‘ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ!’: ಕಾಂಗ್ರೆಸ್ ಹೇಳಿಕೆ
ಪ್ರಜ್ವಲ್ ರೇವಣ್ಣ ಪ್ರಕರಣ ಪ್ರಸ್ತಾಪ ಮಾಡಿ ಜೆಡಿಎಸ್ & ಬಿಜೆಪಿ ನಾಯಕರ ವಿರುದ್ಧ ಈಗ ಕರ್ನಾಟಕ ಕಾಂಗ್ರೆಸ್ ನಾಯಕರು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ. ಅದೇ ರೀತಿ, ಈಗ 'ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ!' ಎಂದಿದೆ ಕರ್ನಾಟಕ ಕಾಂಗ್ರೆಸ್. ಹಾಗಾದ್ರೆ ಕಾಂಗ್ರೆಸ್‌ನ ಈ ಮಾತಿನ ಮರ್ಮವೇನು? ಮುಂದೆ ಓದಿ.
ಪ್ರಜ್ವಲ್ ರೇವಣ್ಣ ಮಾಡಿಕೊಂಡ ಎಡವಟ್ಟಿಗಾಗಿ, ಇದೀಗ ಕರ್ನಾಟಕದ ಮಾನ ಜಗತ್ತಿನ ಮೂಲೆ ಮೂಲೆಯಲ್ಲೂ ಹರಾಜು ಆಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಅಂದಹಾಗೆ, ಹಾಸನ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಬಗ್ಗೆ ಇದೀಗ ಕಾಂಗ್ರೆಸ್ ಸಾಲು ಸಾಲು ಆರೋಪ ಮಾಡುತ್ತಿದೆ. ಈ ಮೂಲಕ ಕರ್ನಾಟಕದಲ್ಲಿ ಈಗ ಕಿಚ್ಚು ಹೊತ್ತಿದೆ. ಹಾಗಾದರೆ, 'ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ!' ಅಂತಾ ಈಗ ಕಾಂಗ್ರೆಸ್ ಹೇಳಿದ್ದು ಯಾಕೆ? ಬನ್ನಿ ತಿಳಿಯೋಣ.

'ಜನತಾ ದಳವು ಬಿಜೆಪಿಯೊಂದಿಗೆ ಸೇರಿ..'
ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ, 'ಪೆನ್ ಡ್ರೈವ್ ಕುಮಾರನ ಅವಕಾಶವಾದಿತನಕ್ಕೆ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಸೇರಿ ಜಾತ್ಯಾತೀತತೆಯನ್ನು ವಿಸರ್ಜಿಸಿ "ಮಹಿಳಾ ಪೀಡಕ ಜನತಾ ದಳ"ವಾಗಿ ಮಾರ್ಪಟ್ಟಿದೆ. ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ!' ಎಂದು ಕಾಂಗ್ರೆಸ್ ಆರೋಪ ಮಾಡಿದೆ.
'ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ದನೂ ಅಲ್ಲ ಬ್ರದರ್ ಸ್ವಾಮಿ! ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು ಕೊಳಕು ತಿಂದು ಇತರರ ಬಾಯಿಗೆ ಒರೆಸಲು ಬರುತ್ತಿರುವುದು ಮೂರನ್ನೂ ಬಿಟ್ಟಿರುವ ನಿರ್ಲಜ್ಜತನದ ಪರಮಾವಧಿ.' ಎಂದಿದೆ ಕಾಂಗ್ರೆಸ್.
'ಪೆನ್ ಡ್ರೈವ್ ಬಿಡ್ತೀನಿ...'
ಇದೇ ಟ್ವೀಟ್‌ನಲ್ಲಿ ಕಾಂಗ್ರೆಸ್, 'ಪೆನ್ ಡ್ರೈವ್ ಬಿಡ್ತೀನಿ, ಬಿಡ್ತೀನಿ ಎಂದು ಒಂದು ವರ್ಷದಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿಯ ದೇವರಾಜೇಗೌಡನ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡು "ಅಖಿಲ ಕರ್ನಾಟಕಕ್ಕೆ ಹಂಚಿಕೆ" ಮಾಡಿದ್ದು ಇದೇ ಬ್ರದರ್ ಸ್ವಾಮಿಯಲ್ಲವೇ? ಪೂರ್ವಾಶ್ರಮದ ಸಿನೆಮಾ ಹಂಚಿಕೆಯ ವೃತ್ತಿ ಇದರಲ್ಲೂ ಸಹಾಯಕ್ಕೆ ಬಂದಿರಬಹುದು!' ಎಂದು ಕಾಲು ಎಳೆದಿದೆ ಕಾಂಗ್ರೆಸ್.
ಪೆನ್ ಡ್ರೈವ್ ಕುಮಾರನ ಅವಕಾಶವಾದಿತನಕ್ಕೆ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಸೇರಿ ಜಾತ್ಯಾತೀತತೆಯನ್ನು ವಿಸರ್ಜಿಸಿ "ಮಹಿಳಾ ಪೀಡಕ ಜನತಾ ದಳ"ವಾಗಿ ಮಾರ್ಪಟ್ಟಿದೆ.
— Karnataka Congress (@INCKarnataka) May 23, 2024
ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ!
ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ… pic.twitter.com/KjfeTbTSqV
ಅಂತಿಮವಾಗಿ ಕಾಂಗ್ರೆಸ್, 'ಜೆಡಿಎಸ್ ಪಕ್ಷದವರು ನಿಜವಾಗಿಯೂ ಮರ್ಯಾದೆಗೆ ಅಂಜುವವರೇ ಆಗಿದ್ದರೆ ಪ್ರಜ್ವಲ್ ರೇವಣ್ಣ ಮಾಡಿದ ಮಾನಗೇಡಿ ಕೆಲಸಕ್ಕೆ ಜನತೆಗೆ ಮುಖ ತೋರಿಸಲಾಗದೆ ಮನೆಯೊಳಗೆ ಮುಸುಕು ಹಾಕಿಕೊಂಡು ಕೂರಬೇಕಿತ್ತು, ಸಾರ್ವಜನಿಕ ಜೀವನ ತೊರೆದು ಮನೆ ಸೇರಿಸಬೇಕಿತ್ತು, ಆದರೆ ಅದ್ಯಾವ ಪಾಪಪ್ರಜ್ಞೆಯೂ ಕಾಡದೆ ಲಜ್ಜೆಯ ಲವಲೇಶವೂ ಇಲ್ಲದೆ ಕಂಡ ಕಂಡವರ ಕಡೆ ಕೈ ತೋರಿಸುತ್ತಿರುವುದು ಪ್ರಜ್ವಲ್ ಮಾಡಿದ ಹೀನ ಕೆಲಸಕ್ಕಿಂತಲೂ ಮಾನಗೇಡಿನ ಕೆಲಸ.' ಎಂದು ಹೇಳಿದೆ ಕರ್ನಾಟಕ ಕಾಂಗ್ರೆಸ್.












Click it and Unblock the Notifications