Channapatna BY-Election: ಸಿ ಪಿ ಯೋಗೇಶ್ವರ್‌ VS ನಿಖಿಲ್‌ ಕುಮಾರಸ್ವಾಮಿ: ಗೆಲುವು ಯಾರಿಗೆ?

ಬೆಂಗಳೂರು, ಅಕ್ಟೋಬರ್‌ 24: ಲೋಕಸಭಾ ಚುನಾವಣೆಯ ಬಳಿಕ ತೆರವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಸದ್ಯ ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಇಡೀ ದೇಶದ ಗಮನ ಸೇಳೆಯುತ್ತಿದೆ. ಮೂರು ಉಪಚುನಾವಣೆಗಳಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ಕುರುಕ್ಷೇತ್ರ ಅಖಾಡವಾಗಿದ್ದು, ಡಿ ಕೆ ಬ್ರದರ್ಸ್‌ ಗೆ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯಾಗಿದ್ರೆ, ಜೆಡಿಎಸ್‌ ಗೆ ಚನ್ನಪಟ್ಟಣ ಅಸ್ತಿತ್ವದ ಪ್ರಶ್ನೆಯಾಗಿದೆ.

ನಿನ್ನೆಮೊನ್ನೆವರೆಗೂ ರಾಮನಗರ ಜಿಲ್ಲೆಯಲ್ಲಿ ಸಿ ಪಿ ಯೋಗೇಶ್ವರ್‌ VS ಡಿಕೆ ಬ್ರದರ್ಸ್ ಎನ್ನುವ ಮಾತುಗಳು ಇತ್ತು. ಆದರೆ, ಕಳೆದೆರಡು ದಿನಗಳಲ್ಲಿ ನಡೆದ ರಾಜಕೀಯ ಪಲ್ಲಟಗಳಿಂದ ಶತ್ರುಗಳು ಮಿತ್ರರಾಗಿದ್ದಾರೆ. ಸಿ ಪಿ ಯೋಗೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇಂದು(ಗುರುವಾರ) ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಸೋಲು ಕಂಡ ನಿಖಿಲ್‌ ಕುಮಾರಸ್ವಾಮಿ ಅವರನ್ನ ಚನ್ನಪಟ್ಟಣದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ.

Channapatna BY-Election CP Yogeshwar VS Nikhil Kumaraswamy Who will win

ಪುತ್ರ ರಾಜಕೀಯ ಭವಿಷ್ಯಕ್ಕಾಗಿ ಹೆಚ್‌ ಡಿ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್‌ ನಾಯಕರ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಸುಲಭವಾಗಿ ಪುತ್ರನನ್ನ ಗೆಲಿಸಿಕೊಂಡುಬರಹುದು ಎಂಬ ಲೆಕ್ಕಾಚಾರವನ್ನ ಹಾಕಿಕೊಂಡಿದ್ರು. ಆದರೆ, ಸಿ ಪಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆಯಿಂದ ದಳಪತಿಗಳಿಗೆ ಈ ಉಪಚುನಾವಣೆ ಪ್ರತಿಷ್ಠೆಯಾಗಿದೆ.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ನಡೆಸಿದ್ದು, 2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರನ್ನು ಬಿಜೆಪಿ ಬೆಂಬಲಿಸಿತ್ತು. ಅಲ್ಲದೇ ಬಿಜೆಪಿಯೂ ಅಭ್ಯರ್ಥಿಯನ್ನ ಕಣಕ್ಕೆ ಇಳಿಸದೇ ಪಕ್ಷದ ಕಾರ್ಯಕರ್ತರು ಸುಮಲತಾ ಅವರನ್ನು ಗೆಲ್ಲಿಸಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ 7,03,660 ಮತಗಳನ್ನು ಪಡೆದರೆ, ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದಿದ್ದು, ಸೋಲು ಅನುಭವಿಸಿದ್ದರು.

ಇನ್ನೂ 2023 ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದು. ಇನ್ನೂ 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಾರೆ ಎನ್ನಲಾಗಿತ್ತು. ಒಂದು ವೇಳೆ ನಿಖಿಲ್‌ ಸ್ಪರ್ಧೆ ಮಾಡಿದ್ರೆ, ಸೋಲು ಅನುಭವಿಸುತ್ತಾರೆ ಎಂದು ಹಲವು ಸಮೀಕ್ಷೆಗಳು ವರದಿ ನೀಡಿತ್ತು. ಹೀಗಾಗಿ ಕುಮಾರಸ್ವಾಮಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿ, ಪುತ್ರನಿಗೆ ರಾಜಕೀಯ ಭವಿಷ್ಯವನ್ನ ರೂಪಿಸಲು ಮಂಡ್ಯದಿಂದ ಸ್ಪರ್ಧೆ ನಡೆಸಿ, ಇದೀಗ ಚನ್ನಪಟ್ಟಣ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದಾರೆ.

ಕಾಂಗ್ರೆಸ್‌ ನಿಂದ ಸ್ಪರ್ಧೆ ನಡೆಸಿರುವ ಸಿ ಪಿ ಯೋಗೇಶ್ವರ್‌ಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಅಲ್ಲದೇ ಸಿಪಿ ಯೋಗೇಶ್ವರ್ ಅವರಿಗೆ ಹಳೆ ಮೈಸೂರು ಭಾಗದಲ್ಲಿ ಒಳ್ಳೆಯ ಹಿಡಿತ ಇರುವುದರಿಂದ ಬಿಜೆಪಿಗೆ ಆ ಭಾಗದಲ್ಲಿ ಒಕ್ಕಲಿಗರ ದೊಡ್ಡ ಲೀಡರ್ ಎನಿಸಿಕೊಂಡಿದ್ದರು. ರಾಮನಗರ ಭಾಗದಲ್ಲಿ ಅವರಿಗೆ ವ್ಯಕ್ತಿಗತ ಮತಗಳಿವೆ, ಅದರಲ್ಲೂ ಅಲ್ಪ ಸಂಖ್ಯಾತ ಹಾಗು ದಲಿತ ಮತಗಳನ್ನು ಸಿ ಪಿ ಯೋಗೇಶ್ವರ್‌ ಅವರು ಗಳಿಸಿದ್ದಾರೆ. ಇನ್ನೂ ಡಿ ಕೆ ಬ್ರದರ್ಸ್‌ ಅವರ ವರ್ಚಸ್ಸು ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಕ ಮತಗಳನ್ನೇ ಸೈನಿಕ ಪಡೆಯುವ ಮೂಲಕ ಎನ್‌ ಡಿ ಎ ಅಭ್ಯರ್ಥಿಯಾಗಿರುವ ನಿಖಿಲ್‌ ಕುಮಾರಸ್ವಾಮಿ ಅವರ ವಿರುದ್ಧ ಸುಲಭವಾಗಿ ಗೆಲ್ಲಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+