Basangouda Patil Yatnal: ಸದನದಿಂದ ಹೊರ ಹಾಕುವಾಗ ಯತ್ನಾಳ್ ತೀವ್ರ ಅಸ್ವಸ್ಥ! ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು, ಜುಲೈ 19: ವಿಧಾನಸಭೆ ಸ್ಪೀಕರ್ ಪೀಠಕ್ಕೆ ‌ಅಗೌರವ ತೋರಿಸಿದ ಹಿನ್ನಲೆ ಸ್ವೀಕರ್‌ ಯು ಟಿ ಖಾದರ್‌ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದ್ದು, ಈ ವೇಳೆ ಬಿಜೆಪಿ ಶಾಸಕರನ್ನ ಹೊರ ಹಾಕುವ ವೇಳೆ ಬಿಜೆಪಿ ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌ ಅಸ್ವಸ್ಥಗೊಂಡಿದ್ದಾರೆ.

ಸ್ವೀಕರ್‌ ಯು ಟಿ ಖಾದರ್‌ ಆದೇಶದಂತೆ ವಿಧಾನಸಭೆ ಅಧಿವೇಶನದಿಂದ ಅಮಾನತು ಆದ ಬಿಜೆಪಿ ಸದಸ್ಯರನ್ನು ಮಾರ್ಷಲ್ ಗಳು ಹೊರ ಹಾಕಿದ್ದಾರೆ. ಈ ಸಂದರ್ಭ ತೀವ್ರ ನೂಕಾಟ, ತಳ್ಳಾಟ ಉಂಟಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾದ್ದಾರೆ. ಈ ವೇಳೆ ವೈದ್ಯರು ಬಂದು ಯತ್ನಾಳ್‌ ಅವರ ಆರೋಗ್ಯ ತಪಾಸಣೆ ಮಾಡಿದ್ದು, ಬಳಿಕ ಯತ್ನಾಳ್‌ ಅವರನ್ನು ವೀಲ್ ಚೇರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

Basangouda Patil Yatnal

ಬಿಜೆಪಿ ನಾಯಕರು ಹಾಗೂ ಮಾರ್ಷಲ್‌ ಗಳ ನಡುವೆ ನೂಕು ನುಗ್ಗಲು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರಕ್ತದೊತ್ತಡ ಹೆಚ್ಚಳ ಆಗುತ್ತಿದ್ದರಿಂದ ಗಾಳಿಯನ್ನು ಬೀಸುತ್ತಾ ಆಸ್ಪತ್ರೆಗೆ ರವಾನಿಸಿದ್ದು, ತಪಾಸಣೆ ಮಾಡಿದ ಬಳಿಕ ಆಸ್ಪತ್ರೆ ಸಿಬ್ಬಂದಿ ವರದಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಬಸವನಗೌಡ ಪಾಟೀಲ್‌ ಯತ್ನಾಳ್‌ ಮಾತ್ರವಲ್ಲದೇ ಶಾಸಕ ಆರ್‌. ಅಶೋಕ್‌ ಕೂಡ ಅಸ್ವಸ್ಥಗೊಂಡಿದ್ದಾರೆ. ಆರ್. ಅಶೋಕ್‌ ಕೂಡ ಲೋ ಬಿಪಿಯಿಂದಾಗಿ ಅಸ್ವಸ್ಥರಾಗಿ ಕುಳಿತಿದ್ದಾರೆ. ಇನ್ನು ಅವರಿಗೆ ಪ್ರತಿಭಟನೆಯ ವೇಳೆಯೇ ಇತರೆ ಶಾಸಕರು ಅವರಿಗೆ ಗಾಳಿಯನ್ನು ಬೀಸಿ, ನೀರನ್ನು ಕುಡಿಸಿದ ಆರೈಕೆ ಮಾಡಿದ್ದಾರೆ. ಇನ್ನು ವಿಧಾನಸಭಾ ಅಧಿವೇಶನದ ವೈದ್ಯರು ಸ್ಥಳಕ್ಕೆ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+