ಸಚಿವರ ಇಲಾಖೆಗಳಿಗೆ ಕೊಟ್ಟಿರುವ ಟಾರ್ಗೆಟ್‌ನ ಪಟ್ಟಿ ಬಹಿರಂಗ!

ಬೆಂಗಳೂರು,ಅಕ್ಟೋಬರ್‌ 16: ಬೆಂಗಳೂರಿನ ಗುತ್ತಿಗೆದಾರರ ನಿವಾಸದಲ್ಲಿ 42 ಕೋಟಿ ಹಣ ಪತ್ತೆಯಾದ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರು ಹಲವು ಆರೋಪಿಗಳನ್ನ ಮಾಡಿದ್ದಾರೆ. ಅಲ್ಲದೇ ಪಂಚರಾಜ್ಯಗಳ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕದಿಂದ ಹಣ ಕಲೆಕ್ಷನ್‌ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ

ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದ್ದು, ಕಾಂಗ್ರೆಸ್‌ ಬಂದಿದೆ ಲೂಟಿಗೆ ಇಳಿದಿದೆ. ಮೊದಲ ಹಂತದಲ್ಲಿ ಹೈಕಮಾಂಡ್‌ ನೀಡಿರುವ ₹1000 ಕೋಟಿ ಟಾರ್ಗೆಟ್‌ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಕೊಟ್ಟಿರುವ ಟಾರ್ಗೆಟ್‌ನ ಪಟ್ಟಿಯನ್ನ ಟ್ವೀಟ್‌ ಮಾಡುವ ಮೂಲಕ ಕರ್ನಾಟಕ ಬಿಜೆಪಿ ಬಹಿರಂಗಪಡಿಸಿದೆ.

karnataka-bjp

ಸಚಿವರ ಇಲಾಖೆಗಳಿಗೆ ಕೊಟ್ಟಿರುವ ಟಾರ್ಗೆಟ್‌ನ ಪಟ್ಟಿ ಇಲ್ಲಿದೆ.

*ಡಿ.ಕೆ. ಶಿವಕುಮಾರ್‌- ಬೆಂಗಳೂರು ನಗರಾಭಿವೃದ್ಧಿ ₹250 ಕೋಟಿ

*ಆರ್‌.ಬಿ. ತಿಮ್ಮಾಪುರ- ಅಬಕಾರಿ ಇಲಾಖೆ ₹150 ಕೋಟಿ

*ಸತೀಶ್‌ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ ₹115 ಕೋಟಿ

*ಪ್ರಿಯಾಂಕ್‌ ಖರ್ಗೆ- ಗ್ರಾಮೀಣ ಅಭಿವೃದ್ಧಿ ಇಲಾಖೆ ₹100 ಕೋಟಿ

*ದಿನೇಶ್‌ ಗೂಂಡುರಾವ್- ಆರೋಗ್ಯ ಇಲಾಖೆ ₹75 ಕೋಟಿ

*ಚೆಲುವರಾಯ ಸ್ವಾಮಿ- ಕೃಷಿ ಇಲಾಖೆ ₹125 ಕೋಟಿ

*ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ ₹95 ಕೋಟಿ

*ಕೃಷ್ಣಭೈರೇಗೌಡ- ಕಂದಾಯ ಇಲಾಖೆ ₹90 ಕೋಟಿ.

ಇನ್ನೂ ಎರಡನೇ ಹಂತದ ಪಟ್ಟಿಯನ್ನು ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಕಲೆಕ್ಷನ್‌ ಏಜೆಂಟ್‌ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರಿಂದಲೇ ಸ್ವತಃ ಬಿಡುಗಡೆ ಆಗಲಿದೆ ಎಂದು ಬಿಜೆಪಿ ಹೇಳಿದೆ.

ಇನ್ನೂ ಹಣ ಪತ್ತೆಯಾದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟ್ವೀಟ್‌ ಮಾಡಿದ್ದು, ರಾಜ್ಯದ ಲಜ್ಜೆಗೆಟ್ಟ #ATMSarkara ಅನ್ಯ ರಾಜ್ಯಗಳ ಚುನಾವಣೆಯಲ್ಲಿ ಹಣದ ಹೊಳೆ ಹರಿಸಲು ಜನತೆಯ ದುಡಿಮೆಯನ್ನು ಲೂಟಿ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ತಮ್ಮ ಹೈಕಮಾಂಡ್ ತಿಜೋರಿ ತುಂಬಿಸಲು ಮಾತ್ರ ನಾ ಮುಂದು ತಾ ಮುಂದು ಎಂಬಂತೆ ರಾಜ್ಯ ದೋಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಕ್ರಮ ಹಣ ದೊರೆತ ಗುತ್ತಿಗೆದಾರನೇ ಕಾಂಗ್ರೆಸ್ ಮುಖಂಡರ ಹೆಸರು ಹೇಳಿದ್ದು, ಇದು ಕಾಂಗ್ರೆಸ್ ಸರ್ಕಾರವಲ್ಲ ಕಮಿಷನ್ ಸರ್ಕಾರ ಎಂದು ಸಾರುತ್ತಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದು ಕಮಿಷನ್ ಪಡೆದ ಎಲ್ಲ ದೊಡ್ಡ 'ಕೈ'ಗಳೂ ಹೊರಬರಲಿ. ರಾಜ್ಯದಲ್ಲಿ ಜನ ಬರದಿಂದ ಕಂಗೆಟ್ಟಿದ್ದರೆ ಲಜ್ಜೆಗೆಟ್ಟ ಸರ್ಕಾರ ಮಾತ್ರ ಲೂಟಿಯಲ್ಲಿ ನಿರತವಾಗಿದೆ ಎಂದು ಕಟೀಲ್‌ ಹೇಳಿದ್ದಾರೆ.

ಇನ್ನೂ ಬಿಜೆಪಿ ಸರಣಿ ಆರೋಪಕ್ಕೆ ರಾಜ್ಯ ಕಾಂಗ್ರೆಸ್‌ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ. ಕಲೆಕ್ಷನ್ ಗಿರಾಕಿ ಮೋದಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬಂದಿದ್ದು ಕಲೆಕ್ಷನ್ ಮಾಡುವುದಕ್ಕಾಗಿಯೇ ಎಂದು ರಾಜ್ಯ ಕಾಂಗ್ರೆಸ್‌, ಬಿಜೆಪಿಯನ್ನ ಕೇಳಿದೆ. ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 ರಿಂದ 80 ಕೋಟಿ ಹಾಗೂ ಬಿಜೆಪಿ ಟಿಕೆಟ್ ಗೆ 7 ಕೋಟಿ. ಇಂತಹ ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+