Government Employee: ಸಾಮಾನ್ಯ ಭವಿಷ್ಯ ನಿಧಿ ಕುರಿತು ಬಿಗ್ ಅಪ್‌ಡೇಟ್
ಬೆಂಗಳೂರು, ಫೆಬ್ರವರಿ 24: ಸಾಮಾನ್ಯ ಭವಿಷ್ಯ ನಿಧಿ (GPF) ಸರ್ಕಾರಿ ಉದ್ಯೋಗಿಗಳ ನಿವೃತ್ತಿ ಉಳಿತಾಯ ಖಾತೆಯಾಗಿದೆ. ಕರ್ನಾಟಕ ಸರ್ಕಾರ ಈಗ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಭಾಗಶಃ ಹಿಂಪಡೆಯುವಿಕೆ ಮತ್ತು ಅಂತಿಮ ಹಿಂಪಡೆಯುವಿಕೆಯ ಅಧೀಕರಣದ ಪ್ರತಿಗಳನ್ನು ವೆಚ್ಚ ಪೋರ್ಟ್‌ನಲ್ಲಿ ವೀಕ್ಷಿಸಲು ಮತ್ತು ಪ್ರತಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿರುವ ಕುರಿತು ಆದೇಶವನ್ನು ಹೊರಡಿಸಲಾಗಿದೆ. ಈ ಕುರಿತು ಸರ್ಕಾರಿ ನೌಕರರಿಗೆ ಮಾಹಿತಿ ನೀಡಲಾಗಿದೆ.
ಈ ಕುರಿತು ನೇತ್ರಪ್ರಭಾ ಎಂ. ಧಾಯಪುಲೆ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ & ಮುಂಗಡಗಳು) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರು ಅವರ ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಭಾಗಶಃ ಹಿಂಪಡೆಯುವಿಕೆ ಮತ್ತು ಅಂತಿಮ ಹಿಂಪಡೆಯುವಿಕೆಯ ಅಧೀಕರಣದ ಪ್ರತಿಗಳನ್ನು ವೆಬ್ ಪೋರ್ಟಲ್‌ನಲ್ಲಿ ವೀಕ್ಷಿಸಲು ಮತ್ತು ಪ್ರತಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿರುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಆದೇಶದ ವಿವರಗಳು: ಸಾಮಾನ್ಯ ಭವಿಷ್ಯ ನಿಧಿ ಖಾತೆಯನ್ನು ಹೊಂದಿರುವ ಚಂದಾದಾರರು ತಮ್ಮ ಸಾಮಾನ್ಯ ಭವಿಷ್ಯ ನಿಧಿಯ ಅಧೀಕರಣಗಳನ್ನು ನೋಡುವ ಹಾಗೂ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ AG (A&E) Public Portal ನ ಕರ್ನಾಟಕ ವೆಬ್‌ಸೈಟ್ (https://agopublic.kar.nic.in) ದಿನಾಂಕ 01.09.2024 ರಿಂದ ಲಭ್ಯಪಡಿಸಲಾಗಿರುತ್ತದೆ ಎಂದು ಹೇಳಿದೆ.
ಈ ಸಂಬಂಧ ಮಹಾಲೇಖಪಾಲರ ಕಛೇರಿಯು ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರ ಭಾಗಶಃ ಹಿಂಪಡೆಯುವಿಕೆ ಮತ್ತು ಅಂತಿಮ ಹಿಂಪಡೆಯುವಿಕೆಯ ಅಧೀಕರಣದ ಇ-ಸಹಿಯುಳ್ಳ ಚಂದಾದಾರರ ಪ್ರತಿಯನ್ನು ಮೇಲ್ಕಂಡ ವೆಬ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ಅದನ್ನು ಚಂದಾದಾರರು/ ಚಂದಾದಾರರ ಕಾನೂನುಬದ್ಧ ವಾರಸುದಾರರು ಲಾಗಿನ್ ಆಗಿ ನೋಡಲು ಹಾಗೂ ಡೌನ್‌ಲೋಡ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಅಧೀಕರಣದ ಭೌತಿಕ ಪ್ರತಿಗಳನ್ನು ಚಂದಾದಾರರಿಗೆ ಹಿಂದಿನಂತೆ ಮೊದಲ ಮೂರು ತಿಂಗಳುಗಳ ಅವಧಿಗೆ ರವಾನಿಸಲಾಗುತ್ತಿದ್ದು, ಈ ಸೌಲಭ್ಯದ ಯಶಸ್ವಿ ಅನುಷ್ಠಾನದ ನಂತರ ಅವುಗಳನ್ನು ರವಾನಿಸುವುದನ್ನು ಸ್ಥಗಿತಗೊಳಿಸಲಾಗುವುದು. ಪ್ರಸ್ತುತ ಅಸ್ತಿತ್ವದಲ್ಲಿರುವ ಸಾಮಾನ್ಯ ಭವಿಷ್ಯ ನಿಧಿಯ ಅಂಶಿಕ/ ಪೂರ್ಣ ಹಿಂಪಡೆಯುವಿಕೆಯ ಅರ್ಜಿಗಳ ಸ್ವೀಕೃತಿ ಹಾಗೂ ಪ್ರಸ್ತುತ ಹಂತದ ಮಾಹಿತಿಯನ್ನು SMSನ ಮೂಲಕ ತಿಳಿಯಪಡಿಸುವ ಸೌಲಭ್ಯವು ಮುಂದುವರೆಯುವುದು ಎಂದು ಸ್ಪಷ್ಟಪಡಿಸಲಾಗಿದೆ.
ಇದರಿಂದ ಮೇಲ್ಕಂಡ ವೆಬ್ ಪೋರ್ಟಲ್‌ನಲ್ಲಿ ಪತ್ರಾಂಕಿತ ಅಧಿಕಾರಿಗಳ ವೇತನ ಹಾಗೂ ರಜೆಯ ಅಧೀಕರಣಗಳನ್ನು ಮತ್ತು ಪಿಂಚಣಿ ಅಧೀಕರಣಗಳ ಜೊತೆಗೆ ಸಾಮಾನ್ಯ ಭವಿಷ್ಯ ನಿಧಿ ಹಿಂಪಡೆಯುವಿಕೆ ಅಧೀಕರಣಗಳನ್ನು ನೋಡುವ ಹಾಗೂ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯಗಳು ಲಭ್ಯವಿರುವಂತಾಗುತ್ತದೆ.
ಈ ವೆಬ್ ಪೋರ್ಟಲ್ ಅನ್ನು ಉಪಯೋಗಿಸುವ ಕುರಿತು ಖಜಾನೆ ಅಧಿಕಾರಿಗಳಿಗೆ/ ವೇತನ ಬಟವಾಡೆ ಅಧಿಕಾರಿಗಳಿಗೆ/ ಸಾಮಾನ್ಯ ಭವಿಷ್ಯ ನಿಧಿಯನ್ನು ಮಂಜೂರು ಮಾಡುವ ಪ್ರಾಧಿಕಾರಗಳಿಗೆ ನೀಡಲಾಗಿರುವ ಸೂಚನೆಗಳ ಪ್ರತಿಯನ್ನು ಲಗತ್ತಿಸಲಾಗಿದೆ. ಸದರಿ ಸೂಚನೆಗಳಂತ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿಸಿದೆ.
ಬಡ್ಡಿದರ ಎಷ್ಟಿದೆ?; ಅಧಿಸೂಚನೆಯಲ್ಲಿ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ 01/01/2025 ರಿಂದ ದಿನಾಂಕ 31/03/2025 ರವರೆಗಿನ ಅವಧಿಗೆ ವಾರ್ಷಿಕ ಶೇ.7.1 ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.












Click it and Unblock the Notifications