ಕೋಲಾರ ಜನತೆಯ "ಕೈ"ಗೆ ಚಿಪ್ಪು ಕೊಟ್ಟ ಸಿದ್ದರಾಮಯ್ಯ ಅವರೇ, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದ ಬಿಜೆಪಿ!

ಬೆಂಗಳೂರು,ಡಿಸೆಂಬರ್‌ 28: ಸಿದ್ದರಾಮಯ್ಯರವರೇ, ಚಿನ್ನದ ಭೂಮಿ ಕೋಲಾರಮ್ಮನ ನಾಡಿಗೆ ಕಾಲಿಡುವುದಕ್ಕೆ ಯಾವ ನೈತಿಕತೆ ಉಳಿಸಿಕೊಂಡಿದ್ದೀರಿ. ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!? ಎಂದು ರಾಜ್ಯ ಬಿಜೆಪಿ ಹಲವು ಪ್ರಶ್ನೆಗಳನ್ನ ಸಿದ್ದರಾಮಯ್ಯ ಅವರ ಮುಂದೆ ಇಟ್ಟಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕೋಲಾರ ಜನತೆಯ "ಕೈ"ಗೆ ಚಿಪ್ಪು ಕೊಟ್ಟು, ಈಗ ಚುನಾವಣೆಗಾಗಿ ಅವರ ಕಾಲು ಹಿಡಿಯಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅವರೇ, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!

BJP Questioned Siddaramaiah As To What Morals He Retained To Go To Kolar

▪️ಕೋಲಾರದ ಶಾಸಕರಿಗೆ ಮಂತ್ರಿಗಿರಿ ನೀಡಲಿಲ್ಲ ಏಕೆ?
▪️ಜಿಲ್ಲೆಯ ರೈತರ ಹಾಲಿಗೆ ಇನ್ನೂ ₹7 ಸಬ್ಸಿಡಿ ನೀಡಿಲ್ಲ ಏಕೆ?
▪️ಮಾವು ಬೆಳೆಗಾರರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ ಏಕೆ?
▪️ಸಿಎಂ ಆದ ತಕ್ಷಣವೇ ಜಿಲ್ಲೆಯನ್ನು ಜಿಹಾದಿಗಳಿಗೆ ಅಡವಿಟ್ಟಿದ್ದೇಕೆ?
▪️ಶಾಂತಿ ಆವರಿಸಿದ್ದ ಕೋಲಾರದಲ್ಲಿ ಅಶಾಂತಿ ಸೃಷ್ಟಿಸಿದ್ದೇಕೆ?
▪️ಕೋಲಾರದಲ್ಲಿ ರೈತ ಮಾಲ್ ಸ್ಥಾಪನೆ ಮಾಡುವುದು ಯಾವಾಗ?

ಇನ್ನೊಂದು ಟ್ವೀಟ್‌ ಮಾಡಿರುವ ಬಿಜೆಪಿ, ಎಲ್ಲದರಲ್ಲೂ ಭಷ್ಟಾಚಾರದ ಹಾದಿ ಕಂಡುಕೊಂಡಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಹಾದಿ ಬೀದಿಯಲ್ಲಿ ನಿಂತು ಮಾತನಾಡುತ್ತಿರುವುದು ಮಾತ್ರವಲ್ಲ, ಅವರದೇ ಪಕ್ಷದ ಶಾಸಕರೇ ಮಾತನಾಡುತ್ತಿದ್ದಾರೆ. ಸರ್ಕಾರದ ಕಮಿಷನ್‌ ಹಾಪಾಹಪಿ, ಮಕ್ಕಳ ಶೂ ಖರೀದಿಯಲ್ಲೂ ಕಮಿಷನ್‌ ಹೊಡೆಯುತ್ತಿರುವ ಅವರದೇ ಸರ್ಕಾರದ ಬಗ್ಗೆ ಶಾಸಕ ರಾಜು ಕಾಗೆ ಅವರು ಬಾಯ್ತಪ್ಪಿ ಸತ್ಯ ನುಡಿದುಬಿಟ್ಟಿದ್ದಾರೆ.

ಕಮಿಷನ್‌ ಹೊಡೆದಿರುವುದೇನೋ ಜನರಿಗೆ ವೇದಿಕೆಯಿಂದಲೇ ಖಾತರಿಯಾಯಿತು. ಮಕ್ಕಳ ಬೂಟಿನ ಬಾಬ್ತಿನಲ್ಲಿ ಎಷ್ಟು ತಿನ್ನಲಾಗಿದೆ ಎಂಬುದನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ತಿಳಿಸಿ ಕನ್ನಡಿಗರ ಜ್ಞಾನ ವಿಸ್ತಾರಕ್ಕೆ ಕಾರಣವಾಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+