ಬೆಂಗಳೂರು ಬಂದ್: ಪ್ರತಿಭಟನಾಕಾರರಿಂದ Rapido ಚಾಲಕನ ಮೇಲೆ ಹಲ್ಲೆ: ಬೈಕ್ ಸಂಪೂರ್ಣ ಜಖಂ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆಕೊಟ್ಟಿದ್ದು, ನಗರದಾದ್ಯಂತ ಪ್ರತಿಭಟನೆ ಬಿಸಿ ತಟ್ಟಿದೆ. ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ಬಂದ್‌ಗೆ ಸರ್ಕಾರ ಸ್ಪಂದಿಸದೇ ಇರುವುದಕ್ಕೆ ಬೆಂಗಳೂರಿನ ಆಟೋ ಚಾಲಕರು ಆಕ್ರೋಶಗೊಂಡಿದ್ದು, ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಬಂದ್‌ಗೆ ಬೆಂಬಲ ನೀಡದ ಖಾಸಗಿ ವಾಹನ ಚಾಲಕರ ಮೇಲೆ ಆಕ್ರೋಶಗೊಂಡಿದ್ದಾರೆ.

ಬಾಡಿಗೆ ಹೋಗುತ್ತಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಗಾಂಧಿನಗರದ ಮೌರ್ಯ ಸರ್ಕಲ್ ಬಳಿ ನಡೆದಿದೆ. ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ರ‍್ಯಾಪಿಡೋ ಬೈಕ್ ಸವಾರನನ್ನೂ ಬಿಡದೆ ಗಲಾಟೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕರನ್ನು ರಕ್ಷಣೆ ಮಾಡಿದ್ದಾರೆ.
ರ‍್ಯಾಪಿಡೋ ಬೈಕ್ ಜಖಂಗೊಳಿಸಿದ ಪ್ರತಿಭಟನಾಕಾರರು
ಮಡಿವಾಳ ಫ್ಲೈ ಓವರ್ ಬಳಿ ಆಕ್ರೋಶ ಹೊರ ಹಾಕುತ್ತಿರುವ ಆಟೋ ಚಾಲಕರು, ಅನಧಿಕೃತ ಆ್ಯಪ್ ವಿರುದ್ಧ ಕಿಡಿಕಾರಿದ್ದಾರೆ. ರಸ್ತೆ ಮಧ್ಯೆಯೇ ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಇನ್ನು ಮಡಿವಾಳ ಅಂಡರ್ ಪಾಸ್‌ನಲ್ಲಿ ಆಟೋ ಚಾಲಕರು ಕರ್ತವ್ಯ ನಿರತ ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬೈಕ್‌ನ ಗ್ಲಾಸ್ ಸೇರಿದಂತೆ ಗಾಡಿಯನ್ನು ಸಂಪೂರ್ಣ ಜಖಂಗೊಳಿಸಿರುವ ಮುಷ್ಕರ ನಿರತ ಆಟೋ ಚಾಲಕರು ಕ್ಷಣಮಾತ್ರದಲ್ಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ರ‍್ಯಾಪಿಡೋ ಸವಾರರಿಗೆ ಪ್ರತಿಭಟನಾಕಾರರಿಂದ ವಾರ್ನಿಂಗ್
ಇನ್ನು ನಗರದ ಮೌರ್ಯ ಸರ್ಕಲ್ ಬಳಿ ನಿಂತಿರುವ ಪ್ರತಿಭಟನಾಕಾರರು ರ‍್ಯಾಪಿಡೋ ಗಾಡಿ ಓಡಿಸದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನುಮುಂದೆ ರ‍್ಯಾಪಿಡೋ ಗಾಡಿ ಓಡಿಸಬಾರದು. ಇದರಿಂದ ಕ್ಯಾಬ್ ಆಟೋಗೆ ನಷ್ಟವಾಗುತ್ತಿದೆ. ನಾವು ರೋಡ್ ಟ್ಯಾಕ್ಸಿ ಕಟ್ಟುತ್ತಿದ್ದೇವೆ. ಬೈಕ್ ಟ್ಯಾಕ್ಸಿಗೆ ಓಡಿಸಲು ಅನುಮತಿ ಇಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications