Cauvery Dispute: ‘25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ?’
ಕಾವೇರಿ ನೀರಿನ ವಿಚಾರಕ್ಕೆ ಕಿರಿಕ್ ಇನ್ನೂ ನಿಂತಿಲ್ಲ. ಅದ್ರಲ್ಲೂ ರಾಜ್ಯದಲ್ಲಿ ಈ ಬಾರಿಯ ಬರ ರೈತರನ್ನ ಅಕ್ಷರಶಃ ಸಂಕಷ್ಟಕ್ಕೆ ನೂಕಿದೆ. ಕಾವೇರಿ ನದಿ ಕಣಿವೆ ಭಾಗದಲ್ಲಿ ಅನ್ನದಾತ ಬೆಳೆಗೆ ನೀರಿಲ್ಲದೆ ಕಂಗಾಲಾಗಿ ಹೋಗಿದ್ದಾನೆ. ಆದ್ರೆ ಈ ಪರಿಸ್ಥಿತಿಯಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ರಾಜಕೀಯ ಕಿತ್ತಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇದೀಗ '25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ?' ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಿದ್ದರೆ ಇತ್ತ ಕರ್ನಾಟಕ ಜಲಾಶಯಗಳು ಖಾಲಿ ಆಗುತ್ತಿವೆ. ಬರದ ಛಾಯೆ ಮಧ್ಯೆ ಕನ್ನಡಿಗರು ನರಳುತ್ತಿರುವ ಸಂದರ್ಭದಲ್ಲೇ, ತಮಿಳುನಾಡಿಗೆ ನೀರು ಬಿಡಬೇಕು ಎಂಬ ಆಘಾತ ಎದುರಾಗಿದೆ. ಇಷ್ಟು ಗೊಂದಲದ ನಡುವೆ ಕಾಂಗ್ರೆಸ್ ಮೇಲೆ ಬಿಜೆಪಿ & ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ ಮಾಡುವುದೇ ಆಗಿದೆ. ಈಗ ಕೂಡ ಅದೇ ನಡೆಯುತ್ತಿದ್ದು, ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿ ಪಕ್ಷದ 25 ಸಂಸದರ ಹೆಸರು ಪ್ರಸ್ತಾಪಿಸಿ ಕಮಲ ಪಾಳಯದ ನಾಯಕರಿಗೆ ಇದೀಗ ಕಾಂಗ್ರೆಸ್ ತಿರುಗೇಟು ನೀಡಿದೆ.

ಕಾವೇರಿ ವಿಚಾರದಲ್ಲಿ ಫೈಟ್ ಜೋರು!
ಕಾವೇರಿ ವಿವಾದದ ಕುರಿತು ಕಾಂಗ್ರೆಸ್, 'ರಾಜ್ಯದಲ್ಲಿ ಬರ ಎದುರಾಗಿದೆ, ಬರದ ಪರಿಣಾಮ ವಿದ್ಯುತ್ ಕೊರತೆ ಉಂಟಾಗಿದೆ, ಈ ಸಮಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಪರ ನಿಲ್ಲುವಂತೆ ಒತ್ತಾಯಿಸಬೇಕಾದ ಬಿಜೆಪಿಯ 25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ? ಬಿಜೆಪಿ ಸಂಸದರ ಕೆಲಸವೇನು? ಕನ್ನಡಿಗರ ಮತ ಪಡೆದು ಕನ್ನಡಿಗರ ಸಂಕಷ್ಟ ನಿವಾರಣೆಗೆ ಕೆಲಸ ಮಾಡದಿದ್ದ ಮೇಲೆ ಇವರು ಸಂಸದರ ಸ್ಥಾನಕ್ಕೆ ಅನರ್ಹರು.' ಎಂದು ಬಿಜೆಪಿ ನಾಯಕರನ್ನು ಕೆಣಕಿದೆ ಕರ್ನಾಟಕ ಕಾಂಗ್ರೆಸ್ ಘಟಕ.
ರಾಜ್ಯದಲ್ಲಿ ಬರ ಎದುರಾಗಿದೆ, ಬರದ ಪರಿಣಾಮ ವಿದ್ಯುತ್ ಕೊರತೆ ಉಂಟಾಗಿದೆ, ಈ ಸಮಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಪರ ನಿಲ್ಲುವಂತೆ ಒತ್ತಾಯಿಸಬೇಕಾದ ಬಿಜೆಪಿಯ 25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ?
— Karnataka Congress (@INCKarnataka) October 12, 2023
ಬಿಜೆಪಿ ಸಂಸದರ ಕೆಲಸವೇನು? ಕನ್ನಡಿಗರ ಮತ ಪಡೆದು ಕನ್ನಡಿಗರ ಸಂಕಷ್ಟ ನಿವಾರಣೆಗೆ ಕೆಲಸ ಮಾಡದಿದ್ದಮೇಲೆ ಇವರು ಸಂಸದರ ಸ್ಥಾನಕ್ಕೆ…
ಪ್ರತಾಪ್ ಸಿಂಹ ಉಚ್ಛಾಟನೆ...
ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಬಿಜೆಪಿ ಸಂಸದರಿಗೆ ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಲು ಸಮಯವಿಲ್ಲ. ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದಾಗ ಆ ತಂಡಕ್ಕೆ ಬರದ ತೀವ್ರತೆಯನ್ನು ಮನವರಿಕೆ ಮಾಡಿಕೊಡಲು ಸಮಯವಿಲ್ಲ. ಸಂಸದ ಸ್ಥಾನವೆಂದರೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಾ, ಸಮಾಜಕಂಟಕರಾಗಿ ವರ್ತಿಸುವುದು ಎಂದು ತಿಳಿದಿರುವ @mepratap ಅವರಿಗೆ ಅವರದ್ದೇ ಪಕ್ಷದ ಮುಖಂಡರು ಛೀಮಾರಿ ಹಾಕುತ್ತಿದ್ದಾರೆ. ದಲಿತ ಸಮುದಾಯಗಳ ಭಾವನೆಗೆ ಧಕ್ಕೆ ತರುತ್ತಿರುವ ಸಂಸದರ ವಿರುದ್ಧ ಬಿಜೆಪಿಯ ಎಸ್ ಸಿ ಮೋರ್ಚಾ ಪತ್ರ ಬರೆದಿದೆ. @BJP4Karnatakaಗೆ ದಲಿತರ ಬಗ್ಗೆ ಗೌರವವಿರುವುದೇ ಆದರೆ ಅವರದ್ದೇ ಪಕ್ಷದ ದಲಿತರ ಭಾವನೆಗೆ ಬೆಲೆ ಕೊಟ್ಟು ಪ್ರತಾಪ್ ಸಿಂಹನನ್ನು ಉಚ್ಛಾಟನೆ ಮಾಡಲಿ. ಇಲ್ಲವೇ ಬಿಜೆಪಿ ದಲಿತ ವಿರೋಧಿ ಎಂದು ಬಹಿರಂಗವಾಗಿ ಘೋಷಿಸಲಿ.' ಎಂದು ಸವಾಲು ಎಸೆದಿದೆ.












Click it and Unblock the Notifications