PSI Scam: ಪಿಎಸ್ ಐ ಹಗರಣ ನ್ಯಾಯಾಂಗ ತನಿಖೆಗೆ ವಹಿಸಿದ್ದು,ದ್ಷೇಷದ ರಾಜಕಾರಣ : ಬಸವರಾಜ ಬೊಮ್ಮಾಯಿ

ಬೆಂಗಳೂರು, ಜುಲೈ 22: ಪಿಎಸ್ ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದು,ದ್ವೇಷದ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಅನ್ನುವುದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಹಗರಣ ನಾವೇ ಹೊರಗೆ ತಂದು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ.‌ಈ ಹಗರಣದಲ್ಲಿ ಕಾಂಗ್ರೆಸ್ ನವರು ಇದ್ದಾರೆ. ಪ್ರಕರಣದ ತನಿಖೆ ನಡೆದು ಕೊರ್ಟ್‌ನಲ್ಲಿದೆ‌.‌ ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

Basavaraj Bommai lashed out at PSI Illegal Recruitment Scam Judicial Inquiry

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಿ ಅಂತ ಹೇಳಿದ್ದಾರೆ‌‌. ನಕಲಿ ಗಾಂಧಿಗಳ ಜಪ ಮಾಡುತ್ತಿರುವವರು ಕಾಂಗ್ರೆಸ್ ನವರು. ಗಾಂದೀಜಿಯನ್ನು ಹೆಚ್ಚು ದುರುಪಯೋಗ ಮಾಡಿ ಕೊಂಡವರು ಕಾಂಗ್ರೆಸ್ ನವರು. ಗಾಂಧಿಜಿ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಿ ಅಂತ ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್ ನವರಿಗೆ ದೇಶ ಆಳಲು ಬರುವುದಿಲ್ಲ ಅಂತ. ಆದರೆ, ಇವರು ಗಾಂಧೀಜಿ‌ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Basavaraj Bommai lashed out at PSI Illegal Recruitment Scam Judicial Inquiry

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜಿವನ ದುಸ್ತರ ಆಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲ ಕಾಯಿಪಲ್ಯೆ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳ‌ವಾಗಲಿದೆ ಎಂದು ಹೇಳಿದರು.

ಪುಸ್ತಕಗಳಿಗೆ ಸರ್ಕಾರದ ಪ್ರೋತ್ಸಾಹ ಹೆಚ್ಚಾದರೆ ಸಾಹಿತ್ಯದ ಮೌಲ್ಯ ಕಡಿಮೆಯಾಗುತ್ತದೆ. ಕಳಪೆ ಸಾಹಿತ್ಯ ಹೆಚ್ಚಾಗುತ್ತದೆ. ವಿಶ್ವೇಶ್ವರ ಭಟ್ಟರು ಪ್ರತಿದಿನ ಹೊಸದನ್ನು ಹುಡುಕಿ ಜನರಿಗೆ ತಿಳಿಸುತ್ತಾರೆ. ಜನರಿಗೆ ಏನಾದರೂ ಹೇಳುವುದು ಬಹಳ ಕಷ್ಟ. ಅವರಲ್ಲಿ ಇರುವ ಚಿಂತನಾ ಶಕ್ತಿ ಸದಾ ಜೀವಂತ ಇರುವುದನ್ನು ನಾನು ಕಂಡಿದ್ದೇನೆ. ಅವರು ಒಬ್ಬ ಕೇವಲ ಪತ್ರಕರ್ತನಾಗಿ ಬೆಳೆದಿಲ್ಲ. ಒಬ್ಬ ಪತ್ರಕರ್ತ ಎಲ್ಲ ರಂಗದವರೊಂದಿಗೆ ಸಂಪರ್ಕ ಹೊಂದಿರದಿದ್ದರೆ, ಅವರು ಜನರ ಮನಸಿನಿಂದ ದೂರವಾಗುತ್ತಾನೆ ಎಂದರು.

ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ ಇದೆ. ಪತ್ರಕರ್ತರಿಲ್ಲದೆ ರಾಜಕಾರಣ ಇಲ್ಲ. ರಾಜಕಾರಣಿಗಳಿಲ್ಲದೆ ಪತ್ರಿಕೋದ್ಯಮ‌ ಇಲ್ಲ. ಟೀಕೆ ಮಾಡಲಿಕ್ಕೆ ಆದರೂ ಪತ್ರಿಕೆಗಳಿಗೆ ರಾಜಕಾರಣಿಗಳು ಬೇಕು. ರಾಜಕಾರಣಿಗಳು ಭ್ರಮೆಯಲ್ಲಿರುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ‌ ಎಂದರು.

ಮಾತನಾಡುವವರಿಗಿಂತ ಕೇಳುವವರು ಬುದ್ದಿವಂತರು, ಬರೆಯುವವರಿಗಿಂತ ಓದುವವರು ಬುದ್ದಿವಂತರು ಅಂತ ಅರ್ಥ ಮಾಡಿಕೊಳ್ಳಬೇಕು. ಪುಸ್ತಕ ಉದ್ಯಮ ಯಾವಾಗಲೂ ಸಂಕಷ್ಟದಲ್ಲಿ ಇರುತ್ತದೆ. ಓದುಗರು ಸಾಹಿತ್ಯವನ್ನು ಖರೀದಿ ಮಾಡಿ ಅದರ ಆದಾಯ ಲೇಖಕನಿಗೆ ಸಿಗುವವರೆಗೂ ಪುಸ್ತಕೋದ್ಯಮ ಸಂಕಷ್ಟದಲ್ಲಿಯೇ ಇರುತ್ತದೆ. ಆದರೆ, ಸರ್ಕಾರದಿಂದ ಸೂಕ್ತ ಪ್ರೋತ್ಸಾಹವೂ ಸಿಗಬೇಕು ಎಂದರು.

ನಮ್ಮ ಭವಿಷ್ಯ ಹೇಗಾದರೂ ರೂಪಿಸಬಹುದು, ಡಾಕ್ಟರ್, ಎಂಜನೀಯರ್, ಲಾಯರ್ ಆದರೂ ಮಾನವೀಯ ಗುಣಗಳು ಕಡೆಯಾಗುತ್ತಿವೆ. ಹೆಣ್ಣು ಮಕ್ಕಳ ಮೇಲೆ ಗೌರವ ಇಲ್ಲ‌. ಮಕ್ಕಳ‌ ಮೇಲೆ‌ ಕರುಣೆ ಇಲ್ಲ. ಎಲ್ಲೆಡೆ ದೌರ್ಜನ್ಯ ಅನ್ಯಾಯ ಹೆಚ್ಚಾಗುತ್ತಿದೆ. ನಾನು ಯಾವಾಗ ವಿಚಲಿತನಾಗುತ್ತೇನೊ ಆಗ ಭಗವದ್ವೀತೆ ಓದುತ್ತೇನೆ.‌ ಅದರಿಂದ ನನ್ನ ಮನಸಿಗೆ ಶಾಂತಿ ದೊರೆಯುತ್ತದೆ.

ಭಗವದ್ವೀತೆ ಎಲ್ಲ ಕಾಲಕ್ಕೂ ಪರಿಹಾರ ಒದಗಿಸುವ ಕೃತಿಯಾಗಿದೆ. ಮನುಷ್ಯ ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಟ ಅಂತ ಹೇಳುತ್ತೇವೆ. ಅದಕ್ಕೆ ಕಾರಣ ಎಲ್ಲ ಪರಿಸ್ಥಿತಿಗೂ ಹೊಂದಿಕೊಳ್ಳುವ ಮನಸ್ಥಿತಿ ಮನುಷ್ಯನಿಗೆ ಇದೆ. ನಮ್ಮ ಪರಿಸರ ನಿರಂತರ ಹಾಳಾಗುತ್ತಿದೆ. ಈ ಬಗ್ಗೆಯೂ ಸಾಕಷ್ಟು ಪುಸ್ತಕಗಳು ಬಂದಿವೆ. ಆದರೆ, ಪರಿಸರದ ನಾಶ ನಿಂತಿಲ್ಲ. ಅದಕ್ಕಾಗಿ ನಾನು ಇಕೊ ಬಜೆಟ್ ಮಾಡಿದ್ದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+