ಅವರಪ್ಪನ ಆಣೆ ಮಲ್ಲಿಕಾರ್ಜುನ್ ಖರ್ಗೆಯನ್ನ ಪ್ರಧಾನಿ ಮಾಡಲ್ಲ: ಮಾಜಿ ಸಚಿವ
ಚಿಕ್ಕಮಗಳೂರು, ಡಿಸೆಂಬರ್ 23: ಕಾಂಗ್ರೆಸ್ ದಲಿತರನ್ನ ಬರೀ ಹೇಳೋಕೆ,ತೋರಿಸೋಕೆ ಇಟ್ಟುಕೊಂಡಿದೆ ಅಷ್ಟೆ. ಇಂದಿನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಸ್ಥಾನ ಗೆಲ್ಲೋದೆ ಕಷ್ಟ. ಅವರಪ್ಪನಾ ಆಣೆ ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಮಂತ್ರಿ ಮಾಡಲ್ಲ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಸ್ಥಾನ ಗೆಲ್ಲೋದೆ ಕಷ್ಟ. ಇಂತಹಾ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮಾಡ್ತೀವಿ ಅಂದ್ರೆ, ಮಾಡಲ್ಲ. ಮೂರು ಲೋಕಕ್ಕೂ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಅಧ್ಯಕ್ಷರನ್ನಾಗಿ ಮಾಡಲಿ. ಪಾತಾಳ, ದೇವ, ಭೂಲೋಕ ಮೂರಕ್ಕೂ ಅವರನ್ನೇ ಮಾಡಲಿ ಎಂದರು.

ಮೆಜಾರಿಟಿ ಬಂದಾಗ ಮಾಡಿದ್ದಾರಾ.? ಕರ್ನಾಟಕಲ್ಲಿ ಮೆಜಾರಿಟಿ ಇದ್ದಾಗ ಸಿಎಂ ಮಾಡಿದ್ರಾ? ಏಕೆ ಪರಮೇಶ್ವರ್ ಅವರನ್ನ ಸಿಎಂ ಮಾಡಬಾರದಿತ್ತು. ದಲಿತರನ್ನ ಕಾಂಗ್ರೆಸ್ ಬರೀ ತೋರಿಸಕ್ಕೆ, ಹೇಳಕ್ಕೆ ಇಟ್ಕಂಡಿದೆ ಅಷ್ಟೆ. ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮುಖ್ಯಮಂತ್ರಿಯನ್ನೇ ಮಾಡ್ಲಿಲ್ಲ. ಪ್ರಧಾನಿ ಮಾಡುತ್ತಾರಾ ಎಂದು ಪ್ರಶ್ನಿಸಿದ ಅವರು, ಪರಮೇಶ್ವರ್ ಅವರು ಎಲ್ಲಿ ಸಿಎಂ ಆಗ್ತಾರೋ ಅಂತ ಷಡ್ಯಂತ್ರ, ಹಣ, ಜಾತಿಯಿಂದ ಸೋಲಿಸಿದರು. ಚುನಾವಣೆ ಪೂರ್ವ ಡಿ ಕೆ ಶಿವಕುಮಾರ್ ಅವರೇ ಖರ್ಗೆ ಸಿಎಂ ಆಗಲಿ ಎಂದಿದ್ರು. ಸುಮಾರು ಜನ ಅವರ ಮಾತನ್ನ ನಂಬಿ ಮಲ್ಲಕಾರ್ಜುನ್ ಖರ್ಗೆ ಸಿಎಂ ಆಗ್ತಾರೆ ಅಂತ ಓಟು ಹಾಕಿದ್ರು. ಮೆಜಾರಿಟಿ ಬಂದ ಮೇಲೆ ಖರ್ಗೆ ಅವರು ಇಲ್ಲ. ಖರ್ಗೆ ಅವರ ಹೆಸರೂ ಇಲ್ಲ. ಮೆಜಾರಿಟಿ ಬಂದ ಕಡೆಯೇ ಸಿಎಂ ಮಾಡ್ಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿಹಿಜಾಬ್ ನಿಷೇಧದ ವಿಚಾರವಾಗಿ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಹಿಜಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಯೂನಿಫಾರಂ ಕಡ್ಡಾಯ ಮಾಡಿತ್ತು. ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಯೂನಿಫಾರಂ ಕಡ್ಡಾಯ ಅನ್ನೋದು ತೆಗೀತಾರೋ. ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ನಿಷೇಧ ಆಗಿರಲಿಲ್ಲ. ಕೇವಲ ಶಾಲೆ-ಕಾಲೇಜುಗಳಲ್ಲಿ 1964 ಶಿಕ್ಷಣ ಕಾಯ್ದೆ ಪ್ರಕಾರ ಯೂನಿಫಾರಂ ಕಡ್ಡಾಯ ಮಾಡಿತ್ತು. ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು. ಎಲ್ಲಾ ಯೂನಿಫಾರಂ ಗೂ ಹಿಜಾಬ್ ಕಡ್ಡಾಯ ಮಾಡಲು ಹೊರಟಿದ್ದೀರೋ. ಯೂನಿಫಾರಂ ಬೇಡ ಅವರಿಷ್ಟದಂತೆ ಅಂತ ಮಾಡಲು ಹೊರಟಿದ್ದೀರೋ ಸ್ಪಷ್ಟಪಡಿಸಲಿ ಎಂದರು.

ಮಕ್ಕಳಿಗೆ ಯೂನಿಫಾರಂ ತಂದ ಉದ್ದೇಶ ಬಡವ-ಬಲ್ಲಿದ ಅಂತ ಬೇಧ ಇರಬಾರದು. ಜಾತಿಯ ಬೇದ ಇರಬಾರದು, ನಾವೆಲ್ಲರೂ ಸಮಾನರು ಎಂಬ ಮಾನಸಿಕತೆಯಲ್ಲಿ ಎಂದು ಕಲಿಯಬೇಕು ಅನ್ನೋ ಉದ್ದೇಶದಿಂದ ಸಿದ್ದರಾಮಯ್ಯ ಮನಸ್ಸಿಗೆ ಬಡವ-ಬಲ್ಲಿದ ಅಂತಿರಬೇಕು. ಈ ಜಾತಿ ಆ ಜಾತಿ ಅಂತ ಇರಬೇಕು, ಸಿದ್ದರಾಮಯ್ಯ ಕೇಸರಿ ಶಾಲ್ ಬ್ಯಾನ್ ಮಾಡ್ತಾರಾ? ಹಿಜಾಬ್ ಬ್ಯಾನ್ ಮಾಡಲ್ಲ ಅಂದ್ರೆ ಮುಂದಿನ ದಿನದಲ್ಲಿ ಕೇಸರಿ ಶಾಲು, ಹಸಿರು ಶಾಲು, ನೀಲಿ ಶಾಲು ಬರ್ತಾವೆ. ಆವಾಗ ಯಾವುದನ್ನ ಬ್ಯಾನ್ ಮಾಡ್ತಾರೆ. ಈ ರೀತಿ ಹೇಳಿಕೆ ಸಲ್ಲದು ಎಂದು ಹೇಳಿದರು.












Click it and Unblock the Notifications