ಕೋರೆ ಕುಟುಂಬದಲ್ಲಿಯೂ ರಾಜಕೀಯ ಓರೆಕೋರೆಗಳು!

Belgaum BJP MP Prabhakar Kore son Amit Kore to join Congress Oct 17
ಬೆಳಗಾವಿ, ಅ. 17: 'ರಾಜಕೀಯದಲ್ಲಿ ನನ್ನ ತಂದೆಯ ತತ್ತ್ವ ಸಿದ್ಧಾಂತಗಳೇ ಬೇರೆ. ನನ್ನ ಸಿದ್ಧಾಂತಗಳೇ ಬೇರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಇಪ್ಪಿ, ಆ ಪಕ್ಷವನ್ನು ಅಪ್ಪಿಕೊಳ್ಳುತ್ತಿರುವೆ' ಎಂದು ಅಮಿತ್ ಕೋರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಇಂದು ಸೇರ್ಪಡೆಯಾದರು.

ಬೆಳಗಿನ ಸುದ್ದಿ: ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡ, ಬಿಜೆಪಿ ರಾಜ್ಯಸಭಾ ಸದಸ್ಯ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಬಿ. ಕೋರೆ ಅವರ ಕುಟುಂಬದಲ್ಲಿ ರಾಜಕೀಯ ಧ್ರುವೀಕರಣ ನಡೆದಿದೆ. ಅಪ್ಪ ಪ್ರಭಾಕರ ಕೋರೆ ಅವರು ಬಿಜೆಪಿ ಕಟ್ಟುವಲ್ಲಿ ಶ್ರಮಿಸುತ್ತಿದ್ದರೆ ಅವರ ಪುತ್ರ ಅಮಿತ್ ಕೋರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಅಂಕಿತರಾಗಿದ್ದಾರೆ.

ಕುತೂಹಲಕಾರಿಯೆಂದರೆ ಈ ಬೆಳವಣಿಗೆ ಕೋರೆ ಕುಟಂಬದಲ್ಲಷ್ಟೇ ಅಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿಯೂ ತಲ್ಲಣ ಸೃಷ್ಟಿಸಿದೆ. ಆದರೆ ಈ ಬೆಳವಣಿಗೆಗಳನ್ನು ನೋಡಿದರೆ ಬೆಳಗಾವಿಯ ಮಣ್ಣಿನ ಗುಣವೇ ಹಾಗೇನೋ... ಜಿಲ್ಲೆಯಲ್ಲಿ ಒಂದೇ ಕುಟುಂಬದವರು ವಿಭಿನ್ನ ರಾಜಕೀಯ ಪಕ್ಷಗಳಿಗೆ ಅಂಕಿತವಾಗಿರುವುದು ಸೋಜಿಗವೇ ಸರಿ!.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದೇನೆ. ಆದರೆ ಕಾಂಗ್ರೆಸ್ ಸೇರುವ ಕುರಿತು ಇನ್ನೂ ತಮ್ಮ ತಂದೆ ಪ್ರಭಾಕರ ಕೋರೆ ಜತೆ ಚರ್ಚಿಸಿಲ್ಲ. ಬಹುಶಃ ಈ ವೇಳೆಗೆ ಅವರಿಗೂ ವಿಷಯ ಗೊತ್ತಾಗಿರುತ್ತದೆ. ಆದರೆ ಆ ಬಗ್ಗೆ ಅವರೂ ನನ್ನನ್ನೇನು ಪ್ರಶ್ನಿಸಿಲ್ಲ. ಇದು ನನ್ನ ಸ್ವಂತ ನಿರ್ಧಾರ ಎಂದು BE ಮತ್ತು MBA ಶಿಕ್ಷಣ ಪಡೆದಿರುವ ಅಮಿತ್ ಹೇಳಿದ್ದಾರೆ.

'ಆದರೆ ಸದ್ಯಕ್ಕೆ ರಾಜಕೀಯ ಬೇಡವೆಂದು ತಮ್ಮ ಮಗನಿಗೆ ಈ ಹಿಂದೆಯೇ ತಿಳಿಯಹೇಳಿದ್ದೆ. ಅಮಿತ್ ರಾಜಕೀಯ ಪ್ರವೇಶಕ್ಕೆ ಇನ್ನೂ ಕಾಲಾವಕಾಶ ಇದೆ. ತಂದೆಯೊಂದು ಕಡೆ, ಮಗ ಒಂದು ಕಡೆ ಇರುವುದು ನಮ್ಮ ಸಂಸ್ಕಾರವಲ್ಲ. ಆತನ ನಿರ್ಧಾರ ದುಡುಕಿನದ್ದು' ಎಂದು ಪ್ರಭಾಕರ್ ಕೋರೆ ಪ್ರತಿಕ್ರಿಯಿಸಿದ್ದಾರೆ.

ಅಮಿತ್ ಕೋರೆ ಅವರು ಇಂದು ಗುರುವಾರ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ 5 ಶುಲ್ಕ ಪಾವತಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ. ಮುಂಬರುವ ದಿನಗಳಲ್ಲಿ ತಮ್ಮ ಬೆಂಬಲಿಗರೂ ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದಿರುವ ಅಮಿತ್ ಕೋರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಬಯಸಿದ್ದಾರೆ.

ರಾಜಕೀಯ ಹಿನ್ನೆಲೆಯಿಂದ ಬಂದಿದ್ದರೂ ರಾಜಕೀಯ ಪಕ್ಷಗಳಿಂದ ದೂರ ಉಳಿದಿದ್ದ ಅಮಿತ್, ಸಹಕಾರಿ ಕ್ಷೇತ್ರದಲ್ಲಿ ಮಾತ್ರ ತೊಡಗಿಸಿಕೊಂಡಿದ್ದರು. ಇದೀಗ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಚಿಕ್ಕೋಡಿಯ ದೂಧಗಂಗಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ಅಮಿತ್ ಕೆಎಲ್‌ ಇ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+