ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಪ್ಲಾನ್; ಭವಾನಿಗೆ ಹೊಳೆನರಸೀಪುರ, ರೇವಣ್ಣಗೆ ಯಾವ ಕ್ಷೇತ್ರ?
ಹಾಸನ ಕ್ಷೇತ್ರವನ್ನ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಜೆಡಿಎಸ್ ಗೆ ಎದುರಾಗಿದ್ದು, ಈ ಬಾರಿ ಹೆಚ್ ಡಿ ರೇವಣ್ಣ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಹಾಸನ,ಫೆಬ್ರವರಿ8: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ಅಭ್ಯರ್ಥಿಯ ಪಟ್ಟಿಯನ್ನ ಬಿಡುಗಡೆ ಮಾಡಿರುವ ದಳಪತಿಗಳಿಗೆ ಹಾಸನ ಕ್ಷೇತ್ರವೇ ದೊಡ್ಡ ಕಗ್ಗಂಟಾಗಿದೆ.
ಹೌದು, ಭಾವನಿ ರೇವಣ್ಣ ಅವರ ಈ ಬಾರಿ ಚುನಾವಣೆಯಲ್ಲಿ ಹಾಸನದಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ ಬಳಿಕ ಹಾಸನ ಜಿಲ್ಲೆಯ ಕ್ಷೇತ್ರದ ಆಯ್ಕೆ ಗೊಂದಲಕ್ಕೆ ಕಾರಣವಾಗಿದೆ. ಒಂದು ಕಡೆ ಹಾಸನ ಭದ್ರಕೋಟೆಯನ್ನ ಉಳಿಸಿಕೊಳ್ಳುವುದು ಸಹ ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಹಾಸನ ಕ್ಷೇತ್ರವನ್ನ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಜೆಡಿಎಸ್ ಗೆ ಎದುರಾಗಿದ್ದು, ಈ ಬಾರಿ ಹೆಚ್ ಡಿ ರೇವಣ್ಣ ಕ್ಷೇತ್ರ ಬದಲಾಯಿಸುತ್ತಾರೆ ಎಂಬ ವದಂತಿಗಳು ಹೆಚ್ಚಾಗಿವೆ.

ಹಾಸನದಿಂದ ರೇವಣ್ಣ, ಹೊಳೆನರಸೀಪುರದಿಂದ ಭವಾನಿ ರೇವಣ್ಣ ಸ್ಪರ್ಧೆ?
ಹಾಸನ ಜಿಲ್ಲೆಯನ್ನ ಭದ್ರಪಡಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಜೊತೆಗೂ ಈ ಬಗ್ಗೆ ರೇವಣ್ಣ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಾರಿ ಹಾಸನದಿಂದ ಹೆಚ್ ಡಿ ರೇವಣ್ಣ , ಹೊಳೆನರಸೀಪುರದಿಂದ ಭಾವನಿ ರೇವಣ್ಣ ಸ್ಪರ್ಧಿಸುತ್ತಾರೆ ಎನ್ನುವ ವದಂತಿಗಳು ಕೇಳಿ ಬಂದಿವೆ.

ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎ ಮಂಜು ಸ್ಪರ್ಧೆ!
ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್ ಪಕ್ಷವನ್ನ ತೊರೆಯುತ್ತಾರೆ ಎಂಬ ಸುಳಿವು ನೀಡಿದ ಬೆನ್ನಲ್ಲೇ, ಎ ಮಂಜು ಜೆಡಿಎಸ್ ಪಕ್ಷವನ್ನ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಅರಕಲಗೂಡು ಕ್ಷೇತ್ರಕ್ಕೆ ಮಾಜಿ ಸಚಿವ ಎ ಮಂಜು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಹಾಸನ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬೆಳವಣೆಗೆಗೆ ಕಾರಣವಾಗಿದೆ.

ಜೆಡಿಎಸ್ ಪಕ್ಷ ತೊರೆಯುತ್ತಾರಾ ಎ ಟಿ ರಾಮಸ್ವಾಮಿ?
ಅರಕಲಗೂಡು ಹಾಲಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಪಕ್ಷ ತೊರೆಯುವ ಸುಳಿವು ನೀಡಿದ್ದರು. ಇದೀಗ ಪಕ್ಷ ತೊರೆಯುವ ಮುನ್ನವೇ ಎ ಮಂಜು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿರುವುದನ್ನ ಗಮನಿಸಿದರೇ ಎ ಟಿ ರಾಮಸ್ವಾಮಿ ನಡೆ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಒಂದು ಕಡೆ ಕಾಂಗ್ರೆಸ್ ಕ್ಕೆ ಹೋಗುತ್ತಾರಾ ಎಂಬ ಚರ್ಚೆಗಳು ಜೋರಾಗಿದ್ದು, ಬಿಜೆಪಿ ಪಕ್ಷ ನಾಯಕ ಸಂಪರ್ಕದಲ್ಲಿದ್ದಾರೆ ಎಂಬ ಮಾತಗಳು ಕೇಳಿ ಬರುತ್ತಿವೆ. ಒಟ್ನಿಲಿ ಜೆಡಿಎಸ್ ಪಕ್ಷ ಬಿಡುವ ಸುಳಿವು ನೀಡಿರುವ ಎ ಟಿ ರಾಮಸ್ವಾಮಿ ಯಾವ ಪಕ್ಷದ ಕಡೆ ಹೋಗುತ್ತಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಖಾಸಗಿ ಹೋಟೆಲ್ ನಲ್ಲಿ ಸಹೋದರರ ರಹಸ್ಯ ಸಭೆ?
ಹಾಸನ ಟಿಕೆಟ್ ವಿಚಾರವೇ ದೊಡ್ಡ ಗೊಂದಲಕ್ಕೆ ಕಾರಣವಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ರಹಸ್ಯ ಸಭೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಒಕ್ಕಲಿಗ ಕೋಟೆಯನ್ನ ಈ ಬಾರಿ ಭದ್ರ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುವ ಮೂಲಕ ಹಲವು ಕ್ಷೇತ್ರದ ಅಭ್ಯರ್ಥಿ ಬದಲಾವಣೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications