Ramya: ‘ನಿಮ್ಮಂತೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ’: SM ಕೃಷ್ಣ ಕುರಿತು ನಟಿ ರಮ್ಯಾ ಭಾವುಕ ಪೋಸ್ಟ್
ಬೆಂಗಳೂರು, ಡಿಸೆಂಬರ್ 11: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನವು ಇಡೀ ಕರುನಾಡಿನ ಜನತೆಗೆ ತುಂಬಲಾರದಂತಹ ನಷ್ಟವಾಗಿದೆ. ಕೃಷ್ಣ ಅವರ ಅಗಲಿಕೆಗೆ ಹಲವರು ರಾಜಕೀಯ ನಾಯಕರು ಹಾಗೂ ಚಿತ್ರಂಗವೂ ಸಹ ಕಂಬನಿ ಮಿಡಿದಿದ್ದಾರೆ.
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆಪ್ತ ವಲಯದಲ್ಲಿದ್ದರು. ರಮ್ಯಾ ಅವರು ರಾಜಕೀಯ ಪ್ರವೇಶ ಮಾಡಿದಾಗ ಅವರಿಗೂ ಮಾರ್ಗದರ್ಶನವನ್ನು ಕೃಷ್ಣ ಅವರು ಮಾಡಿದ್ದರು. ಇದೀಗ ಅಗಲಿದ ಹಿರಿಯ ಮುತ್ಸಧಿ ಬಗ್ಗೆ ನಟಿ ರಮ್ಯಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿದ್ದು,ʻʻಒಬ್ಬ Statesman ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು... ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.. ಎಲ್ಲದಕ್ಕಾಗಿ ಧನ್ಯವಾದಗಳು... ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್‌ಫ್ರೆಂಡ್ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್ ಎಮೊಜಿ ಹಾಕಿದ್ದಾರೆ.
ಮಂಗಳವಾರ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟಿ ರಮ್ಯಾ ಅವರು ಬೆಂಗಳೂರಿನ ಸದಾಶಿವನಗರಕ್ಕೆ ಆಗಮಿಸಿ ಎಸ್. ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು, ನಾನು ಈ ಸ್ಥಿತಿಯಲ್ಲಿ ಮಾತನಾಡಲು ಆಗಲ್ಲ ಎಂದು ತಿಳಿಸಿ ಅಲ್ಲಿಂದ ತೆರಳಿದ್ದರು.
ಕೃಷ್ಣ ಅವರನ್ನ ನೋಡಿ ನಾವು ಕಲಿಯಬೇಕು: ಡಿಕೆ ಶಿವಕುಮಾರ್
ಎಸ್.ಎಂ ಕೃಷ್ಣ ಅವರ 92 ವರ್ಷಗಳ ಶಿಸ್ತು, ವರ್ಣರಂಜಿತ ಜೀವನ ನೋಡಿ ನಾವೆಲ್ಲರೂ ಕಲೆಯಬೇಕಾಗಿರುವುದು ಬೇಕಾದಷ್ಟಿದೆ. ಅವರ ಶರೀರ ನಮ್ಮ ಜತೆ ಇಲ್ಲದಿರಬಹುದು, ಆದರೆ ಅವರ ಮಾರ್ಗದರ್ಶನ ಹಾಗೂ ಸಾಧನೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನನ್ನ ರಾಜಕಾರಣದ ಬದುಕಿನಲ್ಲಿ ಕೃಷ್ಣ ಅವರು ನನಗೆ ತಂದೆಯಂತೆ ಮಾರ್ಗದರ್ಶನ ನೀಡಿದ್ದಾರೆ. ನನ್ನನ್ನು ಪೋಷಿಸಿ ಇಲ್ಲಿವರೆಗೂ ತಂದು ನಿಲ್ಲಿಸಿದ್ದಾರೆ. ವೀರಪ್ಪ ಮೋಯ್ಲಿ ಅವರು ನನಗೆ ವಿದ್ಯಾರ್ಥಿ ನಾಯಕನಾಗಿದ್ದಾಗ ಟಿಕೆಟ್ ನೀಡಿದರು. ಬಂಗಾರಪ್ಪ ಅವರು ತಮ್ಮ ಮಂತ್ರಿಮಂಡಲದಲ್ಲಿ ನನ್ನನ್ನು ಮಂತ್ರಿ ಮಾಡಿದರು.
ರಾಜಕೀಯದ ಆರಂಭದ ದಿನಗಳಲ್ಲಿ ನಾನು ಎಸ್.ಎಂ ಕೃಷ್ಣ ಅವರ ಜತೆ ಇದ್ದವನಲ್ಲ. ಬಂಗಾರಪ್ಪನವರು ಪಕ್ಷ ಬಿಡುವ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂದು ಕೇಳಿದಾಗ, ಅವರೇ ಎಸ್.ಎಂ ಕೃಷ್ಣ ಅವರ ಬಳಿ ಹೋಗು ಎಂದು ನನಗೆ ಹೇಳಿದರು. ಆಗ ಎಸ್.ಎಂ ಕೃಷ್ಣ ಅವರ ಜತೆ ನನ್ನ ರಾಜಕಾರಣ ಆರಂಭವಾಯಿತು. ನಾನು, ಸಿ.ಎಂ. ಲಿಂಗಪ್ಪ, ಜಯಚಂದ್ರ, ನಫೀಜ್, ಶಿವಮೂರ್ತಿ ಅವರು ತಿಂಗಳುಗಟ್ಟಲೆ ದೆಹಲಿಯಲ್ಲಿ ಬೀಡುಬಿಟ್ಟು ಕೃಷ್ಣ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಏನು ಮಾಡಿದ್ದೇವೆ ಎಂದು ನಮಗೆ ಮಾತ್ರ ಗೊತ್ತು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಅನೇಕರು ನಕ್ಕರು.
ಎಸ್.ಎಂ ಕೃಷ್ಣ ಅವರು ಸೋತಾಗ ರಾಜ್ಯಸಭೆಗೆ ಕಳುಹಿಸಲು ಏನೆಲ್ಲಾ ನಡೆಯಿತು, ಸಂಪುಟ ಹೇಗೆ ರಚನೆಯಾಯಿತು ಎಂದು ಹೇಳಲು ಸಮಯ ಬೇಕಾಗುತ್ತದೆ. ಅವರು ಮುಖ್ಯಮಂತ್ರಿಯಾದಾಗ ಮಂತ್ರಿಮಂಡಲದಲ್ಲಿ ಯಾರಿರಬೇಕು ಎಂದು ಹೆಸರುಗಳನ್ನು ನಾನು ಬರೆದೆ. ಮಲ್ಲಿಕಾರ್ಜುನ ಖರ್ಗೆ ಅವರು ಆರು ಜನರನ್ನು ಸೇರಿಸಿದ್ದೀಯಾ ಎಂದು ನನಗೆ ಬೈದರು. ಆಗ ಪರಮೇಶ್ವರ್ ಅವರು ಸಂಪುಟದಲ್ಲಿ ಇರಲಿಲ್ಲ. ಆಗ ವೇಣುಗೋಪಾಲ್ ಅವರ ಬಳಿ ಎರಡನೇ ಹಂತದ ನಾಯಕರನ್ನು ಬೆಳೆಸಬೇಕು ಎಂದು ಕೇಳಿದೆ. ಆಗ ಅವರು ರಂಗನಾಥ್, ಖರ್ಗೆ ಅವರು ಇದ್ದಾರೆ. ಇನ್ನೊಬ್ಬರನ್ನು ಹೇಗೆ ಸೇರಿಸಲು ಸಾಧ್ಯ ಎಂದು ಕೇಳಿದರು. ನನಗೆ ಅವಕಾಶ ನೀಡಬೇಕು ಎಂದು ಮಂತ್ರಿಮಂಡಲಕ್ಕೆ ಸೇರಿಸಲಾಯಿತು. ನಂತರ ಅನೇಕ ವಿದ್ಯಮಾನಗಳು ನಡೆಯಿತು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications