Bharat Taxi: ರಾಜ್ಯದಲ್ಲಿ ವಾಹನ್-4 ಮೂಲಕ 'ಭಾರತ್ ಟ್ಯಾಕ್ಸಿ' ಜಾರಿಗೆ ಆಗ್ರಹ: ರಾಮಲಿಂಗಾ ರೆಡ್ಡಿ ಭರವಸೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆ 'ಭಾರತ್ ಟ್ಯಾಕ್ಸಿ' ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಮತ್ತು ಸದಸ್ಯರು ಸೋಮವಾರ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರನ್ನು ಭೇಟಿ ಮಾಡಿ ಮನವಿಲ್ಲಿಸಿದರು. ವಾಹನ-4 ಪೋರ್ಟಲ್ ಮೂಲಕ ರಾಜ್ಯದಲ್ಲಿ 'ಭಾರತ್ ಟ್ಯಾಕ್ಸಿ' ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರುವಂತೆ ಕೋಡಿದ್ದಾರೆ. ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಖಾಸಗಿ ಅಗ್ರಿಗೇಟರ್‌ಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಷ್ಟ ಅನುಭವಿಸುತ್ತಿರುವುದರಿಂದ ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಯೋಜನೆಯನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಈ ಯೋಜನೆಯನ್ನು ವಾಹನ್ ಪೋರ್ಟಲ್ ಮೂಲಕ ತರಬೇಕೆಂಬ ಆಗ್ರಹ ಜೋರಾಗಿದೆ. ಅಗ್ರಿಗೇಟರ್ ವ್ಯವಸ್ಥೆಯಲ್ಲಿ ಚಾಲಕರಿಂದ ಪ್ರತಿ ಪ್ರಯಾಣಕ್ಕೆ ಶೇಕಡ 20 ರಿಂದ ಶೇಕಡ 35ರಷ್ಟು ಕಮಿಶನ್ ಪಡೆಯುತ್ತಿರುವುದರಿಂದ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ವಾಹನ-4 ಪೋರ್ಟಲ್ ಯೋಜನೆಯಿಂದ ನೋಂದಣಿ, ಪರವಾನಗಿ, ವಿಮೆ ಸುಲಭವಾಗಿ ಪಾರದರ್ಶಕವಾಗಿ ದೊರೆಯುವಂತಾಗುತ್ತದೆ ಎಂದು ಒಕ್ಕೂಟವು ತಿಳಿಸಿದೆ.
ಇದರಿಂದ ಪ್ರಯಾಣಿಕರ ಸುರಕ್ಷತೆ, ಅಪಘಾತ ಅಥವಾ ಅನಾಹುತದ ಸಂದರ್ಭದಲ್ಲಿ ಪರಿಹಾರ ದೊರೆಯುವುದಾಗಿ, (ಆದರೆ ಸದರಿ ಯೋಜನೆಯಲ್ಲಿ ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಸೇರಿಸಬಾರದೆಂದು) ಸೇರಿಸಿದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಪ್ರಯಾಣಿಕರ ಜೀವ ಭದ್ರತೆಗೆ ಅಪಾಯ ಉಂಟಾಗುತ್ತಿರುವ ಬಗ್ಗೆ ಪೊಲೀಸ್ ವರದಿಗಳು ಪೂರಕವಾಗಿರುತ್ತವೆಯೆಂದು ತಮ್ಮ ಪತ್ರದಲ್ಲಿ ಒಕ್ಕೂಟದ ಸದಸ್ಯರು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಮಲಿಂಗಾ ರೆಡ್ಡಿ ಅವರು, 'ಭಾರತ್ ಟ್ಯಾಕ್ಸಿ' ಯೋಜನೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಆದ್ದರಿಂದ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಸಹಕಾರ ಸಚಿವಾಲಯಕ್ಕೆ ನಿಮ್ಮ ಮನವಿಯನ್ನು ತಲುಪಿಸುತ್ತೇನೆ. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಕೋರಿಕೆಯಂತೆ ರಾಜ್ಯದಲ್ಲಿ ಭಾರತ್ ಟ್ಯಾಕ್ಸಿ ಯೋಜನೆ ಜಾರಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಏನಿದು ಭಾರತ್ ಟ್ಯಾಕ್ಸಿ ಯೋಜನೆ?
'ಭಾರತ್ ಟ್ಯಾಕ್ಸಿ'ಯ ಉದ್ದೇಶ ದೊಡ್ಡ ಕಂಪನಿಗಳಂತೆ ಕಮಿಷನ್ ಕಡಿತಗೊಳಿಸಿ ಬಂಡವಾಳವನ್ನು ನಿರ್ಮಿಸುವುದಲ್ಲ. ವಾಹನಗಳ ಸಾರಥಿಗಳನ್ನು ಲಾಭದ ಮಾಲೀಕರಾಗಿಸಿ ಅವರ ಆದಾಯವನ್ನು ಹೆಚ್ಚಿಸುವುದು ಉದ್ದೇಶ ಹೊಂದಿದೆ. 'ಭಾರತ್ ಟ್ಯಾಕ್ಸಿ'ಯ 'ಸಾರಥಿ ದೀದಿ' ಸೌಲಭ್ಯವು ಮಹಿಳೆಯರಿಗೆ ಸುರಕ್ಷತೆ ಮತ್ತು ಸಾರಥಿ ದೀದಿಗಳಿಗೆ ಘನತೆ ಮತ್ತು ಸ್ವಾವಲಂಬನೆಯನ್ನು ಒದಗಿಸುತ್ತದೆ. ಪ್ರಯಾಣಿಕರಿಗೆ ರಿಯಾಯಿತಿ ಸಹ ಸಿಗಲಿದೆ. ಈ ಸದುದ್ದೇಶದೊಂದಿಗೆ ಜಾರಿಗೆ ತರಲಾಗಿದೆ.
ಯೋಜನೆಗೆ ಅಮಿತ್ ಶಾ ಚಾಲನೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಫೆ.5ರಂದು ದೆಹಲಿಯಲ್ಲಿ ಭಾರತದ ಮೊದಲ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆ 'ಭಾರತ್ ಟ್ಯಾಕ್ಸಿ'ಗೆ ಔಪಚಾರಿಕವಾಗಿ ಚಾಲನೆ ನೀಡಿದರು. ಭಾರತ್ ಟ್ಯಾಕ್ಸಿಯ ಚಾಲಕ-ಸಬಲೀಕರಣ ಮತ್ತು ಸಹಕಾರಿ-ಮಾಲೀಕತ್ವ-ಆಧಾರಿತ ಮಾದರಿಗೆ ವ್ಯಾಪಕ ಬೆಂಬಲ ನೀಡುವ ಯೋಜನೆ ಇದಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ 1,200 ಕ್ಕೂ ಹೆಚ್ಚು "ಸಾರಥಿಗಳು" (ಚಾಲಕ ಪಾಲುದಾರರು) ಭಾಗವಹಿಸಿದ್ದರು. ಮುಂದಿನ 03 ವರ್ಷಗಳಲ್ಲಿ, 'ಭಾರತ್ ಟ್ಯಾಕ್ಸಿ' ದೇಶಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications