ಸಿದ್ದರಾಮಯ್ಯ ಜಾಣ ಮುಖ್ಯಮಂತ್ರಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ
ಬೆಳಗಾವಿ, ಡಿಸೆಂಬರ್ 11: ಸಿದ್ದರಾಮಯ್ಯ ಅವರು ಜಾಣ ಮುಖ್ಯಮಂತ್ರಿ ಇದ್ದಾರೆ. ಲಿಂಗಾಯತ ಪಂಚಮಸಾಲಿ ಮೀಸಲಾತಿ ಕೊಡಬೇಡಿ ಎಂದು ಮನವಿ ಮಾಡಿದ್ದೇವೆ ಎಂದು ಬೆಳಗಾವಿಯಲ್ಲಿ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಾತನಾಡಿ, 2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಶಾಂತ ರೀತಿಯ ಹೋರಾಟ ಮಾಡಿದ್ದೇವೆ, ನ್ಯಾಯಯುತ ಹೋರಾಟಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ. ಎಂದಿಗೂ ನಮ್ಮ ಜನ ಅಶಾಂತಿಗೆ ಅವಕಾಶ ಕೊಟ್ಟಿಲ್ಲ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು.

12 ಜಿಲ್ಲೆಯಲ್ಲಿ ಹೋರಾಟ ಮಾಡಿದಾಗ ಯಾವುದೇ ದೌರ್ಬಲ್ಯ ಆಗಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದನೆ ಮಾಡಿಲ್ಲ, ಸುವರ್ಣ ಸೌಧ ಬಳಿ ನ್ಯಾಯ ಕೇಳಬೇಕು ಎಂದು ಉಗ್ರ ಹೋರಾಟ ಮಾಡಿದ್ವಿ.
ನಮ್ಮ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ನಿರಂತರ ಬೆದರಿಕೆ ಬಂದಿದೆ. ರ್ಯಾಲಿಗೆ ಬರುವ ಟ್ರ್ಯಾಕ್ಟರ್ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊಡಸಿದ್ರು. ಕೊಂಡಸಕೊಪ್ಪ ಬಳಿ ರ್ಯಾಲಿ ಮಾಡಿ ಸಿಎಂ ಸಿದ್ದರಾಮಯ್ಯ ಒತ್ತಡ ತರಲು ಪ್ರಯತ್ನ ಮಾಡಿದ್ದವು.
ಮೂರು ಜನ ಸಚಿವರು ಒಳ್ಳೆಯ ಮಾತು ಹೇಳಿದ್ರೆ ಮುಗಿತ್ತಿತ್ತು. ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇವೆ ಎಂದ್ರು, ಮಹಾದೇವಪ್ಪನವರು 10 ಜನ ಬನ್ನಿ ಎಂದು ಹೇಳಿದ್ರು ಹೋಗತ್ತಾ ಇದ್ವಿ. ಜನರು ಸಿಎಂ ಸಿದ್ದರಾಮಯ್ಯ ಅವರೇ ಬರಬೇಕು ಅಂದ್ರು.ಸಿಎಂ ಸಿದ್ದರಾಮಯ್ಯ ಅವರು ಬರಲ್ಲ ಎಂದು ಎಡಿಜಿಪಿ ಹೇಳಿದ್ರು. ಸಿಎಂ ಇದ್ದ ಜಾಗಕ್ಕೆ ಹೋಗೊಣ ಎಂದು ನಾವು ತೀರ್ಮಾನ ಮಾಡಿದ್ದೇವು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ತಿಳಿಸಿದರು.
ಸಿವಿಲ್ ಬಟ್ಟೆಯಲ್ಲಿ ಇದ್ದ ಕೆಲವರು ಕಲ್ಲು ತೂರಾಟ ಮಾಡಿದ್ರು. ಪೊಲೀಸರು ದ್ವೇಷದಿಂದ ಮಾರಣಾಂತಿಕ ಹಲ್ಲೆ ಮಾಡಿದ್ರು, ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ಹೃದಯಕ್ಕೆ ಚುಚ್ಚು ರೀತಿಯಲ್ಲಿ ಹೊಡೆದಿದ್ದಾರೆ. ಯಾವ ಸಿಎಂ ಸಹ ಮಾರಣಾಂತಿಕ ಹಲ್ಲೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂತಹ ಲಿಂಗಾಯತ ಟಾರ್ಗೆಟ್ ಮಾಡುವ ಅವಶ್ಯಕತೆ ಇರಲಿಲ್ಲ.
ನಮ್ಮ ಸಮಾಜದ ಶಾಸಕರನ್ನು ಟಾರ್ಗೆಟ್ ಮಾಡುವುದು. ಮೀಸಲಾತಿ ಕೊಡಲು ಆಗಲ್ಲ ಎಂದು ಹೇಳಿದ್ರೆ, ನಾವು ಬೇರೆ ಮಾರ್ಗ ಹಿಡಿಯುತ್ತೇವೆ. ಬಸವಣ್ಣ ಕಾಲದಲ್ಲಿ ಕೊಂಡಿ ಮಂಚಣ್ಣ ಲಿಂಗಾಯತ ಮೇಲೆ ಹಲ್ಲೆ ಮಾಡಿದ್ರು.
ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಅಪಖ್ಯಾತಿಗೆ ಈ ಸರ್ಕಾರ ಗುರಿಯಾಗಿದೆ ಕೂಡಲೇ ಸರ್ಕಾರ ಕ್ಷಮಾಪಣೆ ಕೇಳಬೇಕು. ಪ್ಲ್ಯಾನ್ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದ್ರು. ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನಮ್ಮ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಎಡಿಜಿಪಿ ಸ್ವತಃ ಕೈಯಲ್ಲಿ ಲಾಠಿ ಹಿಡಿದು ಲಾಠಿಚಾರ್ಚ್ ಮಾಡಿದ್ರು. ಜನರನ್ನು ಶಾಂತಿಗೊಳಿಸುವ ಕೆಲಸ ಎಡಿಜಿಪಿ ಮಾಡಬೇಕಿತ್ತು, ಲಿಂಗಾಯತ ಮೇಲಿನ ದುಷ್ಕೃತ್ಯಕ್ಕೆ ಕ್ಷಮೆ ಕೇಳಬೇಕು. ಡಿಸೆಂಬರ್ 12ರಂದು ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಪ್ರತಿಭಟನೆ ಮಾಡಬೇಕು.ನಾನು ಹಿರೇಬಾಗೇವಾಡಿ, ಹತ್ತರಗಿ ಟೋಲ್ ಬಳಿ ಧರಣಿ ಮಾಡ್ತಿವಿ. ಯಾವ ಕಾರಣಕ್ಕೂ ಹೋರಾಟ ನಿಲ್ಲಲ್ಲ ನ್ಯಾಯಯುತ ಹೋರಾಟ ಮುಂದುವರೆಯಲಿದೆ. ಇನ್ನೂ ಮುಂದೆ ತೀವ್ರ ಸ್ವರೂಪ ಪಡೆಯಲಿದೆ. ಲಿಂಗಾಯತ ವಿರೋಧಿ ಸಿಎಂ ಸಿದ್ದರಾಮಯ್ಯ ಎಂಬುದು ಅನುಮಾನ ಕಾಡುತ್ತಿದೆ. ಹಲ್ಲೆಗೆ ಒಳಗಾದ ಗಾಯಾಳುಗಳ ಮನೆಗೆ ನಾನೇ ನಿಮ್ಮ ಮನೆಗೆ ಬರ್ತಿನಿ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಂದರು.
ಮಾತುಕತೆಗೆ ಕರೆದಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಎಂ ಹೇಳಿದ್ರೆ ನಾವ್ಯಾಕೆ ಹೀಗೆ ಹೋರಾಟ ಮಾಡ್ತಾ ಇದ್ವಿ. ಲಕ್ಷ್ಮಿ ಹೆಬ್ಬಾಳ್ಕರ್ ಮೂಲಕ ಹೇಳಬಹದು ಇತ್ತು. ಈ ರೀತಿ ಸುಳ್ಳು ಹೇಳುವ ಪ್ರಯತ್ನ ಮಾಡಿದ್ರು. ಜಿಲ್ಲಾಧಿಕಾರಿ ಟ್ರ್ಯಾಕ್ಟರ್ ನಿರ್ಬಂಧ ಮಾಡಿದ್ರು ಹೀಗಾಗಿ ಹೈಕೋರ್ಟ್ ಮೊರೆ ಹೋಗಿದ್ವಿ. ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡೋ ಪ್ರಶ್ನೆಯೆ ಇಲ್ಲ ಎಂದು ಹೇಳಿದರು.
ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಚ್ ಮಾಡುವ ಯತ್ನ ಯಾಕೆ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದು ಬಿಡಬೇಕು, ಪಂಚಮಸಾಲಿ ಮೀಸಲಾತಿ ಹತ್ತಿಕ್ಕಲು ಕಂಡ ಕಂಡಲ್ಲಿ ಬ್ಯಾರಿಕೆಟ್ ಹಾಕಿದ್ರು.
ಲಿಂಗಾಯತರ ಮೇಲೆ ಹಲ್ಲೆ ಮಾಡಿದ್ದು, ಲಿಂಗಾಯತ ವಿರೋಧಿ ಸರ್ಕಾರ ಇದು, ಲಾಠಿಚಾರ್ಚ್ ಮೊದಲು ಮಾತುಕತೆ ಬನ್ನಿ ಎಂದು ಹೇಳಬೇಕಿತ್ತು. ಸೋಮವಾರದಿಂದ ಅಧಿವೇಶನ ಮುಗಿಯುವ ವರೆಗೆ ಧರಣಿ ಮಾಡುತ್ತೇವೆ ಎಂದು ಹೇಳಿದರು.
ಪೊಲೀಸರ ಹಲ್ಲೆ ಖಂಡಿಸಿ, ಮೀಸಲಾತಿಗೆ ಆಗ್ರಹಿಸಿ ಕೊಂಡಸಕೊಪ್ಪ ಬಳಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಹೊಟ್ಟೆ ಕಿಚ್ಚು, ಹಳೇಯ ಸೇಡಿನಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಲಾಠಿ ಚಾರ್ಜ್ ಗೆ ಸಿಎಂ ಆದೇಶ ಮಾಡಿಲ್ಲ ಎಂದರೆ. ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನಮ್ಮ ಸಮುದಾಯದ ಸಚಿವರು, ಶಾಸಕರು ರಾಜೀನಾಮೆ ಕೊಟ್ರೆ ಪ್ರಯೋಜನ ಇಲ್ಲ. ಎಲ್ಲಾ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಎಂದು ಶ್ರೀಗಳ ಆಗ್ರಹಿಸಿದರು.












Click it and Unblock the Notifications