ಯಡಿಯೂರಪ್ಪ ಅವರನ್ನು ಮೊದಲು ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಮಾಡಿಸಿದ್ದೇ ನಾನು: ಸತ್ಯ ಬಿಚ್ಚಿಟ್ಟು ಯತ್ನಾಳ್‌ ಕಿಡಿ

ಬೆಳಗಾವಿ, ಡಿಸೆಂಬರ್‌ 12: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ಸ್ಥಾನ ಕೈ ತಪ್ಪಿದ ಮೇಲೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹಾಗೂ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಪದೇ ಪದೇ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ.

ಹೌದು, ಸ್ವಪಕ್ಷದ ನಾಯಕರ ವಿರುದ್ಧವೇ ಬಸವನಗೌಡ ಪಾಟೀಲ್‌ ಯತ್ನಾಳ್‌ ವಾಗ್ದಾಳಿಯನ್ನ ಮುಂದುವರೆಸಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಸಾರ್ವಜನಿಕವಾಗಿ ಟೀಕಿಸಿದ್ದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮಠಾಧೀಶರ ಮುಂದೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Basangouda Patil Yatnal‌ Fierce Attack Against BS Yediyurappa And BY Vijayendra

ಬೆಳಗಾವಿಯಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಸವನಗೌಡ ಪಾಟೀಲ್‌ ಯತ್ನಾಳ್, ಯಡಿಯೂರಪ್ಪ ಅವರನ್ನು ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಬಳಿಕ ರಾಜ್ಯದ ಮುಖ್ಯಮಂತ್ರಿ ಮಾಡಿಸಿದ್ದೇ ನಾನು, ಅರುಣ್ ಜೇಟ್ಲಿ ಅವರು ತನ್ನನ್ನು ಬಿಜೆಪಿ ಸೇರುವಂತೆ ಆಹ್ವಾನಿಸಿದಾಗ ಅವರ ಮುಂದೆ ಈ ಷರತ್ತು ಇಟ್ಟೇ ಪಕ್ಷ ಸೇರಿದ್ದೆ ಎಂದು ಯತ್ನಾಳ್‌ ಸತ್ಯ ಬಿಚ್ಚಿಟ್ಟು ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ನಾನು ಅವರಿಗೆ ಇಷ್ಟೆಲ್ಲ ಉಪಕಾರ ಮಾಡಿದರೂ ತನಗೆ ಟಿಕೆಟ್ ವಂಚಿಸುವ ಕೆಲಸಕ್ಕೆ ತಂದೆ ಮಗ ಮುಂದಾಗಿದ್ದರು ಎಂದು ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ತಾನು ರ‍್ಯಾಲಿ ಮಾಡಿದಾಗ ಲಿಂಗಾಯತ ಐಪಿಎಸ್ ಅಧಿಕಾರಿಯಾಗಿದ್ದ ಸಂದೀಪ್ ಪಾಟೀಲ್ ಮುಖಾಂತರ ತಮ್ಮನ್ನು ಬಂಧಿಸುವ ಕುತಂತ್ರ ಮಾಡಿದ್ದೇ ವಿಜಯೇಂದ್ರ ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಮುಂದೆ ವಿಜಯೇಂದ್ರ ಅವರು ಹೇಳಿದ್ದಾರೆ.

Basangouda Patil Yatnal‌ Fierce Attack Against BS Yediyurappa And BY Vijayendra

ಇನ್ನೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಸೋಲಿಗೆ ಬಿ ವೈ ವಿಜಯೇಂದ್ರ ಅವರೇ ಕಾರಣ ಎಂಬ ಹೊಸ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಇದರ ಜೊತೆಗೆ ಮೀಸಲಾತಿ ಬಗ್ಗೆ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ನವರು ಯಾವ ಕಾಲಕ್ಕೂ ಮೀಸಲಾತಿ ಕೊಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೇರವಾಗಿ ಹೇಳಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಸ್ವಾಮೀಜಿ ಅವರ ಮುಂದೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+