Budget 2023;ಇಂದಿನ ಕೇಂದ್ರ ಬಜೆಟ್ ಇಡೀ ದೇಶಕ್ಕೆ ಪೂರಕವಾದ ಬಜೆಟ್: ಆರಗ ಜ್ಞಾನೇಂದ್ರ

ಆರ್ಥಿಕ ಶಿಸ್ತನ್ನು ಉಳಿಸಿಕೊಂಡು ಜನರಿಗೆ ಉಪಯೋಗ ಆಗುವ ಯೋಜನೆ ಘೋಷಿಸಿದ್ದಾರೆ. ಅತ್ಯಂತ ಒಳ್ಳೆಯ ಬಜೆಟ್ ಇದಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಬೆಂಗಳೂರು,ಫೆಬ್ರವರಿ1: ಇಂದಿನ ಕೇಂದ್ರ ಬಜೆಟ್ ಇಡೀ ದೇಶಕ್ಕೆ ಪೂರಕವಾದ ಬಜೆಟ್ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುವ ರೀತಿಯಲ್ಲಿ ಭಾರತ ಬೆಳವಣಿಗೆ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತನ್ನು ಉಳಿಸಿಕೊಂಡು ಜನರಿಗೆ ಉಪಯೋಗ ಆಗುವ ಯೋಜನೆ ಘೋಷಿಸಿದ್ದಾರೆ. ಅತ್ಯಂತ ಒಳ್ಳೆಯ ಬಜೆಟ್ ಇದಾಗಿದೆ ಎಂದು ಹೇಳಿದರು.

Budget 2023 Reactions : Araga Jnanendra Reaction about Union Budget 2023-24

ಇನ್ನೂ ರಾಜ್ಯ ಬಜೆಟ್ ಸಹ ಉತ್ತಮ ಆಗಿರಲಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಮೂರು ಬಾರಿ ಇಡೀ ರಾಜ್ಯ ಸುತ್ತಿದ್ದಾರೆ. ಜನರ ಅಹವಾಲು ಆಲಿಸಿದ್ದಾರೆ. ಜನಪರ, ರೈತಪರ, ಕಾರ್ಮಿಕರ ಪರವಾದ ಒಳ್ಳೆಯ ಬಜೆಟ್ ಅನ್ನು ಮುಖ್ಯಮಂತ್ರಿಗಳು ನೀಡುತ್ತಾರೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ: ಕೇಂದ್ರಕ್ಕೆ ಧನ್ಯವಾದ ತಿಳಿಸಿದ ಸಿಎಂ

ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ ನಿರ್ಮಾಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಸವರಜ ಬೊಮ್ಮಾಪಯಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+