ಬಿಜೆಪಿಯವರಿಗೆ ರಕ್ತದ ಜೊತೆ ಆಟ ಆಡಿ ಅಭ್ಯಾಸವಿದೆ: ರಾಜಕೀಯ ನಾಯಕರು ಮಕ್ಕಳು ಬಲಿಯಾಗಿಲ್ಲ: ಡಿ.ಕೆ. ಸುರೇಶ್

ಯಾರು ಬೇಕಾದ್ರೂ ಮುಖ್ಯಮಂತ್ರಿ ಆಗಬಹುದು, ಈ ಹಿಂದೆ ಬ್ರಾಹ್ಮಣ, ಬ್ರಾಹ್ಮಣೇತರರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.

ಹಾಸನ,ಫೆಬ್ರವರಿ8: ಬಿಜೆಪಿಯವರಿಗೆ ರಕ್ತದ ಜೊತೆ ಆಟ ಆಡಿ ಅಭ್ಯಾಸವಿದೆ. ಅನೇಕ ಯುವಕರನ್ನು ಬಲಿ ತೆಗೆದುಕೊಂಡಿರುವುದು ಬಿಜೆಪಿಯ ನಾಯಕರು, ಕೋಮು ದ್ವೇಷವನ್ನ ಬಿತ್ತುವಂತ ಪ್ರಯತ್ನದಲ್ಲಿ ಅಮಾಯಕರನ್ನ ಬಲಿ ಕೊಡುತ್ತಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ಕಿಡಿಕಾರಿದ್ದಾರೆ.

ಈ ಕುರಿತು ಹಾಸನದಲ್ಲಿ ಮಾತನಾಡಿದ ಅವರು, ನರಹಂತಕ ಸರ್ಕಾರ ಇದರೆ ಅದು ಸಿದ್ದರಾಮಯ್ಯ ಸರ್ಕಾರ ಎಂಬ ನಳೀನ್‌ಕುಮಾರ್ ಕಟೀಲ್ ಹೇಳಿಕಗೆ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಕೋಮು ದ್ವೇಷವನ್ನ ಬಿತ್ತುವಂತ ಪ್ರಯತ್ನದಲ್ಲಿ ಅಮಾಯಕರನ್ನ ಬಲಿ ಕೊಡುತ್ತಿದ್ದಾರೆ. ಇದರಿಂದ ರಾಜಕೀಯ ನಾಯಕರು, ಶಾಸಕರು,‌ಮಂತ್ರಿ ಮಕ್ಕಳು ಬಲಿಯಾಗಿಲ್ಲ. ಸಾಮಾನ್ಯ ಕಾರ್ಯಕರ್ತರು, ಬಡವರು ಪಕ್ಷಕ್ಕಾಗಿ ಹೋರಾಡುವವರನ್ನ ಗುರಿಯಾಗಿಟ್ಟು ಈ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಎಐಸಿಸಿಗೆ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ವಿಚಾರವಾಗಿ ಮಾತನಾಡಿ, ಅದು ಸುಳ್ಳಿನ ಫ್ಯಾಕ್ಟರಿ‌ ಒಂದಿದೆ, ಅದರಲ್ಲಿ‌ ಉತ್ಪತ್ತಿ ಆಗುತ್ತಿರುತ್ತೆ. ಇದಕ್ಕೆ ನಾವೇನು ಮಾಡೋಕಾಗಲ್ಲ. ಆ ಪತ್ರ ಸುಳ್ಳು, ಮಾಧ್ಯಮಗಳಲ್ಲಿ, ಕಾರ್ಯಕರ್ತರಲ್ಲಿ ಗೊಂದಲ‌ ಮೂಡಿಸಲು ಹೀಗೆ ಮಾಡಿದ್ದಾರೆ. ಇದು ಕೆಲವು ಪಕ್ಷಗಳ ಉದ್ದೇಶ, ಅದನ್ನ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಇದು ಜನಕ್ಕೂ ಅರ್ಥ ಆಗಿದೆ ಎಂದು ಹೇಳಿದರು.

Anyone Can Become Chief Minister Said MP DK Suresh

ಇನ್ನೂ ಹೊಳೆನರಸೀಪುರಕ್ಕೆ ಇಂದು ಹೊಸ ಅಧ್ಯಾಯ ಪ್ರಾರಂಭ ಆಗುವ ಶುಭದಿನ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ದಿನದಿಂದ ನಾಯಕತ್ವ ಇಲ್ಲ, ನಮಗೆ ರಕ್ಷಣೆ ಇಲ್ಲ, ಜನ ನೊಂದು ಬೆಂದಿದ್ದಾರೆ. ಹೋರಾಟದ‌ ಮುಖಾಂತರ ಏನೇ ಪ್ರಯತ್ನ ಮಾಡಿದ್ರು, ಭಯದ ವಾತಾವರದಲ್ಲಿ ಜೀವನ ನಡೆಸೋದನ್ನ ಈ ಕ್ಷೇತ್ರದಲ್ಲಿ ನಾನು ಕೇಳಿದ್ದೇನೆ ಎಂದರು.

ಡಿ.ಕೆ‌ ಶಿವಕುಮಾರ್ ಸಿದ್ದರಾಮಯ್ಯ ಎಲ್ಲಾ‌ ಸೇರಿ ಪ್ರಜಾಧ್ವನಿ ಕಾರ್ಯಕ್ರಮ ಮಾಡಿದ್ದೇವೆ. ಎಲ್ಲರೂ ಉತ್ಸಾಹ ತೋರಿದ್ದಾರೆ, ಅದಾದ ನಂತರ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಹಳ್ಳಿ‌ಹಳ್ಳಿಗಳಲ್ಲಿ ಕಾಂಗ್ರೆಸ್ ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ. ಇದರಿಂದ‌ ನಮ್ಮ ಪಕ್ಷವನ್ನ ಯಾವುದೇ ಷರತ್ತಿಲ್ಲದೇ ಬೆಂಬಲಿಸುತ್ತಿದ್ದಾರೆ. ಪೊಲೀಸ್, ಕಂದಾಯ ಇಲಾಖೆಯನ್ನ ಇಟ್ಟುಕೊಂಡು ಬೆದರಿಕೆ ನೀಡುತ್ತಿದ್ದಾರೆ. ಇದನ್ನು ತಪ್ಪಿಸಲು ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರಸ್ ಗೆ ಜನ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.

Anyone Can Become Chief Minister Said MP DK Suresh

ಕುಮಾರಸ್ವಾಮಿ ಬ್ರಾಹ್ಮಣ ಮುಖ್ಯಮಂತ್ರಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಸಂವಿಧಾನ ಬಹಳ ಗಟ್ಟಿಯಾಗಿದೆ. ಯಾರು ಬೇಕಾದ್ರೂ ಮುಖ್ಯಮಂತ್ರಿ ಆಗಬಹುದು, ಈ ಹಿಂದೆ ಬ್ರಾಹ್ಮಣ, ಬ್ರಾಹ್ಮಣೇತರರು ಮುಖ್ಯಮಂತ್ರಿ ಆಗಿದ್ದಾರೆ. ಯಾವುದೇ ಒಂದು ಜಾತಿಗೆ, ಕುಟುಂಬಕ್ಕೆ ಮುಖ್ಯಮಂತ್ರಿ ಹುದ್ದೆ ಸೀಮಿತವಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಹೇಳಿಕೆ‌ ಕೊಟ್ಟಿದ್ದಾರೆ, ಇವರ ನಾಟಕ ಹೆಚ್ಚು ದಿನ ನಡೆಯುವುದಿಲ್ಲ ಎಂದು ಲೇವಡಿ ಮಾಡಿದರು.

ನನಗೆ ಎ.ಮಂಜು ಬಗ್ಗೆ ಗೌರವವಿದೆ ಅವರು ಕ್ಷಣಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ, ಅವರ ಹೇಳಿಕೆ‌ಯನ್ನ ಸೀರಿಯಸ್ ಆಗಿ ತಗೋಳೋಕೆ ಅವರು ನಮ್ಮ ಪಕ್ಷದಲ್ಲಿಲ್ಲ. ಅವರು ನಮ ಪಕ್ಷ ಬಿಟ್ಟು ಹೋಗಿ ಬಹಳಾ ದಿನ ಆಗಿದೆ. ಲೋಕೆಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಜನತಾದಳದ ವಿರುದ್ಧ ಹೋರಾಟ ಮಾಡಿದಂತವರು. ದೇವೇಗೌಡರನ್ನ, ರೇವಣ್ಣರನ್ನ ಕೇವಲವಾಗಿ ಮಾತಾಡಿದ್ದಂತವರು. ಈಗ ಅವರ ಹೇಳಿಕೆ ಬದಲಾಗಿದೆ, ಅವರನ್ನೇ ಪ್ರಶ್ನಿಸಬೇಕು ಎಂದ ಡಿ.ಕೆ.ಸುರೇಶ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+