ಅಂಬಿಕಾಪತಿ 42 ಕೋಟಿ ಸಂಪಾದನೆ ಮಾಡಿಲ್ಲ: ಐಟಿ ದಾಳಿ ಕುರಿತು ಮುನಿರತ್ನ ಹೇಳಿದ್ದೇನು?
ಬೆಂಗಳೂರು,ಅಕ್ಟೋಬರ್ 13: ಮಾಜಿ ಕಾರ್ಪೋರೇಟರ್ ಅಂಬಿಕಾಪತಿ ಅವರ ಬಗ್ಗೆ ನನಗೆ ಚನ್ನಾಗಿ ಗೊತ್ತಿದೆ. ಅಂಬಿಕಾಪತಿ ಜೀವನದಲ್ಲಿ 42 ಕೋಟಿ ಸಂಪಾದನೆ ಮಾಡಿಲ್ಲ, ಮಾಡಲೂ ಆಗುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಂಬಿಕಾಪತಿಯನ್ನ ನಾನು ಗುತ್ತಿಗೆದಾರ ಆದಾಗಿನಿಂದ ನೋಡುತ್ತಿದ್ದೇನೆ, ಅವರು 50 ಸಾವಿರ, ಒಂದು ಲಕ್ಷ ಗುತ್ತಿಗೆದಾರರು ಅವರು, ಹಂತ ಹಂತವಾಗಿ ಐದು ಲಕ್ಷ, ಹತ್ತು ಲಕ್ಷಕ್ಕೆ ಕೆಲಸ ಮಾಡಿಕೊಂಡು ಬಂದವರು. ಮಾಜಿ ಕಾರ್ಪೋರೇಟರ್ ಗುತ್ತಿಗೆದಾರರ ವೃತ್ತಿ ಬಿಟ್ಟು 20 ವರ್ಷವಾಗಿದೆ. ಇಡೀ ಕುಟುಂಬ ನನಗೆ ಚನ್ನಾಗಿ ಗೊತ್ತು. ಯಾವುದೇ ಕಾರಣಕ್ಕೂ ಇಷ್ಟೊಂದು ಹಣ ಸಂಪಾದನೆ ಮಾಡಿಲ್ಲ. 40 ವರ್ಷದ ಅಸ್ತಿ ನೋಡಿದರು ಇಷ್ಟೊಂದು ಹಣ ಸಂಪಾದನೆ ಆಗಲ್ಲ ಎಂದು ಹೇಳಿದರು.

ಬೆಂಗಳೂರು ಇಷ್ಟೊಂದು ದೊಡ್ಡದಾಗಿ ಬೆಳೆದೆ ಇರಲಿಲ್ಲ,ಆ ಕಾಲದಲ್ಲಿಯೇ ಮನೆ ಕಟ್ಟಿದ್ರು, 42 ಕೋಟಿ ಸಿಕ್ಕಿದೆ ಅಂದ್ರೆ, ಅದು ನಂಬಲು ಸಾಧ್ಯವಾಗದೇ ಇರುವ ವಿಷಯ. ಆ ಗುತ್ತಿಗೆದಾರರ ಸಂಘ, ಕಾಂಗ್ರೆಸ್ ಏಜೆಟ್ಸ್ ಸಂಘದಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಗುತ್ತಿಗೆದಾರರ ಸಂಘ ಅವರ ಬಳಿ ಹಿಡಿತದಲ್ಲಿದೆ ಎನ್ನುವುದಕ್ಕೆ ಇದೊಂದೆ ಸಾಕ್ಷಿ. ಇದು ಅಂಬಿಕಾಪತಿ ಹಣ ಅಲ್ಲವೇ ಅಲ್ಲ.
ಗುತ್ತಿಗೆದಾರರ ಸಂಘದ ಹೆಸರು ಬದಲಾವಣೆ ಮಾಡಿ, ಕಾಂಗ್ರೆಸ್ ಗುತ್ತಿಗೆದಾರರ ಸಂಘ ಎಂದು ಇಟ್ಟರೇ ಸಾಕು ಎಂದು ವ್ಯಂಗ್ಯವಾಡಿದರು. ಇದು ಬೆಂಗಳೂರು ಹಣ. ಐದು ರಾಜ್ಯಗಳಿಗೂ ಈ ಹಣ ಕಳುಹಿಸಿ ಕೊಡಬೇಕು. ಒಂದೊಂದು ರಾಜ್ಯಕ್ಕೂ ಒಂದೊಂದು ಸಾವಿರ ಕೋಟಿ ಎಂದರೂ ಹತ್ತು ಸಾವಿರ ಕೊಡಿ ಕೊಡಬೇಕು. 42 ಸಾವಿರ ಕೋಟಿ ಏನು ಅಲ್ಲ, ಇನ್ನೂ ತುಂಬಾ ಹೋಗ್ಬೇಕು, ಪಂಚರಾಜ್ಯಗಳ ಚುನಾವಣೆ ಈಗ ಘೋಷಣೆಯಾಗಿದೆ. ಬೆಂಗಳೂರಿನ ಎಲ್ಲಾ ಇಲಾಖೆಯಿಂದ 4000 ಕೋಟಿ ಸಂಗ್ರಹ ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದರು. ಇನ್ನೂ 50000 ಹಾಗೂ 1 ಲಕ್ಷ ದುಡಿಯುತ್ತಿದ್ದ ವ್ಯಕ್ತಿ ಕೋಟಿ ಸಂಪಾದನೆ ಮಾಡಲು ಸಾಧ್ಯವಿಲ್ಲ. 400 ಕೋಟಿ ಕೆಲಸ ಮಾಡಬೇಕು ಇಷ್ಟೊಂದು ಹಣ ಸಂಪಾದನೆ ಮಾಡಲು ಎಂದು ಹೇಳಿದರು.
ಕೇಂದ್ರದ ಎಐಸಿಸಿಗೆ ಹೋಗಬೇಕಿದ್ದ ಹಣ: ಈಶ್ವರಪ್ಪ
ಇನ್ನೂ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ ಐಟಿ ದಾಳಿ ಸಂಬಂಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಈ ಹಣವನ್ನು ಕೇಂದ್ರದ ಎಐಸಿಸಿಗೆ ಹೋಗಬೇಕಿದ್ದ ಹಣ ಎಂದು ಹೇಳಿದರು.

ಕಾಂಗ್ರೆಸ್ ಗುತ್ತಿಗೆದಾರನ ಮನೆಮೇಲೆ ಐಟಿ ದಾಳಿ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಭಾವಿಕವಾಗಿ ಐಟಿ ದಾಳಿಯನ್ನು ಸಿದ್ದರಾಮಯ್ಯ, ಡಿಕೆಶಿ ಖಂಡನೆ ಮಾಡಬೇಕಿತ್ತು. ಆದ್ರೆ ಅವರು ಖಂಡನೆ ಮಾಡ್ತಿಲ್ಲ. ಏಕೆಂದರೆ ಈ ಹಣ ತಮ್ಮದು ಎಐಸಿಸಿಗೆ ಕಳಿಸಬೇಕಿದ್ದ ಹಣ. ಕಾಂಗ್ರೆಸ್ ನವರಿಗೂ ಗುತ್ತಿದೆದಾರರಿಗೂ ನೇರ ಸಂಬಂಧ ಇದೆ ಎಂದು ತಿಳಿಸಿದರು.












Click it and Unblock the Notifications