Suspects Terrorist Arrest: ಪೊಲೀಸ್ ಠಾಣೆಗಳಲ್ಲಿ 'ಕುರಾನ್' ಹಂಚಿಕೆ?, ಉಗ್ರರ ಆಳ ದೊಡ್ಡದಿದೆ

ಬೆಂಗಳೂರು, ಜುಲೈ 19: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಕುರಾನ್ ಹಂಚಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಡೆ ಉಗ್ರವಾದ ಕಂಡು ಬರುತ್ತಿದೆ. ಹಳೆ ಕೇಸಿನಲ್ಲಿದ್ದವರೆಲ್ಲ ಇಂದು ಮತ್ತೆ ಉಗ್ರ ಚಟುವಟಿಕೆಗಳಿಗೆ ಇಳಿದಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ.

ಶಂಕಿತ ಉಗ್ರರ ಬಂಧನ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮಾಜಿ ಕಂದಾಯ ಸಚಿವ ಆರ್. ಅಶೋಕ್ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಡೆಗಳಲ್ಲಿ ನೈಸರ್ಗಿಕವಾಗಿಯೇ ಉಗ್ರವಾದ ಬಲಗೊಳ್ಳುತ್ತದೆ. ಉಗ್ರರಿಗೆ ನೈಸರ್ಗಿಕವಾಗಿಯೇ ಹುಲ್ಲುಗಾವಲು ಮೇಯಲು ಸಿಕ್ಕಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

Bengaluru 5 Terror Arrest: BJP R Ashoke, Basavaraj Bommai Reacts Slams on Congress Govt

ಬೆಂಗಳೂರಿನ ಕೆಲವು ಠಾಣೆಗಳಲ್ಲಿ ಯಾರೋ ಬಂದು 'ಕುರಾನ್' ಹಂಚಿದ್ದಾರೆ. ಹಂಚಿದ್ದಕ್ಕೆ ಪೊಲೀಸರಿಂದ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದಾಖಲೆ ಇಟ್ಟುಕೊಂಡೆ ಮಾತಾಡುತ್ತದ್ದೇನೆ ಎಂದು ಹೇಳಿದರು.

ಬೆಂಗಳೂರನ್ನೇ ಉಡಾಯಿಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದರೆ ಕರ್ನಾಟಕದ ಸದ್ಯದ ಸ್ಥಿತಿ ಹೇಗಿದೆ? ಎಂಬುದು ಅರ್ಥವಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೆಳೆದಿದೆ. ವಿದೇಶಿ ಬಂಡವಾಳ ಹೂಡಿಕೆ ಇಲ್ಲಿಗೆ ಹರಿದು ಬರಬಾರದು, ನಗರದಲ್ಲಿ ಭಯದ ವಾತಾವರಣ ನಿರ್ಮಿಸಬೇಕು ಎಂದು ಉದ್ದೇಶದಿಂದ ಹೀಗೆಲ್ಲ ಸಂಚು ರೂಪಿಸಲಾಗಿದೆ.

Bengaluru 5 Terror Arrest: BJP R Ashoke, Basavaraj Bommai Reacts Slams on Congress Govt

ಬೆಂಗಳೂರು ಉಗ್ರರ ಅಡ್ಡವಾಗಿ ಬದಲಾಗುತ್ತಿದೆ ಎಂದನೆನಿಸುತ್ತದೆ. ರಾಜ್ಯ ಸರ್ಕಾರ ಕೈಕಟ್ಟಿ ಕೂತಿದ್ದು, ಇದೆಲ್ಲ ಅಪರಾಧ ಚಟುವಟಿಕೆ ತಡೆಯಲು ಕೇಂದ್ರವೇ ಸೂಕ್ತ ನಿರ್ಧಾರ ಕೈಗೊಂಡು ಬೆಂಗಳೂರನ್ನು ರಕ್ಷಿಸಬೇಕು. ಎನ್‌ಐಎ ತಂಡ ಬೆಂಗಳೂರಿಗೆ ಬರಬೇಕು ಎಂದು ಅವರು ಮನವಿ ಮಾಡಿದರು.

ಉಗ್ರರ ಜಾಲ, ಆಳ, ಅಗಲ ದೊಡ್ಡದಿದೆ: ಬೊಮ್ಮಾಯಿ

ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಉಗ್ರರಿಗೆ ಬೆಂಗಳೂರಿಗೆ ಸುರಕ್ಷಿತ ತಾಣವಾದಂತಾಗಿದೆ ಎಂದು ಅಭಿಪ್ರಾಯಪಟ್ಟರು. ಉಗ್ರರ ಜಾಲ ಆಳ ಮತ್ತು ಅಗಲ ದೊಡ್ಡದಿದೆ. ಹಳೇ ಪ್ರಕರಣದಲ್ಲಿ ಇದ್ದವರೆಲ್ಲ ಮತ್ತೆ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಐವರು ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ. ಆದರೆ ಇಲ್ಲಿನ ಉಗ್ರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಇದೆ ಎಂದ ಅವರು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‌ಐಎ) ಕೊಡಬೇಕು. ಬೆಂಗಳೂರು ಸುರಕ್ಷಿತತೆ ಆದ್ಯತೆ ನೀಡಲು ಅಪರಾಧ ಚಟುವಟಿಕೆಗಳಿಗೆ, ಉಗ್ರರಿಗೆ ಕಡಿವಾಣ ಹಾಕಲು ಹಿರಿಯ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ಸೇರಿ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರು ಉಗ್ರರನ್ನು ಬುಧವಾರ ಬೆಳಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್, ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಇವರು ಬಂಧಿತ ಭಯೋತ್ಪಾಕರು. ಇವರನ್ನು ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ಬಂಧಿಸಲಾಗಿದ್ದು, ಏಳು ಪಿಸ್ತೂಲ್, ಮದ್ದುಗುಂಡು, ಡ್ರ್ಯಾಗರ್ ಹಾಗೂ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+