ಲೋಕಸಭಾ ಚುನಾವಣೆ: 28 ಕ್ಷೇತ್ರಗಳಲ್ಲಿ ನಿಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ ಎಂದ ಬಿಎಸ್ ವೈ ಆಪ್ತ
ದಾವಣಗೆರೆ, ಫೆಬ್ರವರಿ 10: ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಿಂದ ಸೋಲು ಕಂಡ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಎಂ ಪಿ ರೇಣುಕಾಚಾರ್ಯ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೆಚ್ಚು ಆಕ್ಟಿವ್ ಆಗಿದ್ದಾರೆ.
ಹೌದು, ದಾವಣೆಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಬಹಿರಂಗವಾಗಿ ಬೇಡಿಕೆ ಇಟ್ಟಿರುವ ಎಂ ಪಿ ರೇಣುಕಾಚಾರ್ಯ ಅವರು, ಲೋಕಸಭಾ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಛಿದ್ರ ಛಿದ್ರವಾಗುತ್ತದೆ. 28 ಕ್ಷೇತ್ರಗಳಲ್ಲಿ ನಿಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ನವರು ನೀಡಿದ ಎಲ್ಲಾ ಗ್ಯಾರಂಟಿಗಳು ಫೇಲ್ಯೂರ್ ಆಗಿವೆ. ಕಾಂಗ್ರೆಸ್ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. 9 ತಿಂಗಳಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಕಿಡಿಕಾರಿದ ಅವರು, ಈ ಹಿಂದೆ ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಅದೇ ಕೆಂಪಣ್ಣ ಕಾಂಗ್ರೆಸ್ ವಿರುದ್ಧ 40 % ಕಮಿಷನ್ ಆರೋಪ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕುಟುಕಿದ್ದಾರೆ.
ಇನ್ನೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಪಣ್ಣ 40% ಕಮಿಷನ್ ಆರೋಪ ಮಾಡಿದ್ದಾರೆ. ಈಗ ಆರೋಪ ಬಂದಿದೆಯಲ್ಲ, ಹೊಣೆ ಹೊತ್ತು ರಾಜೀನಾಮೆ ನೀಡಿ. ಗುತ್ತಿಗೆದಾರರು ಆರೋಪ ಮಾಡಿದ್ರೂ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ಈ ಸರ್ಕಾರದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಗುಂಡಿಕ್ಕಿ ಕೊಲ್ಲಬೇಕು ಎಂದು ಬಿಜೆಪಿ ಹಿರಿಯ ನಾಕಯ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಕುರಿತು ಮಾತನಾಡಿ, ಈಶ್ವರಪ್ಪ ಹಿಂದುತ್ವವಾದಿ, ಅದ್ದರಿಂದ ಇರೋದನ್ನೇ ಹೇಳಿದ್ದಾರೆ. ದೇಶ ವಿಭಜನೆ ಮಾಡಬೇಕು ಅಂದರೆ ಯಾರು ಸುಮ್ಮನೆ ಇರುತ್ತಾರೆ ಎಂದು ಕೆ ಎಸ್ ಈಶ್ವರಪ್ಪ ಅವರ ಹೇಳಿಕೆಯನ್ನ ರೇಣುಕಾಚಾರ್ಯ ಸಮರ್ಥಿಸಿಕೊಂಡರು. ಕಾಂಗ್ರೆಸ್ ವೈಫಲ್ಯ ಮುಚ್ಚಿ ಹಾಕಲು ಈ ರೀತಿ ಮಾತನಾಡುತ್ತಿದ್ದಾರೆ. ದೇಶ ವಿಭಜನೆ ಮಾತಾಡಿದರೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಅಂತಾ ಮಾತ್ರ ಹೇಳಿದ್ದಾರೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಹೇಳಿದರು.
ಈಶ್ವರಪ್ಪ ಹೇಳಿದ್ರಲ್ಲಿ ಏನೂ ತಪ್ಪಿಲ್ಲ: ಮುತಾಲಿಕ್
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥನೆ ಮಾಡಿಕೊಂಡಿದ್ದಾರೆ. ಗುಂಡಿಕ್ಕಿ ಕೊಲ್ಲಬೇಕು ಅನ್ನೋ ಹೇಳಿಕೆಯನ್ನ ನಾನು ಗಮನಿಸಿದ್ದೇನೆ, ಅವರು ಹೇಳಿರೋದು ಸರಿ ಇದೆ. ಈಶ್ವರಪ್ಪ ಹೇಳಿದ್ರಲ್ಲಿ ಏನೂ ತಪ್ಪಿಲ್ಲ. ಡಿ.ಕೆ.ಸುರೇಶ್ ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದರು.
ಈದ್ಗಾ ಮೈದಾನದಲ್ಲಿ ದ್ವಜ ಹಾರಿಸೋ ವೇಳೆ ಇದೇ ಕಾಂಗ್ರೆಸ್ ಇತ್ತು. ಇವರು ಗುಂಡು ಹಾರಿಸಿಲ್ವಾ..? ದೇಶ ವಿಭಜನೆ ಹೇಳಿಕೆ ಅತ್ಯಂತ ಕೆಟ್ಟ ಹೇಳಿಕೆ. ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಸಂಘರ್ಷದಲ್ಲಿ ತೊಡಗಿದೆ. ಡಿ.ಕೆ. ಸುರೇಶ ಅತ್ಯಂತ ಕೆಟ್ಟ ಹೇಳಿಕೆ ಕೊಟ್ಟಿದ್ದಾರೆ. ದೇಶ ಒಡೆಯೋ ಮಾತು ಬರಬಾರದು. ದೇಶ ಒಡೆಯೋ ಮಾತು ಸರಿ ಅಲ್ಲ, ಇದು ದೇಶದ್ರೋಹಿ ಕೃತ್ಯ. ದೇಶಕ್ಕಾಗಿ ಅನೇಕ ತ್ಯಾಗ ಬಲಿದಾನ ಆಗಿದೆ. ದೇಶ ಒಡಯೋ ಮಾತು ಅಕ್ಷಮ್ಯ ಅಪರಾಧ. ಇಸ್ಲಾಂ ಶಕ್ತಿ,ಕ್ರಿಶ್ಚಿಯನ್ ಶಕ್ತಿ,ಕಾಂಗ್ರೆಸ್ ಪಕ್ಷ ಯಾರೆ ಇರಲಿ ದೇಶ ಒಡೆಯೋಕೆ ಆಗಲ್ಲ. ಗಾಂಧಿ ಅವರ ಹಳೇ ಪ್ಲೇಟ್ ಹಾಕಬೇಡಿ. ಅವರನ್ನ ಕೊಲೆ ಮಾಡಿದವರಿಗೆ ಶಿಕ್ಷೆನೂ ಆಗಿದೆ ಎಂದರು.












Click it and Unblock the Notifications