Karnataka Rail: ಬೆಂಗಳೂರು-ಧಾರವಾಡ-ಚಿಕ್ಕಮಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಬೆಂಗಳೂರು, ಏಪ್ರಿಲ್ 27: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿ, ವಿದ್ಯುದೀಕರಣ, ದ್ವಿಪಥ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ರೈಲ್ವೆ ಸಾರಿಗೆಗೆ ಹೆಚ್ಚಿನ ಅನುಕುಲವಾಗಲಿದೆ. ಇದೀಗ ಕೆಲವು ರೈಲುಗಳ ಸಂಚಾರ ವೇಗ ಹೆಚ್ಚಿಸಲು ಹಾಗೂ ಸಮಯ ಪರಿಷ್ಕರಣೆಗೆ ನೈಋತ್ಯ ರೈಲ್ವೆ ಮುಂದಾಗಿದೆ. ಕಾನ್ಪುರ ಸೆಂಟ್ರಲ್ ಮತ್ತು ಬೆಂಗಳೂರು ನಡುವೆ ವಿಶೇಷ ರೈಲುಗಳು ಓಡಲಿವೆ. ಇದರೊಂದಿಗೆ ಬೆಂಗಳೂರು-ಧಾರವಾಡ-ಚಿಕ್ಕಮಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದೆ.
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡುವ ಬೆಂಗಳೂರು-ಧಾರವಾಡ ದೈನಂದಿನ ಸಿದ್ಧಗಂಗಾ ಎಕ್ಸ್‌ಪ್ರೆಸ್(12725) ರೈಲು, ಧಾರವಾಡ-ಕೆಎಸ್‌ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಎಕ್ಸ್‌ಪ್ರೆಸ್ (12726) ಮತ್ತು ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ (16239) ರೈಲುಗಳ ವೇಗವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆಯ ಸಮಯವನ್ನು ಪರಿಷ್ಕರಣ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೇಲಿನ ರೈಲುಗಳ ಪರಿಷ್ಕೃತ ಸಮಯ ವೇಳಾಪಟ್ಟಿಯಂತೆ ಮೇ 1ರಿಂದ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಇದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪು ಸಮಯ ತಗ್ಗಲಿದೆ. ಪ್ರಯಾಣಿಕರಿಗೆ ವೇಗದ ಹಾಗೂ ಸುರಕ್ಷಿತ ಸೇವೆ ಸಿಕ್ಕಂತಾಗಲಿದೆ. ಹೆಚ್ಚಿನ ಮಾಹಿತಿಗೆ https://swr.indianrailways.gov.in/ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಅಧಿಕಾರಿಗಳು ಕೋರಿದ್ದಾರೆ.
ಬೆಂಗಳೂರಿನಿಂದ ಇಲ್ಲಿಗೆ ಬೇಸಿಗೆ ವಿಶೇಷ ರೈಲುಗಳು
ಬೇಸಿಗೆ ರಜಾದಿನಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಉತ್ತರ ಮಧ್ಯ ರೈಲ್ವೆ ಕಾನ್ಪುರ ಸೆಂಟ್ರಲ್ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಡುವೆ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ಮಾಡಲಿದೆ. ಈ ರೈಲುಗಳು ಒಂದು ಕಡೆಗೆ ಆರು ಟ್ರಿಪ್‌ಗಳ ಸೇವೆ ನೀಡಲಿವೆ.
ಕಾನ್ಪುರ ಸೆಂಟ್ರಲ್ SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (04131) ಇದೇ ಏಪ್ರಿಲ್ 27 ರಿಂದ ಜೂನ್ 1ರವರೆಗೆ ಪ್ರತಿ ಭಾನುವಾರ ಸಂಜೆ 7:50ಗಂಟೆಗೆ ಕಾನ್ಪುರ ಸೆಂಟ್ರಲ್‌ನಿಂದ ಸಂಚಾರ ಆರಂಭಿಸುತ್ತದೆ. ಮಂಗಳವಾರ ಸಂಜೆ 6:30 ಕ್ಕೆ SMVT ಬೆಂಗಳೂರಿಗೆ ಆಗಮಿಸಲಿದೆ.
ಮರಳೆ ಬೆಂಗಳೂರಿನಿಂದ SMVT ಬೆಂಗಳೂರು-ಕಾನ್ಪುರ ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು (04132) ಏಪ್ರಿಲ್ 30 ರಿಂದ ಜೂನ್ 4 ರವರೆಗೆ ಪ್ರತಿ ಬುಧವಾರ ಬೆಳಗ್ಗೆ 7:10ಗಂಟೆಗೆ ರಾಜಧಾನಿಯಿಂದ ಸಂಚಾರ ಆರಂಭಿಸಿ ಶುಕ್ರವಾರ ಬೆಳಗ್ಗೆ 02 ಗಂಟೆಗೆ ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣ ತಲುಪುತ್ತದೆ.
ಈ ರೈಲುಗಳ ನಿಲುಗಡೆ ವಿವರ
ಈ ವಿಶೇಷ ರೈಲು ಎರಡು ಬದಿ ಮಾರ್ಗದಲ್ಲೂ ಈ ರೈಲು ಫತೇಪುರ್, ಪ್ರಯಾಗ್‌ರಾಜ್, ಶಂಕರಗಢ, ಮಾಣಿಕ್‌ಪುರ್, ಸತ್ನಾ, ಕಟ್ನಿ, ಜಬಲ್‌ಪುರ್, ಇಟಾರ್ಸಿ, ನಾಗ್ಪುರ್, ಬಲ್ಲಾಶಾರ್, ಬೆಲ್ಲಂಪಲ್ಲಿ, ಮಂಚಿರಿಯಾಲ್, ವಾರಂಗಲ್, ಖಮ್ಮಮ್, ವಿಜಯವಾಡ, ಚಿರಾಲ, ಓಂಗೋಲ್, ನೆಲ್ಲೂರು, ಗುಡೂರ್, ಪೆರಂಬೂರ್, ಅರಕ್ಕೋಣಂ, ಕಟ್ಪಾಡಿ, ಜೋಲಾರ್ಪೆಟ್ಟೈ, ಬಂಗಾರಪೇಟೆ, ಕೃಷ್ಣರಾಜಪುರಂಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳನ್ನು ಹೊಂದಿದೆ.
ಈ ವಿಶೇಷ ರೈಲುಗಳು ಒಟ್ಟು 19 ಐಸಿಎಫ್ ಬೋಗಿಗಳನ್ನು ಒಳಗೊಂಡಿದೆ. ಅದರಲ್ಲಿ 01 ಎಸಿ 2-ಟೈರ್, 02 ಎಸಿ 3-ಟೈರ್, 08 ಸ್ಲೀಪರ್ ಕ್ಲಾಸ್, 06 ಜನರಲ್ ಸೆಕೆಂಡ್ ಕ್ಲಾಸ್, ಮತ್ತು 02 ಎಸ್‌ಎಲ್‌ಆರ್/ಡಿ ಬೋಗಿಗಳು ಇವೆ. ಎಂದಿನಂತೆ ನೀವು ಆನ್‌ಲೈನ್, ಐಆರ್‌ಸಿಟಿಸಿ ಮೊಬೈಲ್ ಆಪ್ ಸೇರಿದಂತೆ ಇತರ ವಿಧಾನಗಳ ಮೂಲಕ ಮುಂಗಡ ಬುಕ್ಕಿಂಗ್ ಅವಕಾಶ ಇದೆ..












Click it and Unblock the Notifications