ಗರ್ಭಿಣಿ ಹೊಟ್ಟೆಯಲ್ಲಿ 3 ಅಡಿ ಬಟ್ಟೆ, ವೈದ್ಯರ ಎಡವಟ್ಟಿಗೆ ಶಿಕ್ಷೆ ಗ್ಯಾರಂಟಿ!

'ವೈದ್ಯೋ ನಾರಾಯಣ ಹರಿ' ಅಂತಾ ಭಾರತೀಯರು ವೈದ್ಯರನ್ನು ಗೌರವಿಸುತ್ತಾರೆ. ಹಾಗೇ ದೇವರಿಗೆ ವೈದ್ಯರನ್ನು ಹೋಲಿಕೆ ಕೂಡ ಮಾಡುತ್ತಾರೆ. ಯಾಕಂದ್ರೆ ವೈದ್ಯರು ಜನರ ಜೀವ ಉಳಿಸುವ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಂದು ಖಾಸಗಿ ಆಸ್ಪತ್ರೆ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿ 3 ಅಡಿ ಉದ್ದದ ಬಟ್ಟೆಯನ್ನೇ ತುರುಕಿದ ಆರೋಪ ಕೇಳಿಬಂದಿದೆ!

ಆರೋಗ್ಯವೇ ಭಾಗ್ಯ ಅಂತಾರೆ ಹಿರಿಯರು, ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಕೂಡ ಮಾಫಿಯಾ ಆಗಿದೆ ಎಂಬ ಆರೋಪ ಕೇಳಿಬರುತ್ತದೆ. ಯಾಕಂದ್ರೆ ಆರೋಗ್ಯ ಕ್ಷೇತ್ರದ ಮೇಲೆ ಹೂಡಿಕೆ ಮಾಡಿ, ಭಾರಿ ಲಾಭ ಮಾಡಲು ಕೆಲವರು ಪ್ರಯತ್ನ ಮಾಡುತ್ತಾರೆ. ಇದು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳನ್ನು ದುಡ್ಡಿಗಾಗಿ ಬಳಸಿಕೊಳ್ಳುವ ದಂಧೆಯೇ ಆಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯ ಹೊಟ್ಟೆ ಒಳಗೆ ಬಟ್ಟೆ ಬಿಟ್ಟು, ಭಾರಿ ಎಡವಟ್ಟು ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಸುಮಾರು 3 ಅಡಿ ಉದ್ದದ ಬಟ್ಟೆ ಮಹಿಳೆ ಹೊಟ್ಟೆಯಲ್ಲಿ ಯಾಕೆ ಇತ್ತು? ಬನ್ನಿ ತಿಳಿಯೋಣ.

Allegedly Doctors Left Cloth In Woman s Stomach

ಸರ್ಕಾರಿ ಆಸ್ಪತ್ರೆಯಲ್ಲೇ ಎಡವಟ್ಟು!

ಅಂದಹಾಗೆ ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಒಬ್ಬರಿಗೆ ಹೆರಿಗೆ ಆಗಿತ್ತು. ನಾರ್ಮಲ್ ಡೆಲಿವರಿ ಆಗಿ, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನವರಾದ ಮಹಿಳೆ ಚಂದ್ರಿಕಾ ಎಂಬುವವರು ಹೀಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿ ಮಾಡಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೀಗೆ ನಾರ್ಮಲ್ ಡೆಲಿವರಿ ಆದ ನಂತರ ಮಹಿಳೆಗೆ ಹೆಚ್ಚು ರಕ್ತಸ್ರಾವ ಆಗಿದೆ. ಆಗ ರಕ್ತಸ್ರಾವ ನಿಲ್ಲಿಸುವುದಕ್ಕೆ ಅಂತಾ ವೈದ್ಯರು ಮಹಿಳೆಯ ಗುಪ್ತಾಂಗಕ್ಕೆ ಬಟ್ಟೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಂತರ ಆ ಬಟ್ಟೆಯನ್ನ ವೈದ್ಯರು ಮಹಿಳೆಯ ದೇಹದಿಂದ ಹೊರಗೆ ತೆಗೆದೇ ಇಲ್ಲ.

ವೈದ್ಯ ಅಧಿಕಾರಿಗಳಿಗೆ ಶಿಕ್ಷೆ ಗ್ಯಾರಂಟಿ?

ಮೇ 5ರಂದು ಮಹಿಳೆಗೆ ಹೆರಿಗೆ ಆಗಿತ್ತು, ಅಂದು ಮಹಿಳೆಯ ಗುಪ್ತಾಂಗದಲ್ಲಿ ರಕ್ತಸ್ರಾವ ಆಗದ ರೀತಿ ಬಟ್ಟೆ ಇಟ್ಟಿದ್ದರು. ಆದರೆ ಆ ಬಟ್ಟೆಯನ್ನು ಅವರು ಹೊರಗೆ ತೆಗೆದೇ ಇಲ್ಲ. ಕೊನೆಗೆ ಮಹಿಳೆ ಮನೆಯವರು ಮಹಿಳೆ ಹೊಟ್ಟೆ ಪರಿಶೀಲನೆ ಮಾಡುವಾಗ ಬಟ್ಟೆ ಇರುವುದು ಕಂಡಿದೆ. ಆ ತಕ್ಷಣವೇ ವೈದ್ಯರನ್ನು ಸಂಪರ್ಕ ಮಾಡಿದ್ದು, ಸುಮಾರು 3 ಅಡಿ ಉದ್ದದ ಬಟ್ಟೆ ಹೊರ ತೆಗೆದಿದ್ದಾರೆ. ಇದೀಗ ಸಂತ್ರಸ್ತ ಮಹಿಳೆಯ ಪತಿ ಜಿಲ್ಲಾ ಸರ್ಜನ್‌ಗೆ ಈ ಬಗ್ಗೆ ದೂರು ನೀಡಿ, ಸರ್ಕಾರಿ ಆಸ್ಪತ್ರೆಯ ಎಡವಟ್ಟು ಬಯಲು ಮಾಡಿದ್ದಾರೆ. ಹೀಗಾಗಿ ತಪ್ಪು ಮಾಡಿದ್ದ ವೈದ್ಯ ಅಧಿಕಾರಿಗಳಿಗೆ ಶಿಕ್ಷೆ ಆಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+