CM Siddaramaiah: ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳುವ ಯೋಗ್ಯತೆ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಜುಲೈ 19: ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳುವ ಯೋಗ್ಯತೆ ಇಲ್ಲದ ಬಿಜೆಪಿ ಎಂದು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ದ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸದನದಲ್ಲಿ ಮಾತನಾಡಿದ ಅವರು, ಹೊಸ ಸರ್ಕಾರ ಬಂದು ನಾಳೆಗೆ ಎರಡು ತಿಂಗಳಾಗುತ್ತದೆ. ವಿರೋಧ ಪಕ್ಷಗಳು ಕೂಡ ಪ್ರಬಲವಾಗಿರಬೇಕು,ವಿರೋಧ ಪಕ್ಷ ಪ್ರತಿಭಟನೆ ಮಾಡಲು ತಕರಾರು ಇಲ್ಲ. ನಿಯಮಾವಳಿ ಮಾಡಿದ್ದೇವೆ ಸದನ ನಡೆಯಲು, ಪೀಠಕ್ಕೆ ಗೌರವ ಕೊಡುವ ಕೆಲಸ ಮಾಡಬೇಕು ಸದನದ ಬಾವಿಗಿಳಿಯುವುದು ಸಾಮಾನ್ಯ ನಾನು ಸಹ ಎರಡು ಬಾರಿ ವಿರೋಧ ಪಕ್ಷದ ನಾಯಕ ಆಗಿದ್ದೇನೆ.
ಇದು ಗೂಂಡಾ ವರ್ತನೆ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಜನರ ಸಮಸ್ಯೆ ಚರ್ಚೆ ಮಾಡಲು ಇಲ್ಲಿ ಬಂದಿದ್ದೇವೆ, ನಾಡಿದ್ದು ಸದನ ಮುಗಿಯುತ್ತೆ, ಜನರ ಸಮಸ್ಯೆ ಚರ್ಚೆ ಮಾಡಬೇಕಿತ್ತು. ಇನ್ನೂ ಜೆಡಿಎಸ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ನಗು ತರುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೇರೆ ರಾಜ್ಯದ ಗೌರವಿಸೋದು ಪರಂಪರೆ ಅಲ್ವಾ..? ಮೊದಲಿಂದಲೂ ನಡೆದುಕೊಂಡು ಬಂದಿರುವ ಪದ್ದತಿ ಇದು, ವಿಪಕ್ಷ ನಾಯಕರನ್ನು ಕರೆದುಕೊಂಡು ಬರೋದಕ್ಕೆ ಐಎಎಸ್ ಅಧಿಕಾರಿಗಳ ನ್ನು ನಿಯೋಜನೆ ಮಾಡಿದ್ದು ಅಷ್ಟೇ. ಇದಕ್ಕೆ ಇಡೀ ದಿನ ರಂಪಾ ಮಾಡಿದ್ದಾರೆ, ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಪೇಪರ್ ಎಸೆದಿದ್ದಾರೆ.ಬಹಳ ಅಸಭ್ಯ ವಾಗಿ ನಡೆದುಕೊಂಡಿದ್ದಾರೆ. ಅನಾಗರಿಕವಾಗಿ ನಡೆದುಕೊಂಡಿದ್ದಾರೆ.
ವಿರೋಧ ಪಕ್ಷ ಇದ್ದಾಗ ಬಹಳ ಗೌರವ ಯುತ ವಾಗಿ ನಡೆದುಕೊಳ್ಳಬೇಕು. ನಾವು ಹಿಂದೆ ವಿಪಕ್ಷ ಆದಾಗ ಗೌರವ ಯುತವಾಗಿ ನಡೆದುಕೊಂಡಿದ್ದೇವೆ, ನಾವು ಐದು ಗ್ಯಾರಂಟಿ ಗಳನ್ನು ಕೊಟ್ಟಿರೋದೇ ಅವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ಬಿಜೆಪಿಯವರು ಬಹಳ ಹತಾಶರಾಗಿದ್ದಾರೆ. ಕೊಟ್ಟ ಮಾತಿನ ವೇಳೆ ಅವರು ನಡೆದುಕೊಳ್ಳೋರು ಅಲ್ಲ, ಆದರೆ ನಾವು ಕಾಯಕವೇ ಕೈಲಾಸದಂತೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಜನರ ಖುಷಿಯಾಗಿದ್ದಾರೆ, ಇವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ಬಿಜೆಪಿ ಯವರಿಗೆ ಹೊಟ್ಟೆ ಉರೀ ಎಂದು ಸಿದ್ದರಾಮಯ್ಯ ಕುಟುಕಿದರು.
ನಾವು ಬಸವಣ್ಣನವರ ಸಂಸ್ಕಾರದಂತೆ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದನ್ನು ನಾಡಿನ ಜನ ಸ್ವಾಗತಿಸಿದ್ದಾರೆ, ಸಂಭ್ರಮಿಸಿದ್ದಾರೆ. ಇದನ್ನು ಬಿಜೆಪಿ ಯವರಿಗೆ ಸಹಿಸಲು ಆಗುತ್ತಿಲ್ಲ, ಸಂಕಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿದಾನಸಭಾ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಸ್ಪೀಕರ್ ಮುಖಕ್ಕೆ ಪೇಪರ್ ಹರಿದು ಎಸೆದದ್ದು ಮತ್ತು ಸ್ಪೀಕರ್ ಪೀಠಕ್ಕೆ ಅವಮಾನಿಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಇಂದು ಅತ್ಯಂತ ಬೇಸರದ ದಿನ. ನಮ್ಮ ಐದು ಗ್ಯಾರಂಟಿಗಳನ್ನು ನಾಡಿನ ಜನತೆ ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು ಬಿಜೆಪಿ ಶಾಸಕರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಪೂರ್ಣ ವಿರೋಧ ಪಕ್ಷ ಇರಬೇಕು ಎನ್ನುವುದು ನನ್ನ ನಂಬಿಕೆ. ಈ ಕಾರಣಕ್ಕೇ ನಾವು ಬಿಜೆಪಿ ಮುಕ್ತ ಎನ್ನುವ ಮಾತನ್ನು ಯಾವತ್ತೂ ಆಡಿಲ್ಲ. ಇವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಗೌರವ ಇಲ್ಲ.
ಅಂಬೇಡ್ಕರ್, ಬುದ್ದ, ಬಸವ ಮುಂತಾದ ಮಹನೀಯರ ಪ್ರಜಾಪ್ರಭುತ್ವವಾದಿ ಮೌಲ್ಯಗಳ ಮುಂದುವರೆದ ಪರಂಪರೆಯ ಪ್ರಾತಿನಿಧಿಕ ಸಂಸ್ಥೆಯಾಗಿದ್ದ ವಿಧಾನಸಭೆಗೆ ಅಗೌರವ ಸಲ್ಲಿಸಿದ್ದಾರೆ.
ಪ್ರಜಾಪ್ರಭುತ್ವ ಮಾದರಿಯಲ್ಲಿ ಮತ್ತು ಸದನದ ನಿಯಮಾವಳಿಗಳ ಆಧಾರದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿಯವರಿಗೆ ಅವಕಾಶ ಇತ್ತು. ಆದರೆ ಸ್ಪೀಕರ್ ಮುಖಕ್ಕೆ ಪತ್ರ ಎಸೆಯುವುದು, ಸ್ಪೀಕರ್ ಪೀಠಕ್ಕೆ ಎಸೆಯುವುದು, ಅವಮಾನ ಮಾಡುವುದು ನಿಯಮ ಬಾಹಿರ. ಇದು ಅನಾಗರೀಕ ನಡವಳಿಕೆಯಲ್ಲವೇ ಎಂದು ಪ್ರಶ್ನಿಸಿದರು.
ಇನ್ನೂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲೂ ಐಎಎಸ್ ಅಧಿಕಾರಿಗಳನ್ನೇ ಲೈಸನಿಂಗ್ ಅಧಿಕಾರಿಗಳನ್ನಾಗಿ ಮಾಡಿದ್ದರು. ಆದೆಲ್ಲಾ ಅವರಿಗೆ ಮರೆತುಹೋಯ್ತಾ ? ಎಂದು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.











Click it and Unblock the Notifications