ವರ್ಗಾವಣೆ ದಂಧೆ ಅಧಿಕೃತವಾಗಿ ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ: ಬಿಜೆಪಿ

ಬೆಂಗಳೂರು, ಸೆಪ್ಟಂಬರ್ 04: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಭಷ್ಟಾಚಾರ ಆರೋಪಿಸಿ ಅದನ್ನು ಎಂದು ಅದನ್ನು ಜನತೆಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ. ಇದೀಗ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿದೆ ಎನ್ನಲಾದ ವರ್ಗಾವಣೆ ದಂಧೆ ಕುರಿತು ಬಿಜೆಪಿ ಬೆಳಕು ಚೆಲ್ಲಲು ಮುಂದಾಗಿದೆ. ಕಾಂಗ್ರೆಸ್‌ನಲ್ಲಿನ ವರ್ಗಾವಣೆ ದಂಧೆಯನ್ನು ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಸೋಮವಾರ ರಾಜ್ಯ ಬಿಜೆಪಿ ಈ ಕುರಿತು ಟ್ವೀಟ್ ಮಾಡಿದ್ದು, ಸರ್ಕಾರಿ ಅಧಿಕಾರಿಗಳ ವರ್ಗಾವಣೆಗಳು ಜೂನ್ 01ಕ್ಕೆ ಆರಂಭವಾಗಿ ಜುಲೈ 03ಕ್ಕೆ ಮುಗಿಯಬೇಕಾಗಿತ್ತು, ಆದರೆ ಈಗಲೂ ಅಂತಹ ಪ್ರಕ್ರಿಯೆಗಳ ಆಗುತ್ತಿದ್ದು ಅದಕ್ಕೆ ಕಡಿವಾಣ ಹಾಕು ಸರ್ಕಾರ ಮುಂದಾಗಿದೆ.

CM Siddaramaiah Admits To Transfer Scam In His Government: BJP Allegation

ಈ ಸಂಬಂಧ ವಾಗ್ದಾಳಿ ನಡೆಸಿರುವ ಬಿಜೆಪಿಯು, ತಾವೇ ಸ್ಥಾಪಿಸಿ, ಮುಗಿಲೆತ್ತರಕ್ಕೆ ಬೆಳೆಸಿದ್ದ ವರ್ಗಾವಣೆ ದಂಧೆ ಇಲ್ಲವೇ ಇಲ್ಲ ಎಂದು ವಾದಿಸಿದ್ದ ಸಿಎಂ ಸಿದ್ದರಾಮಯ್ಯ, ಈಗ ವರ್ಗಾವಣೆ ದಂಧೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ ಎಂದು ಕುಟುಕಿದೆ.

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ, ದಿಡ್ಡಿ ಬಾಗಿಲು ಹಾಕಿದರಂತೆ ಎಂಬ ಮಾತಿನಂತೆ, ಈಗ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡುವ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ರಾಜ್ಯ ಸರ್ಕಾರ ಕೈಗೊಂಡ ಕ್ರಮವೇನು?

ಸರ್ಕಾರಿ ವ್ಯಾಪ್ತಿಯಲ್ಲಿ ಸಾರ್ವತ್ರಿಕ ವರ್ಗಾವಣೆಯ ಅವಧಿ ಪೂರ್ಣಗೊಂಡಿದ್ದರು ಸಹ ಮುಖ್ಯಮಂತ್ರಿಗಳ ಅನುಮತಿ ಇಲ್ಲದೇ ಇಲಾಖೆ ಹಂತದಲ್ಲಿಯೇ ಎ,ಬಿ,ಸಿ ಮತ್ತು ಡಿ ವರ್ಗದ ಸಿಬ್ಬಂದಿ ವರ್ಗಾವಣೆ ಆದೇಶ ಮಾಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಒಂದು ವೇಳೆ ಸಿಎಂ ಪೂರ್ವಾನುಮತಿ ಇಲ್ಲದೇ ವರ್ಗಾವಣೆ ಮಾಡಿದರೆ ಇಲಾಖೆ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

CM Siddaramaiah Admits To Transfer Scam In His Government: BJP Allegation

ಸರ್ಕಾರಿ ನೌಕರರಿಗೆ ಶೇಕಡಾ 6ರಷ್ಟು ಮೀರದಂತೆ ಜೂನ್ 1ರಿಂದ 3ರವರೆಗೆ ಸಾರ್ವತ್ರಿಕ ಚುನಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರಿಗೆ ಅಧಿಕಾರ ನೀಡಲಾಗಿದೆ. ನಿಗದಿತ ಅವಧಿ ಮುಗಿದ ನಂತರ ವರ್ಗಾವಣೆ ಮಾಡಲು ಸಿಎಂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಿದ್ದ ಕೆಲವರು ವರ್ಗಾವಣೆ ಮಾಡಿದ ಘಟನೋತ್ತರ ಅನುಮತಿಗೆ ಕಡತಗಳನ್ನು ಸಿಎಂ ಕಳುಹಿಸುತ್ತಿದ್ದಾರೆ. ಈ ಸಂಬಂಧ ಶಾಸಕರು ಸಿಎಂಗೆ ದೂರು ನೀಡಿದ್ದರು. ಇದೆಲ್ಲ ಕಂಡು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಹೀಗಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಬಿಜೆಪಿ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ, ದಿಡ್ಡಿ ಬಾಗಿಲು ಹಾಕಿದರಂತೆ ಎಂಬ ಮಾತಿನಂತೆ, ಮುಖ್ಯಮಂತ್ರಿಗಳು ಈಗ ಕ್ರಮದ ಮಾತುಗಳನ್ನು ಆಡುತ್ತಿದ್ದಾರೆ ಎಂದು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+