲಿಸುತ್ತೇನೆ. ನಿಮ್ಮೊಂದಿಗೆ ನಿಂತು ನಿಮ್ಮ ಹಣ ಮರಳಿ ಕೊಡಿಸುವ ಯತ್ನ ಮಾಡುತ್ತೇವೆ ಎಂದು ಹುಲಿಕಲ್ ನಟರಾಜ್ ಅವರು ಕರೆ ನೀಡಿದ್ದಾರೆ.












Click it and Unblock the Notifications